ನವದೆಹಲಿ: ಗಾಯದಿಂದ ಗುಣಮುಖರಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ (IND vs SA) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ರಿಷಭ್ ಪಂತ್ (Rishabh Pant) ಸಜ್ಜಾಗುತ್ತಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಶುಕ್ರವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ನಿಮಿತ್ತ ರಿಷಭ್ ಪಂತ್ ಬಗ್ಗೆ ಹರಿಣ ಪಡೆಯ ಬೌಲರ್‌ಗಳಿಗೆ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ (Mark Boucher) ಎಚ್ಚರಿಕೆ ನೀಡಿದ್ದಾರೆ. ಪಂತ್ ಅವರನ್ನು ಬಹುಬೇಗ ಔಟ್ ಮಾಡುವ ಕಡೆಗೆ ನೀವು ಗಮನ ಕೊಡಬೇಕು, ರನ್ ಗಳಿಸಲು ಅವರಿಗೆ ಕಷ್ಟಪಡುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್, ವೆಸ್ಟ್ ಇಂಡೀಸ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ನಂತರ ಗಾಯದಿಂದ ಗುಣಮುಖರಾಗಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಇಲ್ಲಿ ಅವರು 90 ರನ್ ಹಾಗೂ 65 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.
IND vs SA: ಧ್ರುವ್ ಜುರೆಲ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಚೇತೇಶ್ವರ್ ಪೂಜಾರ!
ರಿಷಭ್ ಪಂತ್ ಅತ್ಯಂತ ಅಪಾಯಕಾರಿ ಬ್ಯಾಟರ್: ಮಾರ್ಕ್ ಬೌಚರ್
"ರಿಷಭ್ ಪಂತ್ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್. ಕೆಲವೇ ಗಂಟೆಗಳಲ್ಲಿ ಪಂದ್ಯವನ್ನು ತಿರುಗಿಸಬಲ್ಲ ಅವರ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ದಕ್ಷಿಣ ಆಫ್ರಿಕಾ ತಂಡಕ್ಕೂ ಇದು ಗೊತ್ತು ಹಾಗೂ ಅವರ ವಿರುದ್ದ ಸೂಕ್ತ ತಯಾರಿ ನಡೆಸಬೇಕಾದ ಅಗತ್ಯವಿದೆ. ನೀವು ಬುದ್ದಿವಂತರಾಗಿದ್ದರೆ, ನೀವು ಅವರ ಭಾವನೆಗಳೊಂದಿಗೆ ಆಡುತ್ತೀರಿ. ಅವರಿಗೆ ಏನು ಅಗತ್ಯವಿದೆ ಹಾಗೂ ಅವರು ಹೇಗೆ ಪ್ರಾಬಲ್ಯ ಸಾಧಿಸಲು ಬಯಸುತ್ತಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗಿದೆ," ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಮಾರ್ಕ್ ಬೌಚರ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಬೌಂಡರಿ ಫೀಲ್ಡರ್‌ಗಳನ್ನು ನೇಮಿಸಿಕೊಳ್ಳುವ ಮೂಲಕ ಮತ್ತು ಮುಕ್ತವಾಗಿ ರನ್ ಗಳಿಸುವ ಅವರ ಸಾಮರ್ಥ್ಯವನ್ನು ನಿರ್ಬಂಧಿಸುವ ಮೂಲಕ ಪಂತ್ ಅವರನ್ನು ನಿರಾಶೆಗೊಳಿಸಬಹುದು ಎಂದು ಬೌಚರ್ ಸಲಹೆ ನೀಡಿದರು. ಪಂತ್ ಅವರ ಆಕ್ರಮಣಕಾರಿ ಉದ್ದೇಶವನ್ನು ತಡೆಯುವುದರಿಂದ ಅವರು ತಾಳ್ಮೆ ಕಳೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
IND vs SA: ಮೊದಲನೇ ಟೆಸ್ಟ್‌ಗೂ ಮುನ್ನ ಈಡನ್ ಗಾರ್ಡನ್ಸ್ ಪಿಚ್ ಬಗ್ಗೆ ಗಂಭೀರ್ ಅಸಮಾಧಾನ!
"ರಿಷಭ್ ಪಂತ್‌ಗೆ ಒಂದೆರಡು ಬೌಂಡರಿ ಫೀಲ್ಡರ್‌ಗಳನ್ನು ಹಾಕಿ, ಅವರು ರನ್‌ಗಳಿಗಾಗಿ ನಿಜವಾಗಿಯೂ ಶ್ರಮಿಸುವಂತೆ ಮಾಡುವುದು ರಕ್ಷಣಾತ್ಮಕವಲ್ಲ. ಅದು ಅವರಿಗೆ ಅಭ್ಯಾಸವಿಲ್ಲದ ಕೆಲಸವಲ್ಲ, ಆದರೆ ಅವರು ಆಡುವ ರೀತಿ, ಸ್ಕೋರ್‌ಬೋರ್ಡ್ ಯಾವಾಗಲೂ ಟಿಕ್ ಆಗುತ್ತಿರಬೇಕೆಂದು ಅವರು ಬಯಸುತ್ತಾರೆ. ನೀವು ಅದನ್ನು ಸ್ವಲ್ಪ ನಿಲ್ಲಿಸಬಹುದು ಮತ್ತು ಅವರನ್ನು ಸ್ವಲ್ಪ ನಿರಾಶೆಗೊಳಿಸಬಹುದು. ಆದ್ದರಿಂದ ಬೌಲರ್‌ಗಳು ಅವರ ಮನೆಕೆಲಸವನ್ನು ಸರಿಯಾಗಿ ಮಾಡಬೇಕಾಗಿದೆ, ಅದನ್ನು ಅವರು ಈಗಾಗಲೇ ಮಾಡಿರಬಹುದು ಎಂದು ನನಗೆ ಖಚಿತವಾಗಿದೆ," ಎಂದು ಅವರು ಹೇಳಿದರು.