ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಭಾರತ ತಂಡದ ಆಯ್ಕೆಯನ್ನು ಟೀಕಿಸಿದ ಆರ್‌ ಅಶ್ವಿನ್!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆಯ ಕುರಿತು ಮಾಜಿ ಸ್ಪಿನ್ನರ್‌ ಆರ್‌ ಅಶ್ವಿನ್‌ ಟೀಕಿಸಿದ್ದು, ಮೊದಲ ಪಂದ್ಯದಲ್ಲಿ ನಿತೀಶ್‌ ರೆಡ್ಡಿ ಅವರನ್ನು ಏಕೆ ಆಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಂದ ಹಾಗೆ ವಿರಾಟ್‌ ಕೊಹ್ಲಿಯ ಶತಕದ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯವನ್ನು ಗೆದ್ದಿತ್ತು.

ನಿತೀಶ್‌ ಕುಮಾರ್‌ ರೆಡ್ಡಿಗೆ ಆರ್‌ ಅಶ್ವಿನ್‌ ಬೆಂಬಲ.

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ(IND vs SA) ವಿರಾಟ್‌ ಕೊಹ್ಲಿಯವರ ಅಮೋಘ ಶತಕದಾಟದ ನೆರವಿನಿಂದಾಗಿ ಟೀಮ್‌ ಇಂಡಿಯಾ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹಾರ್ದಿಕ್‌ ಪಾಂಡ್ಯ ಗಾಯದ ಬಳಿಕ ತಂಡಕ್ಕೆ ಮರಳಿದ್ದ ನಿತೀಶ್‌ ಕುಮಾರ್‌ ರೆಡ್ಡಿ (Nitish kumar Reddy) ಅವರಿಗೆ ತಂಡದಲ್ಲಿ ಸ್ಥಾನ ನೀಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆಯ ಕುರಿತು ಮಾಜಿ ಸ್ಪಿನ್ನರ್‌ ಆರ್‌ ಅಶ್ವಿನ್‌ (R Ashwin) ಟೀಕಿಸಿದ್ದು, ಮೊದಲ ಪಂದ್ಯದಲ್ಲಿ ನಿತೀಶ್‌ ರೆಡ್ಡಿ ಅವರನ್ನು ಏಕೆ ಆಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್‌ ಅಗರ್ಕರ್‌, ಹಾರ್ದಿಕ್‌ ಪಾಂಡ್ಯ ಬದಲಿಗೆ ನಿತೀಶ್‌ ರೆಡ್ಡಿ ತಂಡದಲ್ಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅವರು ಎರಡು ಏಕದಿನ ಪಂದ್ಯಗಳನ್ನಾಡಿ, ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಟಿ20 ಸರಣಿಯಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಗಾಯಕ್ಕೆ ತುತ್ತಾದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ಬಗ್ಗೆ ಮಾತನಾಡಿರುವ ಆರ್‌ ಅಶ್ವಿನ್‌, ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಅವರಿಗೆ ಸ್ಥಾನ ಸಿಗಬೇಕಿತ್ತು ಎಂದು ಆರ್‌ ಅಶ್ವಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!

ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌, "ಹಾರ್ದಿಕ್ ಪಾಂಡ್ಯ ಇಲ್ಲದ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗದಿದ್ದರೆ, ತಂಡದ ಆಯ್ಕೆಯಲ್ಲಿ ಏನೋ ತಪ್ಪಾಗಿದೆ, ಅವರನ್ನು ಏಕೆ ಆಯ್ಕೆ ಮಾಡಲಾಯಿತು? ಏಕೆಂದರೆ ಹಾರ್ದಿಕ್ ನೀಡಬಹುದಾದ ಪ್ರದರ್ಶನವನ್ನು ಅವರು ನೀಡಬಲ್ಲರು ಮತ್ತು ಕ್ರಮೇಣ ಉತ್ತಮಗೊಳ್ಳಬಹುದು. ಆದರೆ, ಈ ಪ್ಲೇಯಿಂಗ್‌ XI ನಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗದಿದ್ದರೆ, ತಂಡದ ಆಯ್ಕೆಯನ್ನು ಸರಿಯಾಗಿ ಪರಿಶೀಲಿಸಬೇಕು," ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ನಿತೀಶ್‌ ಕುಮಾರ್‌ ರೆಡ್ಡಿ ಭಾರತದ ಪರ ಮೂರೂ ಸ್ವರೂಪಗಳಲ್ಲಿ ಆಡಿದ್ದಾರೆ. ಆದರೆ ಅವರಿಗೆ ತಂಡದಲ್ಲಿ ನಿರಂತರವಾಗಿ ಅವಕಾಶ ಸಿಗುತ್ತಿಲ್ಲ. ಪದೇ-ಪದೆ ಅವರನ್ನು ತಂಡದಿಂದ ಕೈಬಿಡಲಾಗುತ್ತಿದೆ. ಇದರ ಪರಿಣಾಮ ಅವರು ಸ್ಥಿರ ಪ್ರದರ್ಶನ ತೋರಲು ಸಾಧ್ಯವಾಗುತ್ತಿಲ್ಲ. ಅವರು ತಂಡದಲ್ಲಿದ್ದಾಗಲೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. 2024ರಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಇಲ್ಲಿಯವರೆಗೆ ಟೀಮ್‌ ಇಂಡಿಯಾ ಪರ ಎಲ್ಲಾ ಸ್ವರೂಪಗಳಲ್ಲಿ 16 ಪಂದ್ಯಗಳನ್ನಾಡಿದ್ದಾರೆ.

IND vs SA: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಯಾವಾಗ?

ಹಿರಿಯ ಆಟಗಾರರ ವಿಶೇಷ ಸಭೆಯ ಹಿಂದಿನ ಉದ್ದೇಶವೇನು?

ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಹಿರಿಯ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ಸುದ್ದಿ ಬೆನ್ನಲ್ಲೇ, ಗೌತಮ್‌ ಗಂಭೀರ್‌ ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೊತೆ ಉತ್ತಮ ಸಂಪರ್ಕ ಹೊಂದಿಲ್ಲ. ಡ್ರೆಸ್ಸಿಂಗ್‌ ರೂಮ್‌ ವಾತಾವರಣ ಹದಗೆಡುತ್ತಿದ್ದು, ಕೋಚ್‌ ಮತ್ತು ಆಟಗಾರರ ನಡುವೆ ಸಂವಹನ ಕೊರತೆ ಉಂಟಾಗುತ್ತಿದೆ. ಇದರಿಂದಾಗಿ ಬಿಸಿಸಿಐ ಹಿರಿಯ ಆಟಗಾರರ ತುರ್ತು ಸಭೆ ಕರೆದಿದೆ ಎನ್ನಲಾಗುತ್ತಿದೆ.

ತಂಡದ ಹಿತಾಸಕ್ತಿಗಾಗಿ ಕೊಹ್ಲಿ ಮತ್ತು ರೋಹಿತ್‌, ಗಂಭೀರ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಕೊಹ್ಲಿಯವರಿಗೆ ಗಂಭೀರ್‌ ಅವರ ನಡೆಯ ಮೇಲೆ ಭಿನ್ನಾಭಿಪ್ರಾಯಗಳಿವೆ. ಈ ಕಾರಣದಿಂದಾಗಿ ಬಿಸಿಸಿಐ ವಿಶೇಷ ಸಭೆ ಕರೆದಿದೆ. ಈ ಸಭೆಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ.