ನವದೆಹಲಿ: ಭಾರತ ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಅನುಪಸ್ಥಿತಿಯಿಂದ ಸಿಗುವ ಲಾಭವೇನೆಂದು ಟೀಮ್ ಇಂಡಿಯಾ ಯುವ ವೇಗಿ ಹರ್ಷಿತ್ ರಾಣಾ (Harshit Rana) ಬಹಿರಣಂಗಪಡಿಸಿದ್ದಾರೆ. ಈ ಇಬ್ಬರೂ ದಿಗ್ಗಜರು ತಂಡದಲ್ಲಿದ್ದರೆ, ಆಟಗಾರರ ವಿಶ್ವಾಸ ಹೆಚ್ಚಾಗುತ್ತದೆ ಎಂದಿದ್ದಾರೆ. ಅಲ್ಲದೆ ಡ್ರೆಸ್ಸಿಂಗ್ ರೂಂ ನಲ್ಲಿನ ವಾತಾವರಣ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಮೊದಲನೇ ಏಕದಿನ ಪಂದ್ಯದಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಬಾರಿಸಹವ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು. ಇದೀಗ ಮೂರನೇ ಏಕದಿನ ಪಂದ್ಯ ಬುಧವಾರ ರಾಯ್ಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸಜ್ಜಾಗುತ್ತಿದ್ದಾರೆ.
ಎರಡನೇ ಏಕದಿನ ಪಂದ್ಯದ ನಿಮಿತ್ತ ಮಾತನಾಡಿದ ಹರ್ಷಿತ್ ರಾಣಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿಸಿದರು. "ಇದು ನನ್ನ ಪಾಲಿಗೆ ದೊಡ್ಡ ಸಂಗತಿ ಹಾಗೂ ತಂಡಕ್ಕೂ ಕೂಡ ದೊಡ್ಡ ವಿಷಯ," ಎಂದು ಹೇಳಿದ್ದಾರೆ.
"ಇಂಥಾ ಅನುಭವ ಆಟಗಾರರು ಮೈದಾನದಲ್ಲಿ ನಿಮ್ಮ ಜೊತೆ ಇದ್ದಾಗ ಹಾಗೂ ಡ್ರೆಸ್ಸಿಂಗ್ ರೂಂನಲ್ಲಿದ್ದಾಗ, ತಂಡದಲ್ಲಿನ ವಾತಾವರಣ ತುಂಬಾ ಚೆನ್ನಾಗಿರುತ್ತದೆ," ಎಂದು ಟೀಮ್ ಇಂಡಿಯಾ ಯುವ ವೇಗಿ ಹರ್ಷಿತ್ ರಾಣಾ ತಿಳಿಸಿದ್ದಾರೆ.
IND vs SA: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಯಾವಾಗ?
ಹರ್ಷಿತ್ ರಾಣಾ ಅವರ ಮಾತುಗಳು ಪ್ರಸ್ತುತ ತಂಡದಲ್ಲಿರುವ ಹಲವು ಯುವಕರು ಪ್ರತಿಧ್ವನಿಸುವ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ರೋಹಿತ್ ಮತ್ತು ಕೊಹ್ಲಿ ಕೇವಲ ರನ್‌ಗಳು, ಸ್ಥಿರತೆ ಅಥವಾ ಯುದ್ಧತಂತ್ರದ ಸ್ಪಷ್ಟತೆಯನ್ನು ತರುವುದಿಲ್ಲ, ಅವರು ತಮ್ಮ ಸುತ್ತಲಿನ ಪ್ರತಿಯೊಬ್ಬರನ್ನು ಮೇಲಕ್ಕೆತ್ತುವ ಮನಸ್ಥಿತಿ, ಶಕ್ತಿಯನ್ನು ತರುತ್ತಾರೆ. ಅವರ ಉಪಸ್ಥಿತಿಯು ಮೈದಾನದ ಹೊರಗೆ ಸಹ ವಾತಾವರಣವು ಲವಲವಿಕೆಯಿಂದ ಕೂಡಿರುತ್ತದೆ ಎಂದು ಅವರು ಹೇಳಿದ್ದಾರೆ.
"ನೀವು ಮೈದಾನದಿಂದ ಹೊರಗಿದ್ದರೂ ಅಥವಾ ಡ್ರೆಸ್ಸಿಂಗ್ ರೂಮಿನಲ್ಲಿದ್ದರೂ ಸಹ, ಅದು ಇಡೀ ತಂಡಕ್ಕೆ ಸಂತೋಷದ ವಾತಾವರಣವಾಗಿರುತ್ತದೆ," ಎಂದು ಹೇಳಿದ ರಾಣಾ, "ಪ್ರತಿಯೊಬ್ಬರೂ ತಮ್ಮನ್ನು ತಾವು ಉತ್ತಮಗೊಳಿಸಲು ಬಯಸುತ್ತಾರೆ ಏಕೆಂದರೆ ಅವರ ಮನಸ್ಸಿನಲ್ಲಿ, ಅವರು ಯಾವಾಗಲೂ ನಾವು ಉತ್ತಮವಾಗಿ ಏನು ಮಾಡಬಹುದು ಎಂದು ನಮಗೆ ಯಾವಾಗಲೂ ಹೇಳುತ್ತಾರೆ," ಎಂದು ತಿಳಿಸಿದ್ದಾರೆ.