IND vs PAK: ಟಾಸ್ ವೇಳೆ ರವಿ ಶಾಸ್ತ್ರಿ ಜೊತೆ ಮಾತನಾಡಲು ಸಲ್ಮಾನ್ ಆಘಾ ನಿರಾಕರಣೆ!
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2025ರ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿತ್ತು. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು ಟಾಸ್ ಕ್ರಿಕೆಟ್ ನಿರೂಪಕ ರವಿ ಶಾಸ್ತ್ರಿ ಬಳಿಕ ಮಾತನಾಡಲು ನಿರಾಕರಿಸಿದ್ದಾರೆ. ಹಾಗಾಗಿ ಪಾಕ್ ನಾಯಕನನ್ನು ವಖಾರ್ ಯೂನಿಸ್ ಸಂದರ್ಶನ ಮಾಡಿದ್ದಾರೆ.

ರವಿ ಶಾಸ್ತ್ರಿ ಜೊತೆ ಮಾತನಾಡಲು ನಿರಾಕರಿಸಿದ ಪಾಕ್ ನಾಯಕ ಸಲ್ಮಾನ್ ಆಘಾ. -

ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವೆ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಹಲವು ವಿವಾದಗಳು ಉಂಟಾಗಿವೆ. ಲೀಗ್ ಹಂತದ ಮೊದಲನೇ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav), ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಸೇರಿದಂತೆ ಎದುರಾಳಿ ಆಟಗಾರರಿಗೆ ಶೇಕ್ ಹ್ಯಾಂಡ್ ಕೊಡಲು ನಿರಾಕರಿಸಿದ ಬಳಿಕ ದೊಡ್ಡ ವಿವಾದ ಉಂಟಾಗಿತ್ತು. ಸೂಪರ್-4ರ ಪಂದ್ಯದಲ್ಲಿಯೂ ಭಾರತ ತಂಡ ಶೇಕ್ ಹ್ಯಾಂಡ್ ನೀಡಿರಲಿಲ್ಲ. ಇದೀಗ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾ ಕಪ್ ಫೈನಲ್‌ನಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
2025ರ ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ತಂಡ, ಪಾಕಿಸ್ತಾನ ವಿರುದ್ಧ ಆಡಬಾರದೆಂದು ಆಗ್ರಹಗಳು ಕೇಳಿ ಬಂದಿದ್ದವು. ಪೆಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಎದುರು ಆಡದೆ ಟೀಮ್ ಇಂಡಿಯಾ ತಿರುಗೇಟು ನೀಡಬೇಕೆಂಬ ಮಾತುಗಳು ಕೇಳಿ ಬಂದಿದ್ದವು. ಆದರೂ ಪಾಕಿಸ್ತಾನ ವಿರುದ್ದ ಭಾರತ ತಂಡ ಆಡಿತ್ತು. ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಈ ವೇಳೆ ಸೂರ್ಯಕುಮಾರ್ ಯಾದವ್ ಎದುರಾಳಿ ಆಟಗಾರರಿಗೆ ಹ್ಯಾಂಡ್ ಶೇಕ್ ನೀಡಲು ನಿರಾಕರಿಸಿದ್ದರು.
IND vs PAK: ಕುಲ್ದೀಪ್ ಯಾದವ್ ಸ್ಪಿನ್ ಮೋಡಿ, 146 ರನ್‌ಗಳಿಗೆ ಪಾಕಿಸ್ತಾನ ಆಲ್‌ಔಟ್!
ಇದರಿಂದ ಪಾಕಿಸ್ತಾನ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸಿತ್ತು. ಇದಾದ ಬಳಿಕ ಅಂದಿನ ಪಂದ್ಯದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ಭಾರತ ತಂಡಕ್ಕೆ ಬೆಂಬಲ ನೀಡಿದ್ದಾರೆಂದು ಆರೋಪಿಸಿ ಪಾಕಿಸ್ತಾನ, ಐಸಿಸಿಗೆ ದೂರು ನೀಡಿತ್ತು ಹಾಗೂ ಪೈಕ್ರಾಫ್ಟ್ ಅವರನ್ನು ನಮ್ಮ ಪಂದ್ಯಗಳಿಗೆ ಕರ್ತವ್ಯ ನಿರ್ವಹಿಸಬಾರದು, ಒಂದು ವೇಳೆ ಅವರು ಮುಂದುವರಿದರೆ ನಾವು ಏಷ್ಯಾ ಕಪ್ ಟೂರ್ನಿಯನ್ನು ತೊರೆಯುವುದಾಗಿ ಬೆದರಿಕೆಯನ್ನು ಹಾಕಿತ್ತು. ಅಂತಿಮವಾಗಿ ಐಸಿಸಿ ಪಾಕ್‌ನ ದೂರಿಗೆ ಸಮ್ಮತಿಸಲಿಲ್ಲ. ಅಂತಿಮವಾಗಿ ಆಂಡಿ ಪೈಕ್ರಾಫ್ಟ್ ಬಳಿ ಮಾತನಾಡಿದ ಬಳಿಕ ಪಾಕಿಸ್ತಾನ ಆಡಲು ಒಪ್ಪಿಕೊಂಡಿತು.
India choose the chase with the 🏆 on the line 🇮🇳
— Sony Sports Network (@SonySportsNetwk) September 28, 2025
Watch the Asia Cup Final LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 #INDvPAK pic.twitter.com/eL6Wmizh81
ಭಾರತ ತಂಡದ ಆಟಗಾರರ ನಡೆಯಿಂದ ತೀವ್ರ ಅಸಮಾಧಾನವನ್ನು ಹೊಂದಿದ್ದ ಪಾಕಿಸ್ತಾನ ತಂಡ ಭಾನುವಾರ ಏಷ್ಯಾ ಕಪ್ ಫೈನಲ್ ಟಾಸ್ ವೇಳೆ ಭಾರತಕ್ಕೆ ಕೌಂಟರ್ ನೀಡಿದೆ. ಪಾಕ್ ನಾಯಕ ಸಲ್ಮಾನ್ ಆಘಾ ಅವರು, ಕ್ರಿಕೆಟ್ ನಿರೂಪಕ ರವಿ ಶಾಸ್ತ್ರಿ ಅವರ ಬಳಿಕ ಮಾತನಾಡಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಉಪಸ್ಥಿತರಿದ್ದ ಮಾಜಿ ವೇಗಿ ಹಾಗೂ ಕಾಮೆಂಟೇಟರ್ ವಖಾರ್ ಯೂನಿಸ್ ಅವರು, ಸಲ್ಮಾನ್ ಆಘಾ ಅವರನ್ನು ಸಂದರ್ಶನ ಮಾಡಿದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.