ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಮಿಂಚಿದ ಧ್ರುವ್‌ ಜುರೆಲ್‌ ಬಗ್ಗೆ ಮೊಹಮ್ಮದ್‌ ಕೈಫ್‌ ದೊಡ್ಡ ಹೇಳಿಕೆ!

IND vs SL: ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಧ್ರುವ್‌ ಜುರೆಲ್‌ ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಗುಣಗಾನ ಮಾಡಿದ್ದಾರೆ. ಈ ಸರಣಿಯನ್ನು ಟೀಮ್‌ ಇಂಡಿಯಾ 1-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಧ್ರುವ್‌ ಜುರೆಲ್‌ ಅವರನ್ನು ಶ್ಲಾಘಿಸಿದ ಮೊಹಮ್ಮದ್‌ ಕೈಫ್‌.

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ (IND vs SL) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟರ್‌ ಧ್ರುವ್‌ ಜುರೆಲ್‌ ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad Kaif) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಸರಣಿಯಲ್ಲಿ ಒಂದು ಶತಕ ಸೇರಿದಂತೆ ಮೂರನೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಧ್ರುವ್‌ ಜುರೆಲ್‌ ಅವರು ಶಿಸ್ತು ಹಾಗೂ ಕ್ರಮಬದ್ಧತೆಯ ಬ್ಯಾಟ್ಸ್‌ಮನ್‌ ಎಂದು ಅವರು ಬಣ್ಣಿಸಿದ್ದಾರೆ.

ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಗೆದ್ದುಕೊಂಡಿದೆ. ಟೀಮ್‌ ಇಂಡಿಯಾ ಈ ಸರಣಿ ಗೆಲುವಿನಲ್ಲಿ ದೇವದತ್‌ ಪಡಿಕ್ಕಲ್‌, ಮಾನವ್‌ ಸುತಾರ್‌ ಅವರ ಜೊತೆಗೆ ಧ್ರುವ್‌ ಜುರೆಲ್‌ ಕೂಡ ಪ್ರಮುಖ ಆಟಗಾರ. ಈ ಸರಣಿಯಲ್ಲಿ ವಿಕೆಟ್‌ ಕೀಪರ್‌ ಶತಕದ ಜೊತೆಗೆ 173 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ʻಕೇವಲ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲʼ: ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

ತಮ್ಮ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್‌ ಕೈಫ್‌, " ಧ್ರುವ್‌ ಜುರೆಲ್‌ ಅವರು ಶಿಸ್ತು ಮತ್ತು ಕ್ರಮಬದ್ಧತೆಯ ಬ್ಯಾಟ್ಸ್‌ಮನ್‌. ಬ್ಯಾಕ್‌ ಫುಟ್‌ ಪಂಚ್‌ ಹಾಗೂ ಪುಲ್‌ ಶಾಟ್‌ಗಳನ್ನು ಹೊಡೆಯಬಲ್ಲ ಅತ್ಯುತ್ತಮ ಶಿಸ್ತಿನಿಂದ ಹಾಗೂ ಕ್ರಮಬದ್ಧವಾಗಿ ಆಡುವ ಆಟಗಾರ ಇವರು. ಅವರ ಬ್ಯಾಟಿಂಗ್‌ನಲ್ಲಿ ವಿಶೇಷತೆ ಇದೆ. ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದರೂ, ಭವಿಷ್ಯದಲ್ಲಿ ಕೇವಲ ಅವರು ಬ್ಯಾಟಿಂಗ್ ಮಾಡುವುದನ್ನು ನೋಡಲೆಂದೇ ನೀವು ಟಿಕೆಟ್ ಖರೀದಿಸಿ ಪಂದ್ಯಕ್ಕೆ ಹೋಗುವಂತಹ ಬ್ಯಾಟರ್," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುರೆಲ್‌ ಫೀಲ್ಡಿಂಗ್‌ ಬಗ್ಗೆಯೂ ಕೈಫ್‌ ಗುಣಗಾನ

ಬ್ಯಾಟಿಂಗ್‌ ಜೊತೆಗೆ ಧ್ರುವ್‌ ಜುರೆಲ್‌ ಅವರ ಫೀಲ್ಡಿಂಗ್‌ ಬಗ್ಗೆಯೂ ಮೊಹಮ್ಮದ್‌ ಕೈಫ್‌ ಶ್ಲಾಘಿಸಿದ್ದಾರೆ. ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ವೇಳೆ ಅವರು ಕೆಲ ಅದ್ಭುತ ಕ್ಯಾಚ್‌ಗಳನ್ನು ಪಡೆದಿದ್ದರು. ಜುರೆಲ್‌ ಅವರ ತಯಾರಿಯ ಬಗ್ಗೆಯೂ ಕೈಫ್‌ ಮಾತನಾಡಿದ್ದಾರೆ.

ವಿರಾಟ್‌ ಕೊಹ್ಲಿ ಆಡಿದ್ದರೆ, ಕೊಲಂಬೊ ಟೆಸ್ಟ್‌ ಫಲಿತಾಂಶ ವಿಭಿನ್ನವಾಗಿರುತ್ತಿತ್ತೆಂದ ಮೊಹಮ್ಮದ್‌ ಕೈಫ್!

"ನೀವು ಅವರ ಫೀಲ್ಡಿಂಗ್‌ ಕೌಶಲದ ಬಗ್ಗೆಯೂ ಮಾತನಾಡಬಹುದು. ಅವರು ಸ್ಕೈರ್‌ ಲೆಗ್‌ನಲ್ಲಿ ಕ್ಯಾಚ್‌ಗಳನ್ನು ಪಡೆದುಕೊಂಡಿದ್ದಾರೆ. ಅವರು ವಿಕೆಟ್‌ ಕೀಪರ್‌, ಆದರೆ ಮೈದಾನದಲ್ಲಿಯೂ ಅವರು ಕ್ಯಾಚ್‌ಗಳನ್ನು ಪಡೆಯಬಹುದು. ತಕ್ಷಣ ನೀವು ಸ್ಕೈರ್‌ ಲೆಗ್‌ಗೆ ಹೋಗಿ ಫೀಲ್ಡಿಂಗ್‌ಗೆ ಹೋಗಿ ಎಂದು ಹೇಳಬಹುದು. ವಿಕೆಟ್‌ ಕೀಪರ್‌ ಆಗಿ ಅವರು ಹೇಗೆ ಇವುಗಳನ್ನು ತಯಾರಿ ನಡೆಸುತ್ತಾರೆ ಎಂಬ ಬಗ್ಗೆ ನನಗೆ ಕುತೂಹಲವಿದೆ. ವಿಕೆಟ್‌ ಕೀಪರ್‌ ಜೊತೆಗೆ ಫೀಲ್ಡಿಂಗ್‌ ಅಭ್ಯಾಸಕ್ಕೂ ನೀವು ಸಮಯವನ್ನು ನೀಡುತ್ತೀರಿ. ರಿಷಭ್‌ ಪಂತ್‌ ಗಾಯಕ್ಕೆ ತುತ್ತಾದ ಬಳಿಕ ನೀವು ವಿಕೆಟ್‌ ಕೀಪಿಂಗ್‌ ಮಾಡುತ್ತೀರಿ," ಎಂದು ಮಾಜಿ ಬ್ಯಾಟ್ಸ್‌ಮನ್‌ ಶ್ಲಾಘಿಸಿದ್ದಾರೆ.