ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಐಸಿಸಿ ಟೂರ್ನಿಗಳಿಂದ ಬ್ಯಾನ್‌ ಮಾಡಬೇಕೆಂದ ಪಾಕ್‌ ಮಾಜಿ ನಾಯಕ ರಶೀದ್‌ ಲತಿಫ್‌!

ಪಾಕಿಸ್ತಾನ ತಂಡದ ವಿರುದ್ದ 2025ರ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ನಲ್ಲಿ 5 ವಿಕೆಟ್‌ಗಳ ಗೆಲುವು ಪಡೆದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರಿಂದ ಏಷ್ಯಾ ಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಭಾರತ ತಂಡದ ಈ ನಡೆಯನ್ನು ಪಾಕ್‌ ಮಾಜಿ ನಾಯಕ ರಶೀದ್‌ ಲತಿಫ್‌ ಖಂಡಿಸಿದ್ದಾರೆ.

ಭಾರತ ತಂಡವನ್ನು ಬ್ಯಾನ್‌ ಮಾಡಬೇಕೆಂದ ರಶೀದ್‌ ಲತಿಫ್‌!

ಭಾರತ ತಂಡವನ್ನು ಬ್ಯಾನ್‌ ಮಾಡಬೇಕೆಂದ ರಶೀದ್‌ ಲತಿಫ್. -

Profile Ramesh Kote Sep 29, 2025 3:50 PM

ದುಬೈ: ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ (Mohsin Naqvi) ಅವರಿಂದ 2025ರ ಏಷ್ಯಾ ಕಪ್‌ (Asia Cup 2025) ಟ್ರೋಫಿ ಪಡೆಯಲು ನಿರಾಕರಿಸಿದ್ದ ಭಾರತ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಟೂರ್ನಿಗಳಿಂದ ಅಮಾನತುಗೊಳಿಸಬೇಕೆಂದು ಪಾಕಿಸ್ತಾನ ಮಾಜಿ ನಾಯಕ ರಶೀದ್‌ ಲತಿಫ್‌ ( RAshid Latif) ಅವರು ಆಗ್ರಹಿಸಿದ್ದಾರೆ. ಇಂಥಾ ವರ್ತನೆಗಳು ಕ್ರೀಡೆಯಲ್ಲಿನ ಶಿಸ್ತು ಕ್ರಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ, ಐಸಿಸಿ ಆಡಳಿತ ಮಂಡಳಿಯಲ್ಲಿ ಭಾರತೀಯರ ನಾಯಕತ್ವ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಟೀಮ್‌ ಇಂಡಿಯಾ ವಿರುದ್ದ ಐಸಿಸಿ ಶಿಕ್ಷೆಯನ್ನು ನೀಡುವುದು ಅನುಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಘಟನೆಯನ್ನು "ಕ್ರಿಕೆಟ್‌ಗೆ ಕೊಳಕು ದಿನ" ಎಂದು ಬಣ್ಣಿಸಿದ ಲತಿಫ್, ಭಾರತ ತಂಡವು ಆಟದ ಉತ್ಸಾಹವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದರು. ಭಾರತವು ಮೊಹ್ಸಿನ್‌ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಡ್ಡಿಯಾಯಿತು, ಇದರಿಂದಾಗಿ ಆಯೋಜಕರ ಯೋಜನೆಗಳನ್ನು ಮೊಟಕುಗೊಳಿಸಬೇಕಾಯಿತು.

