ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ಎರಡನೇ ಒಡಿಐನಲ್ಲಿ ಮೊಹಮ್ಮದ್‌ ಸಿರಾಜ್‌ ಆಡದೇ ಇರಲು ಕಾರಣವೇನು? ಇಲ್ಲಿದೆ 2 ಕಾರಣ!

Why is Mohammed Siraj Not Playing in 2nd ODI: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ ಅವರು, ಎರಡನೇ ಏಕದಿನ ಪಂದ್ಯದಲ್ಲಿಯೂ ಭಾರತದ ಪ್ಲೇಯಿಂಗ್‌ Xiನಲ್ಲಿ ಅವಕಾಶ ಸಿಗಲಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

ಎರಡನೇ ಒಡಿಐನಲ್ಲಿ ಸಿರಾಜ್‌ ಆಡದೇ ಇರಲು ಕಾರಣವೇನು?

ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ (IND vs WI) ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಕಾದಾಟ ನಡೆಸುತ್ತಿವೆ. ತಿರುವನಂತಪುರಂನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ಮೊಹಮ್ಮದ್‌ ಸಿರಾಜ್‌ (Mohammed Siraj), ಇದೀಗ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿಯೂ ಭಾರತದ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗಲಿಲ್ಲ. ಕಳೆದ ಪಂದ್ಯವನ್ನು ಆಡಿದ್ದ ಆಲ್‌ರೌಂಡರ್‌ ನಿತೀಶ್‌ ರೆಡ್ಡಿ ಬದಲು ಗುವಾಹಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವೇಗಿ ಆಕಿಬ್‌ ನಬಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು.

ಮೊದಲನೇ ಪಂದ್ಯದ ಪವರ್‌ಪ್ಲೇನಲ್ಲಿ ಭಾರತದ ಬೌಲರ್‌ಗಳು ವಿಂಡೀಸ್‌ ಬೌಲರ್‌ಗಳ ಎದುರು ಪರದಾಡಿದ್ದರು. ಅದರಲ್ಲಿಯೂ ವಿಶೇಷವಾಗಿ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಹಾಗಾಗಿ ಎರಡನೇ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಎರಡನೇ ಒಡಿಐನಲ್ಲಿಯೂ ಹಿರಿಯ ವೇಗಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ನಿರಾಶೆ ಮೂಡಿಸಿತು. ಇದೀಗ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಪ್ರಸಿಧ್‌ ಕೃಷ್ಣ, ಗುರ್ನೂರ್‌ ಬ್ರಾರ್‌ ಹಾಗೂ ಆಕಿಬ್‌ ನಬಿ ಆಡುತ್ತಿದ್ದಾರೆ.

IND vs WI: ಶತಕ ಸಿಡಿಸಿದ್ದ ಜಸ್ಟಿನ್‌ ಗ್ರೀವ್ಸ್‌ ಎರಡನೇ ಒಡಿಐನಿಂದ ಔಟ್‌, ವೆಸ್ಟ್‌ ಇಂಡೀಸ್‌ಗೆ ಆಘಾತ!

ಮೊಹಮ್ಮದ್‌ ಸಿರಾಜ್‌ ಎರಡನೇ ಪಂದ್ಯದಲ್ಲಿ ಏಕೆ ಆಡುತ್ತಿಲ್ಲ?

