ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ17 ಕೆಜಿ ತೂಕ ಇಳಿಕೆʼ: ಬಿಸಿಸಿಐ ಸೆಲೆಕ್ಟರ್‌ಗಳ ನಂಬಿಕೆಯನ್ನು ಸರ್ಫರಾಝ್‌ ಖಾನ್‌ ಮರಳಿ ಪಡೆದಿದ್ದೇಗೆ?

ಭಾರತ ಟೆಸ್ಟ್‌ ತಂಡಕ್ಕೆ ಮುಂಬೈ ಬ್ಯಾಟರ್‌ ಸರ್ಫರಾಝ್‌ ಖಾನ್‌ ಅವರು ಮರಳಿದ್ದಾರೆ. ಸಾಯಿ ಸುದರ್ಶನ್‌ ಗಾಯದಿಂದ ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ ಮರಳಿದ್ದಾರೆ. ಅವರು ಕಳೆದ ಒಂದೂವರೆ ವರ್ಷದಿಂದ 17 ಕೆಜಿಗಳ ತೂಕವನ್ನು ಇಳಿಸಿಕೊಂಡು ತಮ್ಮ ಫಿಟ್‌ನೆಸ್‌ ಹೆಚ್ಚಿಸಿಕೊಳ್ಳುವ ಮೂಲಕ ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದಿದ್ದಾರೆ.

17 ಕೆಜಿ ತೂಕ ಇಳಿಸಿಕೊಂಡ ಬಳಿಕ ಭಾರತ ತಂಡಕ್ಕೆ ಮರಳಿದ ಸರ್ಫರಾಝ್‌ ಖಾನ್‌.

ನವದೆಹಲಿ: ಸರ್ಫರಾಝ್‌ ಖಾನ್‌ (Sarfaraz Khan) ಅವರು ಭಾರತ ಟೆಸ್ಟ್‌ ತಂಡಕ್ಕೆ ಮರಳುವ ಕೆಲವು ದಿನಗಳ ಮೊದಲು ಸ್ಪೂರ್ತಿದಾಯಕ ಪೋಸ್ಟ್‌ವೊಂದನ್ನು ಹಾಕಿದ್ದರು. "ನಾನು ಬಹುಶಃ ಫಿಟ್‌ ಇಲ್ಲದೇ ಇರಬಹುದು, ಆದರೆ ನನ್ನಲ್ಲಿ ಇರುವ ಸಾಮರ್ಥ್ಯದ ಮೂಲಕ ಹೋರಾಟ ನಡೆಸುತ್ತೇನೆ" ಎಂದು ಸರ್ಫರಾಝ್‌ ಖಾನ್‌ ತಮ್ಮ ಫೋಟೋವೊಂದಕ್ಕೆ ಶೀರ್ಷಿಕೆಯನ್ನು ನೀಡಿದ್ದರು. ಅವರು ಈ ಪೋಸ್ಟ್‌ ಮಾಡಿದ ಕೆಲವೇ ದಿನಗಳಲ್ಲಿ ಬಿಸಿಸಿಐ ಆಯ್ಕೆದಾರರು, ಮುಂಬೈ ಬ್ಯಾಟ್ಸ್‌ಮನ್‌ಗೆ ಕರೆ ನೀಡಿದರು. ಇದೀಗ ಅವರು ಸಾಯಿ ಸುದರ್ಶನ್‌ (Sai Sudarshan) ಅವರ ಸ್ಥಾನದಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು (IND vs SL) ಆಡಲಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಆಗಸ್ಟ್‌ 15 ರಂದು ಆರಂಭವಾಗಲಿದೆ. ಈಗಾಗಲೇ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಶತಕ ಹಾಗೂ ಅರ್ಧಶತಕಗಳ ಮೂಲಕ ಈಗಾಗಲೇ ಎಲ್ಲರ ಗಮನವನ್ನು ಸೆಳೆದಿದ್ದರು. ಆದರೆ, ತದನಂತರ ಅವರು ಫಿಟ್‌ನೆಸ್‌ ಸಮಸ್ಯೆಯಿಂದ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವರು ಕಳೆದ ಒಂದೂವರೆ ವರ್ಷದಿಂದ 17 ಕೆಜಿ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.

