ಕೊಲಂಬೊ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ತಮ್ಮ ಮಣ್ಣಿಕಟ್ಟಿನ ಗಾಯದ ಹೊರತಾಗಿಯೂ ಎರಡನೇ ಟೆಸ್ಟ್ ಪಂದ್ಯದ (IND vs SL) ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದರು ಹಾಗೂ ಅರ್ಧಶತಕವನ್ನು ಬಾರಿಸಿದರು. ಎರಡನೇ ದಿನ ದೀರ್ಘಾವಧಿ ಬ್ಯಾಟ್ ಮಾಡಿದ ಪಂತ್, ಶ್ರೀಲಂಕಾ ತಂಡದ ಶಾಟ್ ಬಾಲ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪಂತ್ ತಾವು ಬ್ಯಾಟ್ ಮಾಡುತ್ತಿದ್ದ ವೇಳೆ ಹಲವು ಬಾರಿ ಫಿಸಿಯೊ ಸಹಾಯವನ್ನು ಪಡೆದುಕಕೊಂಡಿದ್ದರೂ ಅವರು ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ. ಗಾಯದ ಹೊರತಾಗಿಯೂ ಬ್ಯಾಟಿಂಗ್ ಮುಂದುವರಿಸಿದರು.
ಶ್ರೀಲಂಕಾ ವೇಗದ ಬೌಲರ್ ಲಹಿರು ಕುಮಾರ್ ಬೌಲಿಂಗ್ ಅನ್ನು ರಿಷಭ್ ಪಂತ್ ಸಮರ್ಥವಾಗಿ ಮೆಟ್ಟಿ ನಿಂತರು. ಅವರು ಲೆಗ್ ಸೈಡ್ ಮೇಲೆ ಲಾಫ್ಟಿ ಸಿಕ್ಸ್ ಬಾರಿಸಿದ್ದರು. ಭಾರತ ತಂಡದ ಪ್ರಥಮ ಇನಿಂಗ್ಸ್‌ನ 90ನೇ ಓವರ್‌ನಲ್ಲಿ ಪಂತ್ ಅವರ ಬ್ಯಾಟ್‌ನಿಂದ ದೊಡ್ಡ ಸಿಕ್ಸರ್ ಮೂಡಿ ಬಂದಿತು. ಅರೌಂಡ್ ದಿ ವಿಕೆಟ್ ಬೌಲ್ ಮಾಡಿದ ಲಹಿರು ಕುಮಾರ್ ಸ್ವಲ್ಪ ಶಾರ್ಟ್ ಹಾಕಿದ್ದರು. ಇದಕ್ಕೆ ಮೊದಲೇ ತಯಾರಿಯಾಗಿದ್ದ ಪಂತ್, ಸ್ವಲ್ಪ ಮುಂದಕ್ಕೆ ಚಲಿಸಿ ಲೆಗ್‌ಸೈಡ್ ಮೇಲೆ ದೊಡ್ಡ ಸಿಕ್ಸರ್ ಬಾರಿಸಿದರು.
ಕೊಲಂಬೊದಲ್ಲಿ ದೇವದತ್ತ ಶತಕದ ಅಲೆ; ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಭಾರತ
ರಿಷಭ್ ಪಂತ್ ಅವರ ಹೊಡೆದು ಚೆಂಡು 95 ಮೀಟರ್ ದೂರ ತಲುಪಿತ್ತು ಹಾಗೂ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದ ಮೇಲ್ಛಾವಣಿಯಲ್ಲಿದ್ದ ಸೋಲಾರ್ ಪ್ಯಾನೆಲ್‌ಗೆ ಬಲವಾಗಿ ಬಡಿದಿತ್ತು. ಪ್ಯಾನೆಲ್ ಚೆಂಡು ತಗುಲಿದ್ದ ಒಡೆದು ಹೋಯಿತು. ಈ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಂದ ಹಾಗೆ ಮೊದಲನೇ ದಿನವೇ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್ ಕೇವಲ 15 ಎಸೆತಗಳನ್ನು ಎದುರಿಸಿದ ಬಳಿಕ ತಮ್ಮ ಮಣಿಕಟ್ಟಿನ ಗಾಯದಿಂದ ಬ್ಯಾಟಿಂಗ್ ಅನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ ಹಾಗೂ ಡ್ರೆಸ್ಸಿಂಗ್ ರೂಂಗೆ ಮರಳಿದ್ದರು. ಆದರೆ, ಪಂತ್ ಸಂಪೂರ್ಣ ಫಿಟ್ ಇದ್ದಾರೆ ಹಾಗೂ ಅವರು ಅಗತ್ಯಬಿದ್ದರೆ ಅವರು ಬ್ಯಾಟಿಂಗ್‌ಗೆ ಮರಳಲಿದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿತ್ತು.
ಪಂದ್ಯದ ಎರಡನೇ ದಿನವಾದ ಸೋಮವಾರ ಸಾರಾಂಶ್ ಜೈನ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ರಿಷಭ್ ಪಂತ್, ತಕ್ಷಣ ಶ್ರೀಲಂಕಾ ಬೌಲರ್‌ಗಳಿಂದ ಕಠಿಣ ಪರೀಕ್ಷೆಯನ್ನು ಎದುರಿಸಿದರು. ಲಂಕಾ ವೇಗಿಗಳು ಪಂತ್ ಅವರ ದೇಹದ ಮೇಲೆ ಬೌನ್ಸರ್‌ಗಳನ್ನು ಹಾಕಿದರು. ಆದರೂ ಪಂತ್ ಅವರನ್ನು ಕಟ್ಟಿ ಹಾಕಲು ಆತಿಥೇಯ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಕ್ರೀಸ್‌ನಲ್ಲಿ ತಮ್ಮ ಫುಟ್‌ವರ್ಕ್ ಹೊಂದಿಸಿಕೊಂಡು ಆಡುತ್ತಿದ್ದ ಪಂತ್, ಲೀಲಾ ಜಾಲವಾಗಿ ಬ್ಯಾಟ್ ಬೀಸಿದರು.
ರಿಷಭ್ ಪಂತ್ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಬ್ಯಾಟಿಂಗ್ ಕೋಚ್
ಅದ್ಭುತವಾಗಿ ಬ್ಯಾಟ್ ಮಾಡಿದ ರಿಷಭ್ ಪಂತ್, 89 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಅವರನ್ನು ಕೇಶಾರ ನುವಾಂತ ಔಟ್ ಮಾಡಿದರು. ಗಾಯದ ಹೊರತಾಗಿಯೂ ಬ್ಯಾಟ್ ಮಾಡಿ ನಿರ್ಣಾಯಕ ಅರ್ಧಶತಕವನ್ನು ಬಾರಿಸಿದ ಪಂತ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೀಗ ಭಾರತ ತಂಡ 130 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 468 ರನ್‌ಗಳನ್ನು ಗಳಿಸಿದೆ.