ನವದೆಹಲಿ: ನ್ಯೂಜಿಲೆಂಡ್ (New Zealand) ತಂಡ, ಮೂರನೇ ಪಂದ್ಯವನ್ನು (IND vs NZ) ಗೆಲ್ಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಎರಡು ಮತ್ತು ಮೂರನೇ ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಕಿವೀಸ್ ಇದೇ ಮೊದಲ ಬಾರಿ ಭಾರತದ ನೆಲದಲ್ಲಿ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತು. ಕೊನೆಯ ಎರಡೂ ಪಂದ್ಯಗಳಲ್ಲಿ ಡ್ಯಾರಿಲ್ ಮಿಚೆಲ್ (Daryl Mitchell) ಶತಕಗಳನ್ನು ಬಾರಿಸಿದರು ಹಾಗೂ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಅಂದ ಹಾಗೆ ನ್ಯೂಜಿಲೆಂಡ್ ತಂಡ ಈ ಸರಣಿಯನ್ನು ಯಾವ ಆಟಗಾರನನ್ನು ಟಾರ್ಗೆಟ್ ಮಾಡಿತ್ತು ಎಂಬ ಬಗ್ಗೆ ಡ್ಯಾರಿಲ್ ಮಿಚೆಲ್ ಬಹಿರಂಗಪಡಿಸಿದ್ದಾರೆ.
ಮೊದಲನೇ ಏಕದಿನ ಪಂದ್ಯದಲ್ಲಿ ಡ್ಯಾರಿಲ್ ಮಿಚೆಲ್ 84 ರನ್ ಕಲೆ ಹಾಕಿದ್ದರು. ನಂತರ ಎರಡನೇ ಪಂಂದ್ಯದಲ್ಲಿ ಅಜೇಯ 131 ರನ್‌ಗಳು ಹಾಗೂ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ 137 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಒಟ್ಟಾರೆ ಅವರು ಈ ಸರಣಿಯಲ್ಲಿ 176.00ರ ಸರಾಸರಿಯಲ್ಲಿ 352 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಂದ ಹಾಗೆ ಈ ಸರಣಿಯಲ್ಲಿ ಭಾರತ ತಂಡಕ್ಕೆ ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್ ಕೀ ಬೌಲರ್ ಆಗಿದ್ದರು. ಆದರೆ ಈ ಸರಣಿಯಲ್ಲಿ ಕುಲ್ದೀಪ್ ಯಾದವ್ ಅವರನ್ನು ಕಿವೀಸ್ ಬ್ಯಾಟರ್‌ಗಳು ಮೆಟ್ಟಿ ನಿಂತಿದ್ದರು.
ನ್ಯೂಜಿಲ್ಯಾಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ
ಮೂರನೇ ಏಕದಿನ ಪಂದ್ಯದ ಬಳಿಕ ಮಾತನಾಡಿದ ಡ್ಯಾರಿಲ್ ಮಿಚೆಲ್, "ಕುಲ್ದೀಪ್ ಯಾದವ್ ವಿಶ್ವ ದರ್ಜೆಯ ಬೌಲರ್. ಈ ಕಾರಣದಿಂದಲೇ ಅವರ ಮೇಲೆ ಒತ್ತಡ ಹೇರಲು ನಾವು ಪ್ರಯತ್ನ ನಡೆಸಿದೆವು. ಅವರು ಚೆನ್ನಾಗಿ ಬೌಲ್ ಮಾಡುತ್ತಿದ್ದಾಗ, ಅವರು ಎಲ್ಲವನ್ನೂ ಸರಿಯಾಗಿ ಸೆಟ್ ಮಾಡುತ್ತಿರುತ್ತಾರೆ. ಅವರು ಬದಿಯಲ್ಲಿ ಚೆಂಡನ್ನು ಸ್ಪಿನ್ ಮಾಡಬಲ್ಲರು. ಭಾರತ ತಂಡಕ್ಕೆ ಭವಿಷ್ಯದಲ್ಲಿ ಕುಲ್ದೀಪ್ ಯಾದವ್ ಪ್ರಧಾನ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್ ಬಗ್ಗೆ ಶುಭಮನ್ ಗಿಲ್ ಸ್ಪಷ್ಟ ಉತ್ತರ
ಭಾರತ ತಂಡದ ಬೌಲಿಂಗ್ ನಿರ್ಧಾರದ ಬಗ್ಗೆ ಮಿಚೆಲ್ ಅಚ್ಚರಿ
ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದರ ಬಗ್ಗೆ ಕಿವೀಸ್ ಬ್ಯಾಟ್ಸ್‌ಮನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಟಾಸ್ ಗೆದ್ದಿದ್ದರೆ ನಾವು ಕೂಡ ಇದನ್ನೇ ಮಾಡುತ್ತಿದ್ದೆವು. ಒಂದು ತಡವಾಗಿ ಇಬ್ಬನಿ ಬಂದಿದ್ದರೆ, ಚೆಂಡಿನ ಮೇಲೆ ನಿಯಂತ್ರಣ ಸಾದಿಸಲು ಕಠಿಣವಾಗುತ್ತಿತ್ತು. ಪ್ರವಾಸಿ ತಂಡವಾಗಿ ನಮಗೆ ಸ್ಥಳೀಯ ಕಂಡೀಷನ್ಸ್ ಬಗ್ಗೆ ನಮಗೆ ಜಾಸ್ತಿ ಗೊತ್ತಿರುವುದಿಲ್ಲ. ಆದರೂ ಇಲ್ಲಿನ ಕಂಡೀಷನ್ಸ್ ಬಗ್ಗೆ ಅಂದಾಜಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತೇವೆ," ಎಂದು ಡ್ಯಾರಿಲ್ ಮಿಚೆಲ್ ತಿಳಿಸಿದ್ದಾರೆ.
ಗ್ಲೆನ್ ಫಿಲಿಪ್ಸ್ ಜೊತೆಯಾಟದ ಬಗ್ಗೆ ಮಿಚೆಲ್ ಹೇಳಿಕೆ
ಡ್ಯಾರಿಲ್ ಮಿಚೆಲ್ ಜೊತೆಗೆ ಗ್ಲೆನ್ ಫಿಲಿಪ್ಸ್ ಕೂಡ 106 ರನ್ ಗಳಿಸಿ ಶತಕವನ್ನು ಬಾರಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು, "ಗ್ಲೆನ್ ಫಿಲಿಪ್ಸ್ ಅವರ ಜೊತೆ ನಾವು ವಿಭಿನ್ನ ಕೋನಗಳಲ್ಲಿ ಆಡಿದ್ದೆವು ಹಾಗೂ ಜೊತೆಯಾಟದಲ್ಲಿ ನಾವು ಚೆನ್ನಾಗಿ ಆಡಿದ್ದೇವೆ. ಅವರು ಚೆನ್ನಾಗಿ ಓಡುತ್ತಾರೆ, ಹಾಗಾಗಿ ನಾನು ಅವರಿಗಿಂತ ಮುಂದೆ ಇರಲು ಯಾವಾಗಲೂ ಬಯಸುತ್ತಿದ್ದೆ, ಇದು ನನಗೆ ಸವಾಲುದಾಯಕವಾಗಿತ್ತು. ಆರಂಭದಲ್ಲಿ ನಾವು ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದೆವು, ಹಾಗಾಗಿ ನಾವು ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡ ಹೇರಲು ಪ್ರಯತ್ನಿಸಿದೆವು," ಎಂದು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಹೇಳಿದ್ದಾರೆ.