2026-27ರ ದೇಶಿ ಕ್ರಿಕೆಟ್‌ಗೆ ತಯಾರಿ ನಡೆಸುತ್ತಿದ್ದ ವೇಳೆ ಮುಂಬೈನಲ್ಲಿ ಮನ್ಸೂನ್‌ ಮಳೆ ಅಡ್ಡಿಪಡಿಸಿದ್ದರಿಂದ ಸರ್ಫರಾಝ್‌ ಖಾನ್‌ ಅವರು ಕಾಶ್ಮೀರದಲ್ಲಿ ಅಭ್ಯಾಸ ನಡೆಸಲು ನಿರ್ಧರಿಸಿದ್ದರು ಹಾಗೂ ಇಲ್ಲಿ ಶೇರ್‌ ಇ ಕಾಶ್ಮೀರ ಕ್ರೀಡಾಂಗಣದಲ್ಲಿ ಹಲವು ದಿನಗಳಿಂದ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದರು. ಫಿಟ್‌ನೆಸ್‌ ಜತೆಗೆ ನೆಟ್ಸ್‌ನಲ್ಲಿ ದೀರ್ಘಾವಧಿ ಬ್ಯಾಟಿಂಗ್‌ ನಡೆಸುತ್ತಿದ್ದರು. ಇವರ ಕಠಿಣ ಪರಿಶ್ರಮಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ಇದೀಗ ಅವರಿಗೆ ಸಿಕ್ಕಿರುವ ಎರಡನೇ ಅವಕಾಶದಲ್ಲಿ ಸರ್ಫರಾಝ್‌ ಖಾನ್‌ ಅವರು ತಮ್ಮ ಸಂಪೂರ್ಣ ಫಿಟ್‌ನೆಸ್‌ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಬೇಕಾಗುತ್ತದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಬೇಕೆಂದ ಅಜಿಂಕ್ಯ ರಹಾನೆ!

2024ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅವರು ವಿಫಲರಾದ ಕಾರಣ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಈ ಸರಣಿಯಲ್ಲಿ ಸರ್ಫರಾಝ್‌ ಮಾತ್ರವಲ್ಲ, ಪ್ರತಿಯೊಬ್ಬ ಆಟಗಾರನೂ ಕೂಡ ವೈಫಲ್ಯತೆಯನ್ನು ಅನುಭವಿಸಿದ್ದರು. ಇದಾದ ಬಳಿಕ ಅವರು ಭಾರತ ಎ ತಂಡದ ಜೊತೆಗೆ ಇಂಗ್ಲೆಂಡ್‌ಗೆ ತೆರಳಿ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 92 ರನ್‌ಗಳನ್ನು ದಾಖಲಿಸಿದ್ದರು. ನಂತರ ಭಾರತ ಹಾಗೂ ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಗುವಾಹಟಿ ಟೆಸ್ಟ್‌ ಪಂದ್ಯಕ್ಕೆ ಸರ್ಫರಾಝ್‌ ಖಾನ್‌ ಅವರನ್ನು ಆಯ್ಕೆ ಮಾಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಿತ್ತು. ಆದರೆ, ಬಿಸಿಸಿಐ ಆಯ್ಕೆ ಸಮಿತಿಯು ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿರಲಿಲ್ಲ. ಆದರೆ, ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿಯೂ ಮುಂಬೈ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಿರಲಿಲ್ಲ. ಆದರೆ, ಸಾಯಿ ಸುದರ್ಶನ್‌ ಗಾಯಕ್ಕೆ ತುತ್ತಾದ ಬಳಿಕ ಸರ್ಫರಾಝ್‌ ಖಾನ್‌ಗೆ ಅದೃಷ್ಟ ಲಭಿಸಿತು.



