ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಯಶಸ್ವಿ ಜೈಸ್ವಾಲ್‌ ತನ್ನದೇ ಲೋಕದಲ್ಲಿ ಕಳೆದುಹೋದಂತೆ ಕಾಣುತ್ತಿದ್ದರುʼ: ಸಂಜಯ್‌ ಮಾಂಜ್ರೇಕರ್‌!

ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರು ಉತ್ತಮ ಆರಂಭ ಪಡೆದಿದ್ದರು. ಆದರೆ, ರನ್‌ ಓಡುವಾಗ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ರನ್‌ಔಟ್‌ ಆಗಬೇಕಾಯಿತು. ಈ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್‌ ರನ್‌ಔಟ್‌ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರತಿಕ್ರಿಯೆ.

ಗಾಲೆ: ಶ್ರೀಲಂಕಾ ವಿರುದ್ಧ ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ನಡುವೆ ನಡೆದ ಗೊಂದಲದಿಂದ ಭಾರತ ತಂಡ ತನ್ನ ಮೊದಲನೇ ವಿಕೆಟ್ ಅನು ಕಳೆದುಕೊಂಡಿತು. 11ನೇ ಓವರ್‌ನ ಕೊನೆಯ ಎಸೆತದಲ್ಲಿ ಕೆಶರ ನುವಾಂತ ಬೌಲ್‌ ಮಾಡುತ್ತಿದ್ದಾಗ, ರಾಹುಲ್ ಚೆಂಡನ್ನು ಲೆಗ್ ಸೈಡ್‌ನತ್ತ ಚೆಂಡನ್ನು ಹೊಡೆದು ಸಿಂಗಲ್ ಪಡೆಯಲು ಪ್ರಯತ್ನಿಸಿದರು. ಆದರೆ ಕ್ರೀಸ್‌ನಲ್ಲಿ ಪರಿಸ್ಥಿತಿ ಕೆಲವೇ ಕ್ಷಣಗಳಲ್ಲಿ ಗೊಂದಲಮಯವಾಯಿತು.

ರನ್ ಪೂರ್ಣಗೊಳಿಸಲು ರಾಹುಲ್ ಓಡುತ್ತಿದ್ದ ವೇಳೆ, ಬೌಲರ್‌ನೊಂದಿಗೆ ಸಣ್ಣ ಪ್ರಮಾಣದ ಡಿಕ್ಕಿಯಾದ ಪರಿಣಾಮ ಜೈಸ್ವಾಲ್ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು. ಇದರಿಂದ ಅವರು ತಮ್ಮ ಜೊತೆಗಾರ ರಾಹುಲ್ ಓಡುತ್ತಿರುವುದನ್ನು ಗಮನಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಕ್ರೀಸ್ ತಲುಪುವಲ್ಲಿ ವಿಫಲರಾದ ಜೈಸ್ವಾಲ್ ರನೌಟ್ ಆದರು. ಜೈಸ್ವಾಲ್ 37 ಎಸೆತಗಳಲ್ಲಿ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಇನಿಂಗ್ಸ್ ಉತ್ತಮ ಭರವಸೆ ಮೂಡಿಸಿದ್ದರೂ, ಅನಿರೀಕ್ಷಿತ ರನೌಟ್‌ನಿಂದ ಅಂತ್ಯಗೊಂಡಿತು.

ಈ ಘಟನೆ ಕುರಿತು ಕಾಮೆಂಟರಿ ವೇಳೆ ಸಂಜಯ್ ಮಾಂಜ್ರೇಕರ್ ಮಾತನಾಡಿ, “ನನ್ನ ಪ್ರಕಾರ ಅದು ರನ್ ಆಗಬೇಕಿತ್ತು. ಕೆಎಲ್ ರಾಹುಲ್ ತಮ್ಮ ತುದಿಯನ್ನು ಸುಲಭವಾಗಿ ತಲುಪುತ್ತಿದ್ದರು. ಜೈಸ್ವಾಲ್ ಮಾತ್ರ ಏನಾಗುತ್ತಿದೆ ಎಂಬುದರ ಬಗ್ಗೆ ಗಮನವಿಲ್ಲದೆ ಇದ್ದಂತೆ ಕಾಣಿಸಿದರು,” ಎಂದು ಹೇಳಿದ್ದಾರೆ.