Asia Cup 2025 final: ಪಾಕ್‌ ಮಣಿಸಿದ ಟೀಮ್ ಇಂಡಿಯಾಗೆ ಬಿಗ್ ಗಿಫ್ಟ್ ನೀಡಿದ ಬಿಸಿಸಿಐ

"ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಯೋಜನೆಯ ಟೂರ್ನಿಗಳಿಂದ ಭಾರತೀಯ ಕ್ರಿಕೆಟ್‌ ಅನ್ನು ಅಮಾನತುಗೊಳಿಸಬೇಕು. ಬೇರೆ ಯಾವುದೇ ಕ್ರೀಡೆಯಲ್ಲಿ ಇದು ಮುಕ್ತ ಮತ್ತು ಮುಚ್ಚಿದ ಪ್ರಕರಣವಾಗುತ್ತಿತ್ತು. ಆದರೆ ಐಸಿಸಿ ಅಧ್ಯಕ್ಷರು, ಸಿಇಒ, ಸಿಎಫ್‌ಒ, ವಾಣಿಜ್ಯ ಮುಖ್ಯಸ್ಥರು ಮತ್ತು ಈವೆಂಟ್ಸ್ ಮತ್ತು ಕಮ್ಯುನಿಕೇಷನ್ಸ್ ಮುಖ್ಯಸ್ಥರು ಭಾರತೀಯರಾಗಿರುವುದರಿಂದ, ಅಮಾನತುಗೊಳಿಸುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ," ಎಂದು ರಶೀದ್‌ ಲತಿಫ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೇಳಿದ್ದಾರೆ.

"ಭಾರತ ಮತ್ತೊಮ್ಮೆ ಸಜ್ಜನರ ಆಟದ ಸ್ಫೂರ್ತಿ ಮತ್ತು ಸಾರವನ್ನು ಉಲ್ಲಂಘಿಸಿದ್ದು ಕ್ರಿಕೆಟ್‌ಗೆ ಕೊಳಕು ದಿನ, ಅದು ಕೂಡ ಹಗಲು ಹೊತ್ತಿನಲ್ಲಿ," ಎಂದು ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಾಕಿಸ್ತಾನ ತಂಡ, ತನ್ನ ಪಾಲಿನ 19.1 ಓವರ್‌ಗಳಿಗೆ 146 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, 19.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 150 ರನ್‌ಗಳನ್ನು ಕಲೆ ಹಾಕಿ ಗೆದ್ದು ಬೀಗಿತು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ ಏಷ್ಯಾ ಕಪ್‌ ಮುಡಿಗೇರಿಸಿಕೊಂಡಿತು. ಟೀಮ್‌ ಇಂಡಿಯಾ ಪಾಲಿಗೆ ಇದು 9ನೇ ಏಷ್ಯಾ ಕಪ್‌ ಗೆಲುವಾಯಿತು.

Asia Cup 2025 final: ಏಷ್ಯಾಕಪ್‌ ಗೆದ್ರೂ ಟ್ರೋಫಿ ಎತ್ತಿಹಿಡಿಯದ ಭಾರತ; ಚೆಕ್‌ ಬಿಸಾಡಿದ ಪಾಕ್‌ ನಾಯಕ!

ಸೂರ್ಯಕುಮಾರ್‌ ಯಾದವ್‌ ಹೇಳಿದ್ದೇನು?

"ನನ್ನ ಕ್ರಿಕೆಟ್‌ ದಿನಗಳ ವರ್ಷಗಳಲ್ಲಿ ನಾನು ಈ ರೀತಿಯ ಘಟನೆಯನ್ನು ಎಂದಿಗೂ ನೋಡಿಲ್ಲ. ಕಷ್ಟಪಟ್ಟು ಗೆದ್ದ ಟ್ರೋಫಿಯನ್ನು ಚಾಂಪಿಯನ್‌ ತಂಡವೊಂದು ಸ್ವೀಕರಿಸಲು ನಿರಾಕರಿಸಿದೆ. ಇದು ಸುಲಭವಲ್ಲ. ನಾವು ಸತತವಾಗಿ ಎರಡು ಬಲಿಷ್ಠ ಪಂದ್ಯಗಳನ್ನು ಆಡಿದ್ದೇವೆ. ನಾವು ಇದನ್ನು ಪಡೆಯಲು ನಿಜವಾಗಿ ಅರ್ಹರು. ಇದಕ್ಕಿಂತ ಜಾಸ್ತಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ," ಎಂದು ಸೂರ್ಯಕುಮಾರ್‌ ಯಾದವ್‌ ತಿಳಿಸಿದ್ದಾರೆ.