ಸಾಯಿ ಸುದರ್ಶನ್‌ ಅವರ ಸ್ಥಾನಕ್ಕೆ ಬಿಸಿಸಿಐಗೆ ಮೂರು ಆಯ್ಕೆಗಳು ಇದ್ದವು. ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿರುವ ಋತುರಾಜ್‌ ಗಾಯಕ್ವಾಡ್‌ ಹಾಗೂ ಮೂರನೇ ಕ್ರಮಾಂಕದಲ್ಲಿ ಅಪಾರ ಅನುಭವ ಇರುವ ಶೇಖ್‌ ರಶೀದ್‌ ಇದ್ದರು. ಇನ್ನೂ ಮೂರನೇ ಆಯ್ಕೆಯಾಗಿ ಸರ್ಫರಾಝ್‌ ಖಾನ್‌ ಇದ್ದರು. ಸರ್ಫರಾಝ್‌ ಸ್ಪಿನ್‌ ಕಂಡೀಷನ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನುತೋರುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಧ್ರುವ್‌ ಜುರೆಲ್‌ಗಿಂತ ಸರ್ಫರಾಝ್‌ ಉತ್ತಮ ಆಯ್ಕೆ

ಇನ್ನು ಸ್ಪಿನ್ನರ್‌ಗಳ ಎದುರು ಧ್ರುವ್‌ ಜುರೆಲ್‌ ಅವರು ಉತ್ತಮವಾಗಿಲ್ಲ. ಹಾಗಾಗಿ ಆಗಸ್ಟ್‌ 15 ರಂದು ಆರಂಭವಾಗಲಿರುವ ಆರಂಭಿಕ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್‌ ಆಗಿ ಧ್ರುವ್‌ ಜುರೆಲ್‌ ಅವರನ್ನು ಆಡಿಸುವುದು ಅನುಮಾನ. ಅಲ್ಲದೆ ಜುರೆಲ್‌ ಶ್ರೀಲಂಕಾ ಇಲೆವೆನ್‌ ವಿರುದ್ಧದ ಪಂದ್ಯದಲ್ಲಿ ಆಫ್‌ ಸ್ಪಿನ್ನರ್‌ಗೆ ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬದಲು ಸರ್ಫರಾಝ್‌ ಖಾನ್‌ಗೆ ಅವಕಾಶ ನೀಡಬಹುದು.

ಸರ್ಫರಾಝ್‌ ಆಫ್‌ ಸ್ಪಿನ್ನರ್‌ ಎದುರು ದೌರ್ಬಲ್ಯವನ್ನು ಹೊಂದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿಯೂ ಆಫ್‌ ಸ್ಪಿನ್ನರ್‌ ಸೈಮನ್‌ ಹಾರ್ಮರ್‌ ಅವರಿಗೆ ಮೂರು ಬಾರಿ ವಿಕೆಟ್‌ ಒಪ್ಪಿಸಿದ್ದರು. ಹಾಗಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಜುರೆಲ್‌ಗೆ ಬೆಂಬಲ ನೀಡುವುದು ಅನುಮಾನ.

ಶ್ರೀಲಂಕಾ ಟೆಸ್ಟ್‌ ಸರಣಿ; ಸಾಯಿ ಸುದರ್ಶನ್‌ ಔಟ್‌, ಸರ್ಫರಾಜ್‌ ಖಾನ್‌ ಇನ್‌

ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ದೇವದತ್‌ ಪಡಿಕ್ಕಲ್‌, ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ಸರ್ಫರಾಝ್‌ ಖಾನ್‌, ಮಾನವ್‌ ಸುತಾರ್‌, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ/ಗುರ್ನೂರ್‌ ಬ್ರಾರ್‌, ಕುಲ್ದೀಪ್‌ ಯಾದವ್‌