ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ವಿಂಡೀಸ್‌ ಎದುರು ಟೆಸ್ಟ್‌ ಶತಕ ಸಿಡಿಸಿದ ಭಾರತೀಯ ವಿಕೆಟ್‌ಕೀಪರ್‌ಗಳ ವಿವರ!

ವೆಸ್ಟ್‌ ಇಂಡೀಸ್‌ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದರು. ಆ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವು ನೀಡಿದ್ದರು. ಇದೀಗ ವಿಂಡೀಸ್‌ ಎದುರು ಟೆಸ್ಟ್‌ ಶತಕವನ್ನು ಸಿಡಿಸಿದ ಭಾರತೀಯ ವಿಕೆಟ್‌ ಕೀಪರ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಶತಕ ಸಿಡಿಸಿದ ಭಾರತೀಯ ವಿಕೆಟ್‌ ಕೀಪರ್‌ಗಳ ವಿವರ.

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ (India) ತಂಡದ ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ (Dhruv Jurel) ತಮ್ಮ ಟೆಸ್ಟ್‌ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದ್ದಾರೆ. ಶುಕ್ರವಾರ ಎರಡನೇ ದಿನ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜುರೆಲ್‌, 210 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 125 ರನ್‌ಗಳನ್ನು ಗಳಿಸಿದರು. ಇದು ಅವರ ಟಸ್ಟ್‌ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಭಾರತ ತಂಡ 400 ರನ್‌ಗಳ ದಡಿಯನ್ನು ದಾಟಲು ನೆರವು ನೀಡಿದ್ದರು.

ಇವರ ಈ ಇನಿಂಗ್ಸ್‌ನ ಮೂಲಕ ವೆಸ್ಟ್‌ ಇಂಡೀಸ್‌ ಎದುರು ಟೆಸ್ಟ್‌ ಶತಕವನ್ನು ಬಾರಿಸಿದ ಭಾರತದ ಆರನೇ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಧ್ರುವ್‌ ಜುರೆಲ್‌ ಭಾಜನರಾಗಿದ್ದಾರೆ. ಇದೀಗ ವಿಂಡೀಸ್‌ ಎದುರು ಟೆಸ್ಟ್‌ ಶತಕವನ್ನು ಸಿಡಿಸಿದ ಭಾರತೀಯ ವಿಕೆಟ್‌ ಕೀಪರ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

IND vs WI: ತಮ್ಮ ಚೊಚ್ಚಲ ಟೆಸ್ಟ್‌ ಶತಕವನ್ನು ಭಾರತೀಯ ಸೇನೆಗೆ ಸಮರ್ಪಿಸಿದ ಧ್ರುವ್‌ ಜುರೆಲ್‌!

ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಶತಕ ಸಿಡಿಸಿದ ಭಾರತೀಯ ವಿಕೆಟ್‌ ಕೀಪರ್‌ಗಳು

1.ವಿಜಯ್‌ ಮಾಂಜ್ರೇಕರ್‌: 118 ರನ್‌ಗಳು (1953)

1953ರಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ವಿಜಯ್‌ ಮಾಂಜ್ರೇಕರ್‌ ಕೆರಿಬಿಯನ್‌ ನಾಡಿನ ಕಿಂಗ್ಸ್‌ಸ್ಟನ್‌ನಲ್ಲಿ ಶತಕವನ್ನು ಬಾರಿಸಿದ್ದರು. ಅಂದು ವೆಸ್ಟ್‌ ಇಂಡೀಸ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವಿಜಯ್‌ ಮಾಂಜ್ರೇಕರ್‌ 118 ನಿರ್ಣಾಯಕ ರನ್‌ಗಳನ್ನು ಗಳಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಭಾರತ 312 ರನ್‌ಗಳನ್ನು ಕಲೆ ಹಾಕಿದ ಬಳಿಕ ವಿಂಡೀಸ್‌, 576 ರನ್‌ ಗಳಿಸಿತ್ತು. ಈ ವೇಳೆ ದೊಡ್ಡ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಭಾರತದ ಪರ ವಿಜಯ್‌ ಮಾಂಜ್ರೇಕರ್‌ 118 ರನ್‌ಗಳ ಜೊತೆಗೆ ಎರಡನೇ ವಿಕೆಟ್‌ ರಾಯ್‌ (150 ರನ್‌) ಜೊತೆಗೆ 237 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಈ ಪಂದ್ಯ ಡ್ರಾ ಆಗಿತ್ತು.

