ಇಂದೋರ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಐದು ಪಂದ್ಯಗಳ ಟಿ20ಐ ಸರಣಿ ಅತ್ಯಂತ ತೀವ್ರ ಕುತೂಹಲದಿಂದ ಸಾಗುತ್ತಿದೆ. ಆರಂಭಿಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಟಿ20ಐ ಸರಣಿಯಲ್ಲಿ ಸದ್ಯ 1-1 ಸಮಬಲ ಕಾಯ್ದುಕೊಂಡಿವೆ. ಮೊದಲನೇ ಪಂದ್ಯವನ್ನು ಆರಾಮದಾಯಕವಾಗಿದ್ದ ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ 250 ರನ್‌ಗಳ ಕಠಿಣ ಗುರಿ ನೀಡಿದ್ದರ ಹೊರತಾಗಿಯೂ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಇದು ತಂಡದ ಬೌಲಿಂಗ್ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ.
ಉಭಯ ತಂಡಗಳ ನಡುವಣ ಮೂರನೇ ಟಿ20ಐ ಪಂದ್ಯ ಅಕ್ಟೋಬರ್ 11 ರಂದು ಭಾನುವಾರ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲಿ ವೆಸ್ಟ್ ಇಂಡೀಸ್ ತಂಡಕ್ಕೆ ತಿರುಗೇಟು ನೀಡಲು ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ ಸೂಕ್ತ ಯೋಜನೆಯನ್ನು ರೂಪಿಸುತ್ತಿದೆ. ಭಾರತ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರೂ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಹಾಗಾಗಿ ಆತಿಥೇಯ ತಂಡಕ್ಕೆ ಬೌಲಿಂಗ್‌ನಲ್ಲಿ ಬದಲಾವಣೆ ಅತಗತ್ಯವಾಗಿದೆ.
IND vs WI: ಶೇಯ್ ಹೋಪ್ ಅಬ್ಬರದಿಂದ ಗೆದ್ದು ಭಾರತಕ್ಕೆ ತಿರುಗೇಟು ನೀಡಿದ ವೆಸ್ಟ್ ಇಂಡೀಸ್!
ಶಿವಂ ದುಬೇ ಔಟ್, ಪ್ರಿನ್ಸ್ ಯಾದವ್ ಇನ್?
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ವೇಗಿ ಪ್ರಿನ್ಸ್ ಯಾದವ್ ಮಧ್ಯಮ ಹಾಗೂ ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಹಾಗಾಗಿ ಕಳೆದ ಎರಡು ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದ ಶಿವಂ ದುಬೇ ಅವರನ್ನು ಕೈ ಬಿಟ್ಟು ಹೆಚ್ಚುವರಿ ವೇಗದ ಬೌಲರ್ ಆಗಿ ಪ್ರಿನ್ಸ್ ಯಾದವ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಮಣೆ ಹಾಕಬಹುದು.
ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಆಗಿ ಮಿಂಚಿದ್ದ ಶಿವಂ ದುಬೇ, ಅದೇ ಲಯವನ್ನು ವಿಂಡೀಸ್ ಟಿ20ಐ ಸರಣಿಯಲ್ಲಿ ಮುಂದುವರಿಸುವಲ್ಲಿ ವಿಫಲರಾಗಿದ್ದರು. ಎರಡನೇ ಟಿ20ಐ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ದುಬೇ 10 ಎಸೆತಗಳಲ್ಲಿ 7 ರನ್ ಗಳಿಸಿವಿಕೆಟ್ ಒಪ್ಪಿಸಿದ್ದರು. ಇವರು ಬೌಲಿಂಗ್‌ನಲ್ಲಿ ಎರಡು ಓವರ್‌ಗಳಿಗೆ 30 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
IND vs WI: ಸ್ಪೋಟಕ ಅರ್ಧಶತಕದಿಂದ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್!
ಶೇಯ್ ಹೋಪ್, ಶೆರ್ಫೆನ್ ಋದರ್‌ಫೋರ್ಡ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಅವರನ್ನು ಕಟ್ಟಿ ಹಾಕಲು ಭಾರತ ತಂಡಕ್ಕೆ ಐದನೇ ಬೌಲಿಂಗ್ ಆಯ್ಕೆ ಅಗತ್ಯವಿದೆ. ಹಾಗಾಗಿ ವೆಸ್ಟ್ ಇಂಡೀಸ್ ಮೇಲೆ ಒತ್ತಡವನ್ನು ಹೇರಲು ನಮನ್ ಧೀರ್, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೇ ಅವರಿಗಿಂತ ಪ್ರಿನ್ಸ್ ಯಾದವ್ ಉತ್ತಮ ಆಯ್ಕೆಯಾಗಿದೆ.
ಎರಡನೇ ಪಂದ್ಯದಲ್ಲಿ ಮಿಂಚಿದ್ದ ಸಂಜು
ಎರಡನೇ ಟಿ20ಐ ಪಂದ್ಯದಲ್ಲಿ 41 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸುವ ಮೂಲಕ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಅವರು ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಇವರ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನು ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ಭರ್ಜರಿ ಲಯದಲ್ಲಿ ಆಡುತ್ತಿದ್ದಾರೆ.
ಭಾರತದ ವಿರುದ್ಧ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕ ಬಾರಿಸಿದ ಶಾಯ್ ಹೋಪ್
ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
- ಅಭಿಷೇಕ್ ಶರ್ಮಾ (ಆರಂಭಿಕ)
- ಸಂಜು ಸ್ಯಾಮ್ಸನ್ (ಆರಂಭಿಕ, ವಿಕೆಟ್ ಕೀಪರ)
- ಇಶಾನ್ ಕಿಶನ್ (ಬ್ಯಾಟ್ಸ್‌ಮನ್)
- ಶ್ರೇಯಸ್ ಅಯ್ಯರ್ (ಬ್ಯಾಟ್ಸ್‌ಮನ್, ನಾಯಕ)
- ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
- ನಮನ್ ಧೀರ್ (ಆಲ್‌ರೌಂಡರ್)
- ಅಕ್ಷರ್ ಪಟೇಲ್ (ಸ್ಪಿನ್ ಆಲ್‌ರೌಂಡರ್)
- ಅರ್ಷದೀಪ್ ಸಿಂಗ್ (ವೇಗದ ಬೌಲರ್)
- ಪ್ರಿನ್ಸ್ ಯಾದವ್ (ವೇಗದ ಬೌಲರ್)
- ಕುಲ್ದೀಪ್ ಯಾದವ್ (ಸ್ಪಿನ್ನರ್)
- ಮಯಾಂಕ್ ಯಾದವ್ (ವೇಗದ ಬೌಲರ್)