ನವದೆಹಲಿ: ಭಾರತ ಹಾಗೂ ಶ್ರೀಲಂಕಾ (IND vs SL) ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಅಭ್ಯಾಸ ಪಂದ್ಯವನ್ನು ಮುಗಿಸಿಕೊಂಡಿರುವ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, ಆಗಸ್ಟ್ 15 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಇದರ ನಡುವೆ ಪ್ರವಾಸಿ ತಂಡಕ್ಕೆ ಹಲವು ಸ್ಟಾರ್ ಅಟಗಾರರ ಗಾಯದ ಸಮಸ್ಯೆಗಳು ಎದುರಾಗಿವೆ. ಜಸ್‌ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಅವರು ವಿಭಿನ್ನ ಗಾಯಗಳಿಂದ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಇತ್ತೀಚೆಗೆ ಸಾಯಿ ಬದಲು ಸರ್ಫರಾಝ್ ಖಾನ್ (Sarfaraz Khan) ಅವರು ಭಾರತ ತಂಡಕ್ಕೆ ಮರಳಿದ್ದಾರೆ. ಹಾಗಾಗಿ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.
ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದ ನಾಯಕ ಶುಭಮನ್ ಗಿಲ್ ಅವರು ಸಂಪೂರ್ಣ ಫಿಟ್ ಇದ್ದಾರೆಂದು ವರದಿಯಾಗಿದ್ದು, ಇದು ಪ್ರವಾಸಿ ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಶ್ರೀಲಂಕಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನ ಗಿಲ್ ಬ್ಯಾಟಿಂಗ್‌ಗೆ ಇಳಿದಿದ್ದರು. ಆ ಮೂಲಕ ಅವರು ಟೆಸ್ಟ್ ಸರಣಿಯಲ್ಲಿ ಆಡಲು ಅವರಿಗೆ ಯಾವುದೇ ಗಾಯದ ಭೀತಿ ಇಲ್ಲವೆಂದು ಖಚಿತವಾಗಿದೆ.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಬೇಕೆಂದ ಅಜಿಂಕ್ಯ ರಹಾನೆ!
ಗಾಲೆ ಇಂಟರ್‌ನ್ಯಾಷನಲ್ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಭಾರತ ತಂಡ ಸಾರಾಂಶ್ ಜೈನ್, ಮಾನವ್ ಸುತಾ ಹಾಗೂ ರವೀಂದ್ರ ಜಡೇಜಾ ಸೇರಿ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಬಹುದು. ಆದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಅವರ ಜೊತೆಗೆ ಮತ್ತೊಂದು ತುದಿಯಲ್ಲಿ ಯಾರನ್ನು ಬೌಲ್ ಮಾಡಿಸಬೇಕೆಂಬುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿ ಪರಿಣಮಿಸಿದೆ. ಪ್ರಸಿಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್ ಅವರಲ್ಲಿ ಒಬ್ಬರನ್ನು ಪ್ಲೇಯಿಂಗ್ XIಗೆ ಪರಿಗಣಿಸುವ ಸಾಧ್ಯತೆ ಇದೆ.
ಪ್ರಸಿಧ್ ಅವರ ಅನುಭವ ಹಾಗೂ ಬ್ರಾರ್ ಅವರ ಇತ್ತೀಚಿನ ಫಾರ್ಮ್ ಎರಡೂ ಇದೀಗ ಆಯ್ಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ. ಅನುಭವದ ಅಗತ್ಯ ಬೇಕಿದ್ದರೆ, ಕನ್ನಡಿಗ ಪ್ರಸಿಧ್ ಹೊಸ ಚೆಂಡಿನಲ್ಲಿ ಬೌಲ್ ಮಾಡುವುದು ಬಹುತೇಕ ಖಚಿತವಾಗಲಿದೆ. ಏಕೆಂದರೆ, ಜಸ್‌ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಅವರು ಈಗಾಗಲೇ ಸರಣಿಗೆ ಅಲಭ್ಯರಾಗಿದ್ದಾರೆ.
ʻ17 ಕೆಜಿ ತೂಕ ಇಳಿಕೆʼ: ಬಿಸಿಸಿಐ ಸೆಲೆಕ್ಟರ್‌ಗಳ ನಂಬಿಕೆಯನ್ನು ಸರ್ಫರಾಝ್ ಖಾನ್ ಮರಳಿ ಪಡೆದಿದ್ದೇಗೆ?