2.ಫಾರೂಖ್‌ ಇಂಜಿನಿಯರ್‌: 109 ರನ್‌ (1967)

1967ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಚೆನ್ನೈನ ಚೆಪಾಕ್‌ ಅಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಟ್‌ ಮಾಡಿದ್ದ ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಫಾರೂಖ್‌ ಇಂಜಿನಿಯರ್‌ ಅವರು 109 ರನ್‌ಗಳನ್ನು ಕಲೆ ಹಾಕಿದ್ದರು. ಇವರು ತಮ್ಮ ಇನಿಂಗ್ಸ್‌ನಲ್ಲಿ 18 ಬೌಂಡರಿಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 404 ರನ್‌ಗಳನ್ನು ಕಲೆ ಹಾಕಿತ್ತು. ಅಂತಿಮವಾಗಿ ಭಾರತ ಗೆಲುವು ಪಡೆದಿತ್ತು.

IND vs WI: ಶತಕ ಸಿಡಿಸಿದ ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಲು ಕಾರಣ ತಿಳಿಸಿದ ಕೆಎಲ್‌ ರಾಹುಲ್‌!

3.ಅಜಯ್‌ ರಾತ್ರಾ: 115* (2002)

2002ರಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ಅಂಟಿಗುವಾದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಅಜೇಯ 115 ರನ್‌ಗಳನ್ನು ಗಳಿಸಿದ್ದ ಅಜಯ್‌ ರಾತ್ರಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ, 513-9ಕ್ಕೆ ಡಿಕ್ಲೆರ್‌ ಮಾಡಿಕೊಂಡಿತ್ತು. ಈ ವೇಳೆ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ರಾತ್ರಾ ಅಜೇಯ 115 ರನ್‌ ಗಳಿಸಿದ್ದರು. ಅಲ್ಲದೆ ವಿವಿಎಸ್‌ ಲಕ್ಷ್ಮಣ್‌ ಜೊತೆ 217 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಪಂದ್ಯ ಅಂತಿಮವಾಗಿ ಡ್ರಾ ಆಗಿತ್ತು.

4. ಎಂಎಸ್‌ ಧೋನಿ: 144 (2011)

2011ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಕಾದಾಟ ನಡೆಸಿದ್ದವು. ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಎಂಎಸ್‌ ಧೋನಿ 144 ರನ್‌ಗಳನ್ನು ದಾಖಲಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ 7 ವಿಕೆಟ್‌ ನಷ್ಟಕ್ಕೆ 631 ರನ್‌ಗಳನ್ನು ದಾಖಲಿಸಿತ್ತು. ಎಂಎಸ್‌ ಧೋನಿ ಜೊತೆಗೆ ವಿವಿಎಸ್‌ ಲಕ್ಷ್ಮಣ್‌ (176*) ಹಾಗೂ ರಾಹುಲ್‌ ದ್ರಾವಿಡ್‌ (119) ಅವರು ಕೂಡ ಶತಕಗಳನ್ನು ಬಾರಿಸಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್‌ ಹಾಗೂ 5 ರನ್‌ಗಳಿಂದ ಗೆದ್ದು ಬೀಗಿತ್ತು.

IND vs WI: 6ನೇ ಶತಕ ಬಾರಿಸಿ ಕಪಿಲ್‌ ದೇವ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ರವೀಂದ್ರ ಜಡೇಜಾ!

5.ವೃದ್ದಿಮಾನ್‌ ಸಹಾ: 104 ರನ್‌ (2016)

ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ವೃದ್ದಿಮಾನ್‌ ಸಹಾ ಅವರು 2016ರಲ್ಲಿ ಗ್ರಾಸ್‌ ಐಸ್ಲೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕವನ್ನು ಬಾರಿಸಿದ್ದರು. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಅವರು 104 ರನ್‌ಗಳನ್ನು ಬಾರಿಸಿದ್ದರು ಹಾಗೂ ಆರ್‌ ಅಶ್ವಿನ್‌ ಕೂಡ 118 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ 353 ರನ್‌ಗಳನ್ನು ದಾಖಲಿಸಿತ್ತು. ಭಾರತ 126 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಸಹಾ ಮತ್ತು ಅಶ್ವಿನ್‌ ತಲಾ ಶತಕಗಳನ್ನು ಬಾರಿಸುವ ಜೊತೆಗೆ 213 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಭಾರತ ಈ ಪಂದ್ಯವನ್ನು 237 ರನ್‌ಗಳಿಂದ ಗೆದ್ದು ಬೀಗಿತ್ತು.



6.ಧ್ರುವ್‌ ಜುರೆಲ್‌: 125 (2025)

ಇದೀಗ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತದ ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ ಅವರು ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದರು. ಅವರು ಆಡಿದ 210 ಎಸೆತಗಳಲ್ಲಿ 125 ರನ್‌ ಗಳಿಸಿದರು. ಇದು ಇವರ ಟೆಸ್ಟ್‌ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ ಆಗಿದೆ. ಅಂತಿಮವಾಗಿ ಭಾರತ ಈ ಪಂದ್ಯವನ್ನು ಇನಿಂಗ್ಸ್‌ ಅಂತರದಲ್ಲಿ ಗೆದ್ದುಕೊಂಡಿತು.