ಮೊಹಮ್ಮದ್‌ ಸಿರಾಜ್‌ ಅವರು ಎರಡನೇ ಏಕದಿನ ಪಂದ್ಯದಲ್ಲಿ ಆಡದೇ ಇರಲು ನಾವು ಎರಡು ಕಾರಣಗಳನ್ನು ನೀಡಬಹುದು. ಮೊದಲನೇ ಕಾರಣವನ್ನು ನೋಡುವುದಾದರೆ, ಸಿರಾಜ್‌ ಅವರು ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ ಫಾರ್ಮ್‌ ಕಳೆದುಕೊಂಡಿದಾರೆ. ಈ ಕಾರಣದಿಂದಲೇ ಅವರು ಭಾರತದ ಕೊನೆಯ ಸರಣಿಯಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದರು. ಅಂದ ಹಾಗೆ ಸಿರಾಜ್‌ ಅವರನ್ನು ಕೈಬಿಡುತ್ತಿರುವ ಬಗ್ಗೆ ಬಿಸಿಸಿಐ ಕೂಡ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಎರಡಬೇ ಕಾರಣ ನೋಡುವುದಾದರೆ, ಮುಂದಿನ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಇದೆ, ಹಾಗಾಗಿ ಎಲ್ಲಾ ಯುವ ವೇಗಿಗಳಿಗೂ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿ, ಅವರ ಸಾಮರ್ಥ್ಯವನ್ನು ನೋಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸುತ್ತಿರಬಹುದು. ಗುರ್ನೂರ್‌ ಬ್ರಾರ್‌, ಪ್ರಸಿಧ್‌ ಕೃಷ್ಣ ಹಾಗೂ ಆಕಿಬ್‌ ನಬಿ ಅವರಿಗೆ ಒಡಿಐ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ನೀಡಿ, ಅವರು ಹೇಗೆ ಪ್ರದರ್ಶನ ತೋರಲಿದ್ದಾರೆಂಬುದನ್ನು ಬಿಸಿಸಿಐ ಪರೀಕ್ಷೆ ಮಾಡುತ್ತಿರಬಹುದು.



ಟಾಸ್‌ ವೇಳೆ ಶುಭಮನ್‌ ಗಿಲ್‌ ಏನು ಹೇಳಿದ್ದರು?

ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ಬಳಿಕ ಮಾತನಾಡಿದ ಶುಭಮನ್‌ ಗಿಲ್‌, ಭಾರತದ ಪ್ಲೇಯಿಂಗ್‌ XI ಬಗ್ಗೆ ಮಾಹಿತಿ ನೀಡಿದರು. ಈ ಪಂದ್ಯದಲ್ಲಿ ಒಂದು ಬದಲಾಣವಣೆಯನ್ನು ತರಲಾಗಿದ್ದು, ನಿತೀಶ್‌ ಕುಮಾರ್‌ ರೆಡ್ಡಿ ಬದಲು ಆಕಿಬ್‌ ನಬಿಗೆ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಿದರು. ಆದರೆ, ಮೊಹಮ್ಮದ್‌ ಸಿರಾಜ್‌ ಅವರನ್ನು ಏಕೆ ಬೆಂಚ್‌ ಕಾಯಿಸಲಾಗುತ್ತಿದೆ ಎಂಬ ಬಗ್ಗೆ ಎಲ್ಲಿಯೂ ಅವರು ಮಾತನಾಡಲಿಲ್ಲ.

ಎರಡನೇ ಏಕದಿನ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ (ನಾಯಕ), ವಿರಾಟ್‌ ಕೊಹ್ಲಿ, ಋತುರಾಜ್‌ ಗಾಯಕ್ವಾಡ್‌. ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ನಮನ್‌ ಧೀರ್‌, ರವೀಂದ್ರ ಜಡೇಜಾ, ಆಕಿಬ್‌ ನಬಿ, ಗುರ್ನೂರ್‌ ಬ್ರಾರ್‌, ಕುಲ್ದೀಪ್‌ ಯಾದವ್‌, ಪ್ರಸಿಧ್‌ ಕೃಷ್ಣ

ವೆಸ್ಟ್‌ ಇಂಡೀಸ್‌: ಜಾನ್‌ ಕ್ಯಾಂಬೆಲ್‌, ಕೀಸಿ ಕಾರ್ಟಿ, ಶೇಯ್‌ ಹೋಪ್‌ (ನಾಯಕ/ವಿಕೆಟ್‌ ಕೀಪರ್‌), ಆಮಿರ್‌ ಜಾಂಗೊ, ಶೇರ್ಫೆನ್‌ ಋದರ್‌ಫೋರ್ಡ್‌, ರಾಸ್ಟನ್‌ ಚೇಸ್‌, ಕೀಮೋ ಪಾಲ್‌, ಆಲ್ಝರಿ ಜೋಸೆಫ್‌, ಶಮರ್‌ ಜೋಸೆಫ್‌, ಜೇಡನ್‌ ಸೀಲ್ಸ್‌, ವಿಟಲ್‌ ಲಾವ್ಸ್‌