ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ (IND vs SA) ಪಂದ್ಯ ಶನಿವಾರದಿಂದ ಆರಂಭವಾಗಲಿದೆ. ಇನ್ನು ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಿಂದ ನಾಯಕ ಶುಭ್ಮನ್ ಗಿಲ್ (Shubman Gill) ತಂಡದಿಂದ ಹೊರಬಿದ್ದಿದ್ದಾರೆ. ಕೊಲ್ಕತಾ ಟೆಸ್ಟ್ ಪಂದ್ಯದ ವೇಳೆ ಗಿಲ್ ಅವರು ಕುತ್ತಿಗೆ ನೋವಿಗೆ ತುತ್ತಾಗಿದ್ದರು. ಈ ಹಿನ್ನೆಲೆ ಅವರು ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಭಾರತದ ಪ್ಲೇಯಿಂಗ್ XIನ ನಾಲ್ಕನೇ ಕ್ರಮಾಂಕದಲ್ಲಿ ಯಾರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ (Sitanshu Kotak), ಗುವಾಹಟಿಯಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬ್ಯಾಟ್ಸ್‌ಮನ್ ಸಿದ್ದರಾಗಿದ್ದಾರೆಂದು ತಿಳಿಸಿದ್ದಾರೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿ ಹೊರಗುಳಿದ ಬಳಿಕ ಧ್ರುವ್ ಜುರೆಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದಾಗ್ಯೂ, ಎರಡನೇ ಪಂದ್ಯಕ್ಕೆ ಲಭ್ಯವಾಗುವ ಕುರಿತು ಕೊನೆಯ ಪ್ರಯತ್ನದಲ್ಲಿ ಶುಕ್ರವಾರ ಗಿಲ್ ಫಿಟ್ನೆಸ್ ಪರೀಕ್ಷೆಗೆ ಒಳಗಾದ ನಂತರವೇ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
IND vs SA: ಎರಡನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸೂಚಿಸಿದ ಆರ್ ಅಶ್ವಿನ್!
ನಮಗೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಿದ್ದರಿದ್ದಾರೆ: ಸಿತಾಂಶು ಕೊಟಕ್
ಈ ಕುರಿತು ಮಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿತಾಂಶು ಕೊಟಕ್, "ಜುರೆಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು, ಆದ್ದರಿಂದ ಅವರು ಒಂದು ಆಯ್ಕೆ. ಆದರೆ ಶುಭಮನ್ ಆರೋಗ್ಯದ ಸಂಪೂರ್ಣ ವರದಿ ಬರುವವರೆಗೆ, ಯಾರು ಆಡುತ್ತಾರೆ ಎಂಬುದರ ಕುರಿತು ಚರ್ಚಿಸುವುದರಲ್ಲಿ ಅರ್ಥವಿಲ್ಲ. ನಮಗೆ ತಿಳಿದ ನಂತರ ಮತ್ತು ನಾಳೆ ಪಿಚ್ ನೋಡಿದ ನಂತರ, ನಾವು ಅತ್ಯುತ್ತಮ ಸಂಯೋಜನೆಯ ಬಗ್ಗೆ ಯೋಚಿಸುತ್ತೇವೆ," ಎಂದು ಹೇಳಿದ್ದಾರೆ.
ಬುಧವಾರದ ಪಿಟಿಐ ವರದಿಯ ಪ್ರಕಾರ ಶುಭಮನ್ ಗಿಲ್ ಅವರ ನೋವು ಗಮನಾರ್ಹವಾಗಿ ಕಡಿಮೆಯಾಗಿದೆಯಾದರೂ, ಅವರು ಇನ್ನೂ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗಿಲ್ಲ. ನಾಯಕನ ಪೂರ್ಣ ಚೇತರಿಕೆಗೆ ಕನಿಷ್ಠ 10 ದಿನಗಳು ಬೇಕಾಗುತ್ತವೆ. ಇದರ ಹೊರತಾಗಿಯೂ, ಅವರು ತಂಡದಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಆಡಳಿತ ಮಂಡಳಿಯು ಗಿಲ್ ಅವರ ಸದ್ಯದ ಫಿಟ್‌ನೆಸ್ ಇತರ ಆಯ್ಕೆಗಳಿಗಿಂತ ಉತ್ತಮವಾಗಿದೆ ಎನ್ನಲಾಗಿದೆ. ಆದಾಗ್ಯೂ, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಕ್ರೀಡಾ ವಿಜ್ಞಾನ ವಿಭಾಗವನ್ನು ಎದುರು ನೋಡುತ್ತಿದೆ.
IND vs SA: ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ, ಎರಡನೇ ಟೆಸ್ಟ್‌ನಿಂದಲೂ ಕಗಿಸೊ ರಬಾಡ ಔಟ್!
ಶುಭಮನ್ ಗಿಲ್‌ರನ್ನು ಕಳೆದುಕೊಳ್ಳಲು ಇಷ್ಟವಿಲ್ಲ
ಮುಂದುವರೆದು ಮಾತನಾಡಿದ ಅವರು, "ನೋಡಿ, ಅವರು ಖಂಡಿತವಾಗಿಯೂ ನಿಜವಾಗಿಯೂ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಏಕೆಂದರೆ ನಾನು ನಿನ್ನೆಯೂ ಅವರನ್ನು ಭೇಟಿಯಾಗಿದ್ದೆ. ಈಗ ನಾಳೆ ಸಂಜೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಏಕೆಂದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡರೂ ಸಹ, ಪಂದ್ಯದ ಸಮಯದಲ್ಲಿ ಸೆಳೆತ ಮರುಕಳಿಸುವ ಸಾಧ್ಯತೆ ಇದೆಯೇ ಎಂದು ಫಿಸಿಯೊಗಳು ಮತ್ತು ವೈದ್ಯರು ನಿರ್ಧರಿಸಬೇಕು. ಅದು ಬಹಳ ಮುಖ್ಯ. ಒಂದು ವೇಳೆ ಈ ಕುರಿತು ಸಂದೇಹವಿದ್ದರೆ, ಅವರು ಇನ್ನೊಂದು ಪಂದ್ಯಕ್ಕೆ ವಿಶ್ರಾಂತಿ ಪಡೆಯುತ್ತಾರೆ ಎಂದು ನನಗೆ ಖಚಿತವಾಗಿದೆ. ಶುಭಮನ್‌ರಂತಹ ಆಟಗಾರ ಮತ್ತು ಅವರು ನಾಯಕರಾಗಿರುವುದರಿಂದ ಯಾವುದೇ ತಂಡವು ಅವರನ್ನು ಕಳೆದುಕೊಳ್ಳುತ್ತದೆ," ಹೇಳಿದ್ದಾರೆ.
ತವರು ಸರಣಿಯನ್ನು ಉಳಿಸಿಕೊಳ್ಳುವ ಗುರಿ ಹೊಂದಿರುವ ಭಾರತ ತಂಡ, ಎರಡನೇ ಪಂದ್ಯವನ್ನು ಕ್ಲೀನ್ ಸ್ವೀಪ್ ಆಘಾತದಿಂದ ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ.