ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India's T20I Squad: ದಕ್ಷಿಣ ಆಫ್ರಿಕಾ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡ ಪ್ರಕಟ!

India's T20I Squad: ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಗಾಯದಿಂದ ಗುಣಮುಖರಾಗಿರುವ ಉಪ ನಾಯಕ ಶುಭಮನ್‌ ಗಿಲ್‌ಗೂ ಅವಕಾಶ ನೀಡಲಾಗಿದೆ. ಆದರೆ ಅವರು ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಬೇಕಾದ ಅಗತ್ಯವಿದೆ.

ಭಾರತ ಟಿ20ಐ ತಂಡವನ್ನು ಪ್ರಕಟಿಸಿದ ಬಿಸಿಸಿಐ.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ 5 ಪಂದ್ಯಗಳ (IND vs SA) ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (India's T20I Squad) ಬಿಸಿಸಿಐ ಬುಧವಾರ ಪ್ರಕಟಿಸಿದೆ. ಗಾಯದಿಂದ ಗುಣಮುಖರಾಗಿರುವ ಉಪ ನಾಯಕ ಶುಭಮನ್‌ ಗಿಲ್‌ (Shubman Gill) ಅವರು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರು ಈ ಸರಣಿಗೂ ಮುನ್ನ ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡಬೇಕಾದ ಅಗತ್ಯವಿದೆ. ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಟಿ20ಐ ಸರಣಿಯು ಡಿಸೆಂಬರ್‌ 9 ರಂದು ಆರಂಭವಾಗಲಿದೆ.

ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ಟಿ20ಐ ತಂಡವನ್ನು ಆರಿಸಿದ್ದು, ವಿಭಿನ್ನ ಗಾಯಗಳಿಂದ ಗುಣಮುಖರಾಗಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಗಿಲ್‌ಗೆ ಅವಕಾಶ ನೀಡಿದೆ. ಹಾರ್ದಿಕ್‌ ತಂಡಕ್ಕೆ ಮರಳಿದ್ದರಿಂದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಕೈ ಬಿಡಲಾಗಿದೆ. ಹರಿಣ ಪಡೆಯ ವಿರುದ್ದದ ಟೆಸ್ಟ್‌ ಸರಣಿಯ ವೇಳೆ ಕುತ್ತಿಗೆ ಗಾಯಕ್ಕೆ ತುತ್ತಾಗಿದ್ದರು. ಆದರೂ ಅವರು ಗುವಾಹಟಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರು ಈ ಟೆಸ್ಟ್‌ ಸರಣಿಯಲ್ಲಿ ಆಡಿದ್ದು ಕೇವಲ ಮೂರು ಎಸೆತಗಳು ಮಾತ್ರ.

IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್‌ ಕೊಹ್ಲಿ!

ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಶುಭಮನ್‌ ಗಿಲ್‌ ಆಡುತ್ತಿಲ್ಲ. ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಗಿಲ್‌ ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡಬೇಕಾಗಿದೆ. 2025ರ ಏಷ್ಯಾ ಕಪ್‌ ಟೂರ್ನಿಯ ಶ್ರೀಲಂಕಾ ವಿರುದ್ಧದ ಸೂಪರ್‌-4ರ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಎರಡೂವರೆ ತಿಂಗಳುಗಳ ಬಳಿಕ ಚೇತರಿಸಿಕೊಂಡಿರುವ ಹಾರ್ದಿಕ್‌, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು ಹಾಗೂ ಇತ್ತೀಚೆಗೆ ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡಿದ್ದರು. ಅವರು ಡಿಸೆಂಬರ್‌ 2 ರಂದು ಬರೋಡಾ ತಂಡದ ಪರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಆಡಿದ್ದರು. ಹಾರ್ದಿಕ್‌ ತಂಡಕ್ಕೆ ಮರಳಿದ ಕಾರಣ ನಿತೀಶ್‌ ಕುಮಾರ್‌ ರೆಡ್ಡಿಯನ್ನು ಕೈ ಬಿಡಲಾಗಿದೆ.

IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟಿ20ಐ ಪಂದ್ಯ ಡಿಸೆಂಬರ್‌ 9 ರಂದು ಕಟಕ್‌ನಲ್ಲಿ ನಡೆಯಲಿದೆ. ನಂತರ 11, 14, 17 ಮತ್ತು 19 ರಂದು ಇನ್ನುಳಿದ ಪಂದ್ಯಗಳು ಕ್ರಮವಾಗಿ ಮುಲ್ಲಾನ್‌ಪುರ್‌, ಧರ್ಮಶಾಲಾ, ಲಖನೌ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿವೆ.



ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ: ಸೂರ್ಯಕುಮಾರ್‌ ಯಾದವ್‌ (ನಾಯಕ), ಶುಭಮನ್‌ ಗಿಲ್‌ (ಉಪ ನಾಯಕ), ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಜಸ್‌ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್‌, ಹರ್ಷಿತ್‌ ರಾಣಾ, ವಾಷಿಂಗ್ಟನ್‌ ಸುಂದರ್‌