IND vs SA: ಧ್ರುವ್ ಜುರೆಲ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಚೇತೇಶ್ವರ್ ಪೂಜಾರ!
Cheteshwar Pujara on Dhruv Jurel Batting Order: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಮೊದಲನೇ ಟೆಸ್ಟ್ ಪಂದ್ಯ ನವೆಂಬರ್ 14 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಧ್ರವ್ ಜುರೆಲ್‌ಗೆ ಆರನೇ ಕ್ರಮಾಂಕದಲ್ಲಿ ಆಡಿಸಬೇಕೆಂದು ಚೇತೇಶ್ವರ್ ಪೂಜಾರ ಆಗ್ರಹಿಸಿದ್ದಾರೆ.
ಧ್ರುವ್ ಜುರೆಲ್‌ಗೆ ಆರನೇ ಕ್ರಮಾಂಕದಲ್ಲಿ ಸ್ಥಾನ ನೀಡಬೇಕೆಂದ ಚೇತೇಶ್ವರ್ ಪೂಜಾರ. -
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ (IND vs SA) ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ ಇದೆ. ನವೆಂಬರ್ 14 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XI (India's Playing XI) ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೇತೇಶ್ವರ್ ಪೂಜಾರ (Cheteshwar Pujara), ಭಾರತ ತಂಡದ ಆಡುವ ಬಳಗದ ಆರನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್‌ಗೆ (Dhruv Jurel) ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ.
ರಿಷಭ್ ಪಂತ್ ಗಾಯದಿಂದ ಗುಣಮುಖರಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಹಾಗಾಗಿ ಅವರು ಮೊದಲನೇ ಟೆಸ್ಟ್ ಪಂದ್ಯದಲ್ಲಿ ನೇರವಾಗಿ ಪ್ಲೇಯಿಂಗ್‌ದ Xiನಲ್ಲಿ ಆಡಲಿದ್ದಾರೆ. ಏಕೆಂದರೆ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್. ಆದರೆ, ಟೀಮ್ ಮ್ಯಾನೇಜ್‌ಮೆಟ್‌ಗೆ ಧ್ರುವ್ ಜುರೆಲ್ ಫಾರ್ಮ್ ತಲೆ ನೋವು ತರಿಸಿದೆ. ಅವರು ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ್ದರು. ಹಾಗಾಗಿ ಅವರನ್ನು ಬೆಂಚ್ ಕಾಯಿಸಲು ಸಾಧ್ಯವಿಲ್ಲ.
IND vs SA: ಮೊದಲನೇ ಟೆಸ್ಟ್‌ಗೂ ಮುನ್ನ ಈಡನ್ ಗಾರ್ಡನ್ಸ್ ಪಿಚ್ ಬಗ್ಗೆ ಗಂಭೀರ್ ಅಸಮಾಧಾನ!
ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆಡಬಹುದು. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಆಡಲಿದ್ದಾರೆ. ನಾಯಕ ಶುಭಮನ್ ಗಿಲ್ ಹಾಗೂ ಉಪ ನಾಯಕ ರಿಷಭ್ ಪಂತ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕಗಳಲ್ಲಿ ಆಡಲಿದ್ದಾರೆ. ಈ ಐದೂ ಕ್ರಮಾಂಕಗಳು ಖಚಿತವಾಗಿವೆ. ಹಾಗಾಗಿ ಆರನೇ ಕ್ರಮಾಂಕದಲ್ಲಿ ಇನ್ ಫಾರ್ಮ್ ಧ್ರುವ್ ಜುರೆಲ್ ಅವರನ್ನು ಆಡಿಸಬೇಕೆಂದು ಚೇತೇಶ್ವರ್ ಪೂಜಾರ ಆಗ್ರಹಿಸಿದ್ದಾರೆ.
"ಮೊದಲನೇಯದಾಗಿ ಫಾರ್ಮ್ ಅನ್ನು ಆಧರಿಸಿ ಧ್ರುವ್ ಜುರೆಲ್ ಅವರು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆಡಲು ಅರ್ಹರಾಗಿದ್ದಾರೆ. ಅವರಿಗೆ ಆರನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಬಹುದು. ಇದು ನನ್ನ ಊಹೆ," ಎಂದು ಜಿಯೊ ಸಿನಿಮಾ ಸಂಬಾಷಣೆಯಲ್ಲಿ ಚೇತೇಶ್ವರ್ ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs SA Test: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರು ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ
ಕೋಲ್ಕತಾದ ಪಿಚ್ ಸ್ಪಿನ್ ಸ್ನೇಹಿ
ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಕಾಂಬಿನೇಷನ್ ಅನ್ನು ಕಣಕ್ಕೆ ಇಳಿಸಬಹುದು. ಏಕೆಂದರೆ ಇಲ್ಲಿನ ಪಿಚ್ ಸ್ಪಿನ್ ಸ್ನೇಹಿಯಾಗಿದೆ. ಹಾಗಾಗಿ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗದ ಬೌಲರ್‌ಗಳನ್ನು ಕಣಕ್ಕೆ ಇಳಿಸಬಹುದು ಎಂದು ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪಿಚ್‌ಗೆ ಅನುಸಾರವಾಗಿ ಭಾರತ ತಂಡ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರೂ ಸೀಮ್ ಬೌಲರ್‌ಗಳನ್ನು ಕಣಕ್ಕೆ ಇಳಿಸಬಹುದು. ಇದರ ಆಧಾರದ ಮೇಲೆ ನಾವು ಧ್ರುವ್ ಜುರೆಲ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಬಹುದು. ಅವರಲ್ಲಿನ ಫಾರ್ಮ್ ಹಾಗೂ ಅವರು ಬ್ಯಾಟ್ ಮಾಡುತ್ತಿರುವ ಹಾದಿಯನ್ನು ನೋಡಿದರೆ, ಅವರು ಖಚಿತವಾಗಿಯೂ ಪ್ಲೇಯಿಂಗ್ xiನಲ್ಲಿ ಆಡಲಿದ್ದಾರೆ," ಎಂದು ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.