ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಗೆ ಭಾರತ ಎ ತಂಡ ಪ್ರಕಟ, ತಿಲಕ್‌ ವರ್ಮಾಗೆ ನಾಯಕತ್ವ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 2026ರ ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಗೆ ಭಾರತ ಎ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕನಾಗಿ ತಿಲಕ್ ವರ್ಮಾ ಅವರನ್ನು ನೇಮಕ ಮಾಡಲಾಗಿದೆ. ಈ ತಂಡದಲ್ಲಿ ವೈಭವ್‌ ಸೂರ್ಯವಂಶಿಗೆ ಸ್ಥಾನವನ್ನು ನೀಡಲಾಗಿದೆ.

ಭಾರತ ಎ ತಂಡಕ್ಕೆ ತಿಲಕ್‌ ವರ್ಮಾ ನಾಯಕ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ 2026ರ ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ (Rising Stars Asia Cup 2026) ಭಾರತ ಎ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕನಾಗಿ ಯುವ ಬ್ಯಾಟರ್ ತಿಲಕ್ ವರ್ಮಾ (Tilak Verma) ಅವರನ್ನು ನೇಮಕ ಮಾಡಲಾಗಿದೆ. ರಜತ್ ಪಾಟೀದಾರ್ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬಾರಿ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ನವೆಂಬರ್ 19ರಿಂದ 29ರವರೆಗೆ ಟೂರ್ನಿ ಆಯೋಜನೆಯಾಗಲಿದೆ.

ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ರಜತ್ ಪಾಟೀದಾರ್, ರಿಂಕು ಸಿಂಗ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯೊಂದಿಗೆ ಭಾರತ ಎ ತಂಡ ಕಣಕ್ಕಿಳಿಯಲಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ವೇಗಿ ಹರ್ಷಿತ್ ರಾಣಾ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ. ಅವರ ಪುನರಾಗಮನ ಈ ಟೂರ್ನಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

IND vs NZ: ʻಟಿ20ಐ ಸರಣಿಯಲ್ಲಿ ಬೆಂಚ್‌ ಕಾಯಿಸಿದ್ದೀರಿ, ಒಡಿಐನಲ್ಲಿ ಕುಲ್ದೀಪ್‌ ಯಾದವ್‌ಗೆ ಚಾನ್ಸ್‌ ಕೊಡಿʼ-ಅಜಿಂಕ್ಯ ರಹಾನೆ!

ಭಾರತ ಎ ತಂಡ ಯಾವ ಗುಂಪಿನಲ್ಲಿದೆ?

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಎ ತಂಡವನ್ನು ಬಿ ಗುಂಪಿನಲ್ಲಿ ಇರಿಸಲಾಗಿದೆ. ಈ ಗುಂಪಿನಲ್ಲಿ ಯುಎಇ, ನೇಪಾಳ ಮತ್ತು ಪಾಕಿಸ್ತಾನ ಎ ತಂಡಗಳು ಸ್ಥಾನ ಪಡೆದಿವೆ. ಮತ್ತೊಂದೆಡೆ, ಎ ಗುಂಪಿನಲ್ಲಿ ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಶ್ರೀಲಂಕಾ ಎ ತಂಡಗಳು ಸ್ಥಾನ ಪಡೆದಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಭಾರತ ಎ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ

- ನವೆಂಬರ್ 20: ಭಾರತ ಎ vs ನೇಪಾಳ

- ನವೆಂಬರ್ 22: ಭಾರತ ಎ vs ಪಾಕಿಸ್ತಾನ ಎ

- ನವೆಂಬರ್ 24: ಭಾರತ ಎ vs ಯುಎಇ



ಅಭಿಷೇಕ್ ಶರ್ಮಾ-ವೈಭವ್ ಸೂರ್ಯವಂಶಿ ಆರಂಭಿಕ ಜೋಡಿ

ನವೆಂಬರ್ 19ರಂದು ಆರಂಭವಾಗಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಗಮನ ನೆಟ್ಟಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಭಿಷೇಕ್ ಶರ್ಮಾ, ಇದೇ ಲಯವನ್ನು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟೂರ್ನಿಯಲ್ಲಿಯೂ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ, ಇತ್ತೀಚಿನ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ಸರಣಿಗಳಲ್ಲಿ ವೈಭವ್ ಸೂರ್ಯವಂಶಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಕೇವಲ ಒಂದು ಪಂದ್ಯವನ್ನಾಡಿದ್ದ ಅವರು, 19 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು. ಇದೀಗ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟೂರ್ನಿಯತಲ್ಲಿ ಅವರಿಗೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದ್ದು, ಅವರ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

IND vs NZ: ರೋಹಿತ್‌-ಗಿಲ್‌ ಓಪನರ್ಸ್‌, ಮೊದಲನೇ ಒಡಿಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ಗೆ ಭಾರತ ಎ ತಂಡ

ತಿಲಕ್ ವರ್ಮಾ (ನಾಯಕ), ರಜತ್ ಪಾಟೀದಾರ್ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ರಿಂಕು ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಅರ್ಷದ್ ಖಾನ್