ಗುರ್ನೂರ್ ಬ್ರಾರ್ ಅವರು ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದರು. ಅವರು ಹೆಚ್ಚುವರಿ ಬೌನ್ಸ್ ಹಾಗೂ ಲೈನ್ ಅಂಡ್ ಲೆನ್ತ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಆ ಮೂಲಕ ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಪರಿಣಾಮಕಾರಿಯಾಗಿದ್ದರು. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಅವರು ಉಪಯುಕ್ತ ಕಾಣಿಕೆಯನ್ನು ನೀಡಿದ್ದರು. ಎರಡನೇ ದಿನದಾಟದ ಕೊನೆಯ ಓವರ್‌ನಲ್ಲಿ ಅವರು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದರು. ಕೇವಲ 18 ಎಸೆತಗಳಲ್ಲಿ ಅಜೇಯ 36 ರನ್‌ಗಳನ್ನು ಸಿಡಿಸಿದ್ದರು.
ಇನ್ನು ಪ್ರಸಿಧ್ ಕೃಷ್ಣ ಅವರ ಬಗ್ಗೆ ಮಾತನಾಡುವುದಾದರೆ, ಅನುಭವ ಇಲ್ಲಿ ಪ್ರಮುಖ ಸಂಗತಿಯಾದರೆ, ಬ್ರಾರ್ ಅವರ ಫಾರ್ಮ್ ಇಲ್ಲಿ ಮುಖ್ಯವಾಗುವುದಿಲ್ಲ. ಹೆಚ್ಚಿನ ಅಂತಾರಾಷ್ಟ್ರೀಯ ಅನುಭವ ಪ್ರಸಿಧ್ ಕೃಷ್ಣ ಅವರನ್ನು ಹೆಚ್ಚು ಸುರಕ್ಷಿತ ಹಾಗೂ ನಿರೀಕ್ಷಿತ ಆಯ್ಕೆಯನ್ನಾಗಿ ಮಾಡುತ್ತದೆ. ಆದರೆ, ಬ್ರಾರ್ ಅವರ ಇತ್ತೀಚಿನ ಪ್ರದರ್ಶನಗಳನ್ನು ಗಮನಿಸಿದರೆ, ಅವರು ಸರಿಯಾದ ಸಮಯದಲ್ಲೇ ತಮ್ಮ ಅತ್ಯುತ್ತಮ ಫಾರ್ಮ್‌ಗೆ ಮರಳುತ್ತಿರುವಂತೆ ಕಾಣಿಸುತ್ತಿದೆ.
ಹ್ಯಾಟ್ರಿಕ್ ಸಿಕ್ಸರ್ ಕಂಡು ಮೊಹಮ್ಮದ್ ಸಿರಾಜ್ ಬ್ಯಾಟ್ ಪರಿಶೀಲಿಸಿದ ಶ್ರೀಲಂಕಾ ಆಟಗಾರರು
ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ
1.ಯಶಸ್ವಿ ಜೈಸ್ವಾಲ್ (ಆರಂಭಿಕ ಬ್ಯಾಟ್ಸ್‌ಮನ್)
2.ಕೆಎಲ್ ರಾಹುಲ್ (ಆರಂಭಿಕ ಬ್ಯಾಟ್ಸ್‌ಮನ್)
3.ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್)
4.ಶುಭಮನ್ ಗಿಲ್ (ನಾಯಕ, ಬ್ಯಾಟ್ಸ್‌ಮನ್)
5.ರಿಷಭ್ ಪಂತ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್)
6.ರವೀಂದ್ರ ಜಡೇಜಾ (ಸ್ಪಿನ್ ಆಲ್‌ರೌಂಡರ್)
7.ಸರ್ಫರಾಝ್ ಖಾನ್/ಸಾರಾಂಶ್ ಜೈನ್ (ಬ್ಯಾಟ್ಸ್‌ಮನ್/ಸ್ಪಿನ್ ಆಲ್‌ರೌಂಡರ್)
8.ಮಾನವ್ ಸುತಾರ್ (ವೇಗದ ಬೌಲರ್)
9.ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
10.ಪ್ರಸಿಧ್ ಕೃಷ್ಣ/ಗುರ್ನೂರ್ ಬ್ರಾರ್ (ವೇಗದ ಬೌಲರ್)
11.ಕುಲ್ದೀಪ್ ಯಾದವ್ (ಸ್ಪಿನ್ನರ್)