ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಇನ್; ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು ಸೋತಿದ್ದ ಭಾರತ ತಂಡ ಇದೀಗ ಜಿಂಬಾಬ್ವೆ ಪ್ರವಾಸವನ್ನು ಹಮ್ಮಿಕೊಂಡಿದೆ. ಜುಲೈ 23 ರಂದು ಮೊದಲನೇ ಪಂದ್ಯದ ಮೂಲಕ ಟಿ20ಐ ಸರಣಿ ಆರಂಭವಾಗಲಿದೆ. ಶ್ರೇಯಸ್‌ ಅಯ್ಯರ್‌ ತಮ್ಮ ನಾಯಕತ್ವದಲ್ಲಿ ಮೊದಲ ಟಿ20ಐ ಸರಣಿಯ ಗೆಲುವಿನಲ್ಲಿದ್ದಾರೆ.

ಜಿಂಬಾಬ್ವೆ ವಿರುದ್ಧ ಮೊದಲನೇ ಟಿ20ಐ ಭಾರತದ ಸಂಭಾವ್ಯ ಪ್ಲೇಯಿಂಗ್‌ XI.

ಹರಾರೆ: ಇಂಗ್ಲೆಂಡ್‌ ವಿರುದ್ಧ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೂ ತಮ್ಮ ನೈಜ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಇದೀಗ ಮತ್ತೊಂದು ಅವಕಾಶ ಸಿಕ್ಕಿದೆ. ಸಂಜು ಸ್ಯಾಮ್ಸನ್‌ ಅವರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ(IND vs ZIM) ಭಾರತದ ಪರ ಇನಿಂಗ್ಸ್‌ ಆರಂಭಿಸಲು 15ರ ವಯಸ್ಸಿನ ಆಟಗಾರನಿಗೆ ಅವಕಾಶ ಲಭಿಸಲಿದೆ. ಅಭಿಷೇಕ್‌ ಶರ್ಮಾ ಹಾಗೂ ವೈಭವ ಸೂರ್ಯವಂಶಿ ಹರಾರೆಯಲ್ಲಿ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಮೊದಲನೇ ಹಣಾಹಣಿ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡ ಸಜ್ಜಾಗುತ್ತಿದೆ.

ಇಶಾನ್‌ ಕಿಶನ್‌ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದು, ಇಂಗ್ಲೆಂಡ್‌ನಲ್ಲಿನ ವೈಫಲ್ಯವನ್ನು ಮೆಟ್ಟಿ ನಿಲ್ಲಲು ಇದು ಸರಿಯಾದ ಅವಕಾಶವಾಗಿದೆ. ಇನ್ನು ನಾಯಕನಾಗಿ ಶ್ರೇಯಸ್‌ ಅಯ್ಯರ್‌ ಮೊದಲ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದ್ದಾರೆ. ಏಕೆಂದರೆ ನಾಯಕನಾಗಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಸೋಲು ಅನುಭವಿಸಿದ್ದಾರೆ. ಅದರಲ್ಲಿಯೂ ಬೇಸರದ ಸಂಗತಿ ಏನೆಂದರೆ ಕ್ರಿಕೆಟ್‌ ಶಿಶು ಐರ್ಲೆಂಡ್‌ ವಿರುದ್ಧದ ವೈಟ್‌ ವಾಷ್‌ ಆಘಾತ. ಅಂದ ಹಾಗೆ ಮೂರು ಹಾಗೂ ನಾಲ್ಕನೇ ಕ್ರಮಾಂಕಗಳಲ್ಲಿ ಕ್ರಮವಾಗಿ ಇಶಾನ್‌ ಕಿಶನ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಆಡಲಿದ್ದಾರೆ.

IND vs ZIM: ಜಿಂಬಾಬ್ವೆಗೆ ಆಗಮಿಸಿದ ವೈಭವ್‌ ಸೂರ್ಯವಂಶಿ ಬಗ್ಗೆ ಸಿಕಂದರ್‌ ರಾಝಾ ದೊಡ್ಡ ಹೇಳಿಕೆ!

ಇನ್ನು ಆಂಗ್ಲರ ನಾಡಿನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಉಪ ನಾಯಕ ತಿಲಕ್‌ ವರ್ಮಾ ಐದನೇ ಕ್ರಮಾಂಕದಲ್ಲಿ ಕಮ್‌ಬ್ಯಾಕ್‌ ಮಾಡಲು ಬಯಸಿದರೆ, ಆಲ್‌ರೌಂಡರ್‌ ಶಿವಂ ದುಬೇ ಆರನೇ ಕ್ರಮಾಂಕದಲ್ಲಿ ದಂಡಿಸಲು ಎದುರು ನೋಡುತ್ತಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್‌ ಬಳಿಕ ಭಾರತ ತಂಡದಿಂದ ಹೊರಗೆ ಉಳಿದಿದ್ದ ಮ್ಯಾಚ್‌ ಫಿನಿಷರ್‌ ರಿಂಕು ಸಿಂಗ್‌ ತಂಡಕ್ಕೆ ಮರಳಿದ್ದು, ಅವರು ಏಳನೇ ಕ್ರಮಾಂಕದಲ್ಲಿ ತಂಡಕ್ಕೆ ನೆರವು ನೀಡಲಿದ್ದಾರೆ.

ಕಳೆದ ಟಿ20ಐ ಸರಣಿಗಳಲ್ಲಿ ಆಡಿದ್ದ ಬಹುತೇಕ ಅದೇ ಬ್ಯಾಟಿಂಗ್‌ ಲೈನ್‌ ಅಪ್‌ ಅನ್ನು ಉಳಿಸಿಕೊಳ್ಳಲಾಗಿದೆ. ಇನ್ನು ಹರ್ಷ್‌ ದುಬೇಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾಪಣೆ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ದೀರ್ಘಾವಧಿ ಗಾಯದ ವಿಶ್ರಾಂತಿಯ ಬಳಿಕ ಭಾರತ ತಂಡಕ್ಕೆ ಮರಳಿರುವ ಮಯಾಂಕ್‌ ಯಾದವ್‌, ಎರಡು ವರ್ಷಗಳ ಬಳಿಕ ಭಾರತದ ಪ್ಲೇಯಿಂಗ್‌ XIನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಅಶೋಕ್‌ ಶರ್ಮಾ ಅಥವಾ ಯಶ್‌ ಠಾಕೂರ್‌ ಅವರ ನಡುವೆ ಒಬ್ಬರು ಡೆಬ್ಯೂಟ್‌ ಮಾಡುವ ಸಾಧ್ಯತೆ ಇದೆ.

IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ!

ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ, ವೈಭವ್‌ ಸೂರ್ಯವಂಶಿ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ರಿಂಕು ಸಿಂಗ್‌, ಶಿವಂ ದುಬೇ, ಹರ್ಷ್‌ ದುಬೇ, ಪ್ರಿನ್ಸ್‌ ಯಾದವ್‌, ಅಶೋಕ್‌ ಶರ್ಮಾ/ಯಶ್‌ ಠಾಕೂರ್‌, ಮಯಾಂಕ್‌ ಯಾದವ್‌