AUS vs BAN: 300 ಟೆಸ್ಟ್‌ ವಿಕೆಟ್‌ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಜಾಶ್‌ ಹೇಝಲ್‌ವುಡ್‌!

ಈ ರನೌಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಜೊತೆಯಾಟದ ವೇಳೆ ಸ್ಪಷ್ಟ ಸಂವಹನ ಮತ್ತು ಎಚ್ಚರಿಕೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಗೊಂದಲಗಳು ಅಪರೂಪವಾದರೂ, ಉತ್ತಮವಾಗಿ ಆಡುತ್ತಿದ್ದ ಬ್ಯಾಟರ್‌ನ ವಿಕೆಟ್ ಕಳೆದುಕೊಂಡಾಗ ಅದರ ಬೆಲೆ ಬಹಳ ದೊಡ್ಡದಾಗಿರುತ್ತದೆ.



ಮೊದಲನೇ ದಿನ ಭಾರತ ತಂಡಕ್ಕೆ ಮೇಲುಗೈ

ಇನ್ನು ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ ತಂಡ ಮೊದಲನೇ ದಿನ ಮೇಲುಗೈ ಸಾಧಿಸಿದೆ. ದೇವದತ್‌ ಪಡಿಕ್ಕಲ್‌ ಶತಕ ಹಾಗೂ ಕೆಎಲ್‌ ರಾಹುಲ್‌ ಅವರ ಅರ್ಧಶತಕದ ಬಲದಿಂದ ಟೀಮ್‌ ಇಂಡಿಯಾ ಮೊದಲನೇ ದಿನದಾಟದ 70 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗಳ ನಷ್ಟಕ್ಕೆ 266 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಶುಭಾರಂಭವನ್ನು ಕಂಡಿದೆ.

ಭಾರತ vs ಶ್ರೀಲಂಕಾ ಸರಣಿಯ ಬಳಿಕ ಅಜಿತ್‌ ಅಗರ್ಕರ್‌ಗೆ ಕೊಕ್‌? ಬಿಸಿಸಿಐ ಮೂಲಗಳು ಹೇಳಿದ್ದೇನು?

ಕೆಎಲ್‌ ರಾಹುಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್‌ ಅವರು ಆರಂಭದಲ್ಲಿ 37 ಎಸೆತಗಳಲ್ಲಿ 32 ರನ್‌ಗಳಿಸಿ ಶುಭಾರಂಭವನ್ನು ಕಂಡಿದ್ದರು. ಆದರೆ, ರನ್‌ ಓಡುವಾಗ ಬೌಲರ್‌ನಿಂದ ಅಡೆತಡೆಯುಂಟಾಗಿ ಅನಿರೀಕ್ಷಿತವಾಗಿ ರನ್‌ಔಟ್‌ ಆದರು. ಆ ಮೂಲಕ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು. ಆದರೆ, ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌, 162 ಎಸೆತಗಳಲ್ಲಿ 77 ರನ್‌ ಗಳಿಸಿದ ಬಳಿಕ ರಿಟೈರ್‌ ಔಟ್‌ ಆದರು.

ಆದರೆ, ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ ದೇವದತ್‌ ಪಡಿಕ್ಕಲ್‌ ಅವರು 70 ಓವರ್‌ಗಳ ವೇಳೆಗೆ 166 ಎಸೆತಗಳಲ್ಲಿ 122 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಭಾರತ ತಂಡ 70 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 275 ರನ್‌ಗಖನ್ನು ಗಳಿಸಿದೆ. ಕ್ರೀಸ್‌ನಲ್ಲಿ ಪಡಿಕ್ಕಲ್‌ ಹಾಗೂ ರಿಷಭ್‌ ಪಂತ್‌ ಇದ್ದಾರೆ.