ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ಸಿಗದೆ ಇರಲು ಕಾರಣವೇನು?

ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಶ್ರೇಯಸ್‌ ಅಯ್ಯರ್‌ ಅವರನ್ನು ಕಡೆಗಣಿಸಲಾಗಿದೆ. ಬಲಗೈ ಬ್ಯಾಟ್ಸ್‌ಮನ್‌ಗೆ ವಿಂಡೀಸ್‌ ಟೆಸ್ಟ್‌ ಸರಣಿಗೆ ಆಯ್ಕೆ ಮಾಡದೇ ಇರಲು ಕಾರಣವೇನೆಂದು ಬಿಸಿಸಿಐ ಬಹಿರಂಗಪಡಿಸಿದೆ.

ಟೆಸ್ಟ್‌ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದೆ ಇರಲು ಕಾರಣ ಬಹಿರಂಗವಾಗಿದೆ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿ ಮುಗಿದ ಬೆನ್ನಲ್ಲೆ ವೆಸ್ಟ್‌ ಇಂಡೀಸ್‌ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು (IND vs WI) ಭಾರತ ತಂಡ ಆಡಲಿದೆ. ಈ ಟೆಸ್ಟ್‌ ಸರಣಿಗೆ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 14 ಸದಸ್ಯರ ಭಾರತ ಟೆಸ್ಟ್‌ ತಂಡವನ್ನು ಪ್ರಕಟಿಸಿದೆ. ಅಕ್ಟೋಬರ್‌ 2 ರಂದು ಮೊದಲನೇ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಯಲ್ಲಿಯೂ ಕೂಡ ಭಾರತ ತಂಡವನ್ನು ಶುಭಮನ್‌ ಗಿಲ್‌ ಮುನ್ನಡೆಸಲಿದ್ದಾರೆ. ರವೀಂದ್ರ ಜಡೇಜಾಗೆ ಉಪ ನಾಯಕತ್ವವನ್ನು ನೀಡಲಾಗಿದೆ. ಆದರೆ, ದೀರ್ಘಾವಧಿ ಭಾರತ ಟೆಸ್ಟ್‌ ತಂಡದಲ್ಲಿ ಆಡಿದ ಅನುಭವವನ್ನು ಹೊಂದಿರುವ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನು ಕೈ ಬಿಡುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯು ಅಚ್ಚರಿ ಮೂಡಿಸಿದೆ.

ವಿಂಡೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಬಿಸಿಸಿಐ ಇರಾನಿ ಟ್ರೋಫಿ ಹಾಗೂ ಆಸ್ಟ್ರೇಲಿಯಾ ಎದುರಿನ ಅನಧಿಕೃತ ಒಡಿಐ ಸರಣಿಗೂ ತಂಡಗಳನ್ನು ಪ್ರಕಟಿಸಿತ್ತು. ಇರಾನಿ ಟ್ರೋಫಿಯ ಶೇಷ ಭಾರತ ತಂಡದಲ್ಲಿಯೂ ಶ್ರೇಯಸ್‌ ಅಯ್ಯರ್‌ಗೆ ಸ್ಥಾನವನ್ನು ನೀಡಿಲ್ಲ. ಅಂದ ಹಾಗೆ ಶ್ರೇಯಸ್‌ ಅಯ್ಯರ್‌ಗೆ ತಂಡದಲ್ಲಿ ಏಕೆ ಸ್ಥಾನವನ್ನು ನೀಡಿಲ್ಲ ಎಂಬ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ಬೆನ್ನು ಗಾಯದಿಂದ ಗುಣಮುಖರಾಗಲು ತಮಗೆ ರೆಡ್‌ ಬಾಲ್‌ ಕ್ರಿಕೆಟ್‌ನಿಂದ ಆರು ತಿಂಗಳ ವಿಶ್ರಾಂತಿಯನ್ನು ನೀಡಬೇಕೆಂದು ಸ್ವತಃ ಶ್ರೇಯಸ್‌ ಅಯ್ಯರ್‌ ಅವರೇ ಮನವಿ ಮಾಡಿದ್ದಾರೆಂದು ಬಿಸಿಸಿಐ ತಿಳಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ದೀರ್ಘಾವಧಿ ಆಡಬೇಕಾಗಿರುವ ಕಾರಣ ಬೆನ್ನು ನೋವು ಹಾಗೂ ಬಿಗಿತ ಉಂಟಾಗುತ್ತದೆ. ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಸಹಿಷ್ಣುತೆ ಹಗೂ ಸ್ಥಿತಿಸ್ಥಾಪಕತ್ವವನ್ನು ಬೆಳೆಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿದೆ.

India Squad Announcement: ವಿಂಡೀಸ್‌ ಟೆಸ್ಟ್‌ ಸರಣಿಗೆ ಇಂದು ಮಧ್ಯಾಹ್ನ ಭಾರತ ತಂಡ ಪ್ರಕಟ

"ರೆಡ್‌ ಬಾಲ್‌ ಕಿಕೆಟ್‌ನಿಂದ ಆರು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಬೇಕೆಂದು ಶ್ರೇಯಸ್‌ ಅಯ್ಯರ್‌ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಬೆನ್ನು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್‌ ಇದೀಗ ಗುಣಮುಖರಾಗುತ್ತಿದ್ದಾರೆ. ಅವರು ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ ಆಡುವಾಗ ಪುನರಾವರ್ತಿತ ಬೆನ್ನು ಸೆಳೆತ ಮತ್ತು ಬಿಗಿತವನ್ನು ಅನುಭವಿಸಿದ್ದಾರೆ. ಈ ಅವಧಿಯನ್ನು ಸಹಿಷ್ಣುತೆ, ದೇಹದ ಸ್ಥಿತಿಸ್ಥಾಪಕತ್ವ ಮತ್ತು ತನ್ನ ಫಿಟ್ನೆಸ್ ಅನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲು ಅವರು ಬಯಸುತ್ತಿದ್ದಾರೆ. ಅವರ ಈ ನಿರ್ಧಾರದ ಹಿನ್ನೆಲೆಯಲ್ಲಿ ಅವರನ್ನು ಇರಾನಿ ಕಪ್‌ಗೆ ಆಯ್ಕೆಗೆ ಪರಿಗಣಿಸಿಲ್ಲ," ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.



ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್‌ ಜುರೆಲ್, ರವೀಂದ್ರ ಜಡೇಜಾ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ಕುಲ್‌ದೀಪ್ ಯಾದವ್, ಎನ್ ಜಗದೀಶನ್

Shreyas Iyer: ಇಂಡಿಯಾ ಎ ತಂಡ ಪ್ರಕಟ; ಅಯ್ಯರ್‌ಗೆ ನಾಯಕತ್ವದ ಹೊಣೆ

ಭಾರತ VS ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಯ ವೇಳಾಪಟ್ಟಿ

ಮೊದಲನೇ ಟೆಸ್ಟ್‌ ಪಂದ್ಯ: ಅಕ್ಟೋಬರ್‌ 2ರಿಂದ 6-ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌

ಎರಡನೇ ಟೆಸ್ಟ್‌ ಪಂದ್ಯ: ಅಕ್ಟೋಬರ್‌ 10ರಿಂದ 14-ಅರುಣ್‌ ಜೆಟ್ಲಿ ಕ್ರೀಡಾಂಗಣ, ದೆಹಲಿ