ನವದೆಹಲಿ: ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಶನಿವಾರ ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತದ ರೋಹಿತ್ ಶರ್ಮಾ 27 ರನ್‌ಗಳನ್ನು ಕಲೆ ಹಾಕಿದ ಬಳಿಕ ಈ ಮೈಲುಗಲ್ಲು ತಲುಪಿದರು. ಆ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ (Virat Kohli), ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ.
ಈ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ರೋಹಿತ್ ಶರ್ಮಾ 73 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಶತಕವನ್ನು ಸಿಡಿಸುವ ಹಾದಿಯಲ್ಲಿದ್ದರು. ಆದರೆ, ಕೇಶವ್ ಮಹಾರಾಜ್ ಅವರ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಸರಿಯಾಗಿ ಬ್ಯಾಟ್‌ಗೆ ಸಿಗದ ಕಾರಣ ಡೀಪ್ ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ಕೊಟ್ಟರು. ಅಂದ ಹಾಗೆ ಯಶಸ್ವಿ ಜೈಸ್ವಾಲ್ ಅವರ ಜೊತೆ ಮೊದಲನೇ ವಿಕೆಟ್‌ಗೆ ಹಿಟ್‌ಮ್ಯಾನ್ 155 ರನ್‌ಗಳನ್ನು ಕಲೆ ಹಾಕಿದರು.
ʻಔಟ್ ಇಲ್ಲ ಹೋಗಿ ಬೌಲ್ ಮಾಡುʼ: ಕುಲ್ದೀಪ್ ಯಾದವ್‌ರ ಕಾಲೆಳೆದ ರೋಹಿತ್ ಶರ್ಮಾ! ವಿಡಿಯೊ
ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಸಚಿನ್ ತೆಂಡೂಲ್ಕರ್: 664 ಪಂದ್ಯಗಳು, 34,357 ರನ್‌ಗಳು, 100 ಶತಕಗಳು, 164 ಅರ್ಧಶತಕಗಳು
ವಿರಾಟ್ ಕೊಹ್ಲಿ: 556 ಪಂದ್ಯಗಳು, 27,910 ರನ್‌ಗಳು, 84 ಶತಕಗಳು, 144 ಅರ್ಧಶತಕಗಳು
ರಾಹುಲ್ ದ್ರಾವಿಡ್: 504 ಪಂದ್ಯಗಳು, 24,064 ರನ್‌ಗಳು, 48 ಶತಕಗಳು, 145 ಅರ್ಧಶತಕಗಳು
ರೋಹಿತ್ ಶರ್ಮಾ: 505 ಪಂದ್ಯಗಳು, 20,000* ರನ್‌ಗಳು, 50 ಶತಕಗಳು, 110 ಅರ್ಧಶತಕಗಳು
ಸೌರವ್ ಗಂಗೂಲಿ: 421 ಪಂದ್ಯಗಳು, 18,433 ರನ್‌ಗಳು, 38 ಶತಕಗಳು, 106 ಅರ್ಧಶತಕಗಳು
ಎಂ.ಎಸ್. ಧೋನಿ: 535 ಪಂದ್ಯಗಳು, 17,092 ರನ್‌ಗಳು, 15 ಶತಕಗಳು, 108 ಅರ್ಧಶತಕಗಳು
ರೋಹಿತ್ ಶರ್ಮಾರ ವೈಟ್ ಬಾಲ್ ಕ್ರಿಕೆಟ್ ದಾಖಲೆಗಳು
ರೋಹಿತ್ ಶರ್ಮಾ ಅವರು ಒಡಿಐ ಕ್ರಿಕೆಟ್‌ನಲ್ಲಿ 11000ಕ್ಕೂ ಅಧಿಕ ರನ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆ ಮೂಲಕ ಅವರು ಅಂತಾರಾಷ್ಟ್ರೀಯ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ 20000ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಅವರು ಚುಟುಕು ಕ್ರಿಕೆಟ್‌ನಲ್ಲಿ 159 ಪಂದ್ಯಗಳಿಂದ 4231 ರನ್‌ಗಳನ್ನು ಬಾರಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ವೈಫಲ್ಯವನ್ನು ಸಮರ್ಥಿಸಿಕೊಂಡ ರಯಾನ್ ಟೆನ್ ಡಶ್ಕಾಟೆ!
ರೋಹಿತ್ ಶರ್ಮಾ 2007ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದರೆ, 2013ರ ಬಳಿಕ ಅಂದರೆ 83 ಒಡಿಐ ಪಂದ್ಯಗಳ ಬಳಿಕ ಭಾರತ ತಂಡದಲ್ಲಿ ನಿಯಮಿತವಾಗಿ ಆಡಿದ್ದರು. ಆ ಮೂಲಕ ರನ್ ಹೊಳೆ ಹರಿಸಿದ್ದರು.