ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ವೆಲ್ಲಿಂಗ್ಟನ್‌ನಲ್ಲಿ ಸೋಲುವ ದವಡೆಗೆ ಸಿಲುಕಿದ್ದ ಭಾರತ ತಂಡವನ್ನು ಗೆಲ್ಲಿಸಿದ ಮಳೆರಾಯ!

IND vs NZ 2nd ODI Highlights: ಗುರ್ನೂರ್‌ ಬ್ರಾರ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ (ಡಿಎಲ್‌ಎಸ್‌ ನಿಯಮ) ಗೆದ್ದು ಬೀಗಿತು. ಆ ಮೂಲಕ ಸತತ ಎರಡು ಗೆಲುವುಗಳ ಮೂಲಕ ಟೀಮ್‌ ಇಂಡಿಯಾ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. 4 ವಿಕೆಟ್‌ ಕಿತ್ತ ಗುರ್ನೂರ್‌ ಬ್ರಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡಕ್ಕೆ 4 ವಿಕೆಟ್‌ ಜಯ.

ವೆಲ್ಲಿಂಗ್ಟನ್‌: ಗುರ್ನೂರ್‌ ಬ್ರಾರ್‌ (Gurnoor Brar) ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್‌ ಎದುರು 4 ರನ್‌ಗಳಿಂದ (ಡಿಎಲ್‌ಎಸ್‌ ನಿಯಮ) ಗೆಲುವು ಸಾಧಿಸಿತು. ಆರಂಭಿಕ ಎರಡೂ ಪಂದ್ಯಗಳ ಗೆಲುವಿನಿಂದ ಟೀಮ್‌ ಇಂಡಿಯಾ 5 ಪಂದ್ಯಗಳ ಒಡಿಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದಿವೆ. ಇನ್ನು 7 ವಿಕೆಟ್‌ ಕಿತ್ತು ಗೆಲುವಿನ ವಿಶ್ವಾಸವನ್ನು ಹೊಂದಿದ್ದ ಕಿವೀಸ್‌ಗೆ ಕೊನೆಯಲ್ಲಿ ಮಳೆ ಬಂದಿದ್ದರಿಂದ ನಿರಾಶೆಯಾಯಿತು. ಮಳೆಯಿಂದ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗದೆ, ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತ ತಂಡ, ಕಿವೀಸ್‌ ತಂಡಕ್ಕಿಂತ 4 ರನ್‌ಗಳ ಮುನ್ನಡೆಯನ್ನು ಪಡೆದಿತ್ತು. ಇದರ ಫಲವಾಗಿ ಪ್ರವಾಸಿ ತಂಡಕ್ಕೆ ಗೆಲುವು ಒಲಿಯಿತು.

ಶನಿವಾರ ಇಲ್ಲಿನ ಹೆನ್ರಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ತಂಡ ನೀಡಿದ್ದ135 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ. ಕಿವೀಸ್‌ ಬೌಲರ್‌ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಓವರ್‌ಕಾಸ್ಟ್‌ ಕಂಡೀಷನ್ಸ್‌ ಲಾಭ ಪಡೆದ ನ್ಯೂಜಿಲೆಂಡ್‌, ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಾಟ ನೀಡಿದರು. ನಾಯಕ ಶುಭಮನ್‌ ಗಿಲ್‌ ಡಕ್‌ಔಟ್‌, ವಿರಾಟ್‌ ಕೊಹ್ಲಿ ಹಾಗೂ ಅಕ್ಷರ್‌ ಪಟೇಲ್‌ ತಲಾ 7 ರನ್‌ಗೆ ಔಟ್‌ ಆದರು.

IND vs NZ: 7 ರನ್‌ಗೆ ಔಟಾದರೂ ರಿಕಿ ಪಾಟಿಂಗ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ರೋಹಿತ್‌ ಶರ್ಮಾ 23 ರನ್‌, ಶ್ರೇಯಸ್‌ ಅಯ್ಯರ್‌ 30 ರನ್‌ ಗಳಿಸಿ ಔಟ್‌ ಆದರು. ಭಾರತ ತಂಡ 111 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭಿತಿಗೆ ಒಳಗಾಗಿತ್ತು. ಆದರೆ, ಕೆಎಲ್‌ ರಾಹುಲ್‌ ಅಜೇಯ 26 ರನ್‌ ಗಳಿಸಿ ಭಾರತಕ್ಕೆ ಆಸರೆಯಾಗಿದ್ದರು. ಆದರೆ, 26 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 113 ರನ್‌ಗಳನ್ನು ಕಲೆಹಾಕಿದ್ದ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಮಳೆ ನಿಲ್ಲದ ಕಾರಣ ಅಂಪೈರ್‌ಗಳು ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತಕ್ಕೆ ಗೆಲುವು ಘೋಷಿಸಿದರು. ನ್ಯೂಜಿಲೆಂಡ್‌ ಪರ ಕೈಲ್‌ ಜೇಮಿಸನ್‌ ಹಾಗೂ ಜೇಕಬ್‌ ಡಫಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಬೌಲಿಂಗ್‌ ಆಯ್ದುಕೊಂಡರು ಹಾಗೂ ಎದುರಾಳಿ ಕಿವೀಸ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಹವಾಮಾನ ಪಂದ್ಯಕ್ಕೆ ಪೂರಕವಾಗಿರದ ಕಾರಣ ಪಂದ್ಯದ ಟಾಸ್‌ ಅನ್ನು ತಡವಾಗಿ ನಡೆಸಲಾಗಿತ್ತು. ಈ ಪಂದ್ಯವನ್ನು 47 ಓವರ್‌ಗಳಿಗೆ ಸೀಮಿತ ಗೊಳಿಸಲಾಯಿತು.



ಕಿವೀಸ್‌ಗೆ ಆರಂಭಿಕ ಆಘಾತ ನೀಡಿದ ಆಕಿಬ್‌ ನಬಿ

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ಪರ ಕ್ರೀಸ್‌ಗೆ ಬಂದ ಟಿಮ್‌ ಸೈಫರ್ಟ್‌ ಹಾಗೂ ವಿಲ್‌ ಯಂಗ್‌ ಅವರನ್ನು ಆಕಿಬ್‌ ಔಟ್‌ ಮಾಡಿದರು. ಆ ಮೂಲಕ ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಮೂರನೇ ಕ್ರಮಾಮಕದಲ್ಲಿ ಕ್ರೀಸ್‌ಗೆ ಬಂದ ಹೆನ್ರಿ ನಿಕೋಲ್ಸ್‌ ಅವರನ್ನು ಅನ್ಶುಲ್‌ ಕಾಂಬೋಜ್‌ ಔಟ್‌ ಮಾಡಿದರು. ಇದರೊಂದಿಗೆ ಕಿವೀಸ್‌ ಕೇವಲ 23 ರನ್‌ಗಳಿಗೆ ಮೂರು ವಿಕೆಟ್‌ ಕಲೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.



ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ ಬ್ರಾರ್‌

ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆಕಿಬ್‌ ನಬಿ ಕಟ್ಟಿ ಹಾಕಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಗುರ್ನೂರ್‌ ಬ್ರಾರ್‌ ನಿಯಂತ್ರಿಸಿದರು. ಓವರ್‌ ಕಾಸ್ಟ್‌ ಕಂಡೀಷನ್ಸ್‌ ಅನ್ನು ಸಂಪೂರ್ಣವಾಗಿ ಬಳಿಸಿಕೊಂಡ ಬ್ರಾರ್‌, ಟಾಮ್‌ ಲೇಥಮ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌ ಸೇರಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

IND vs NZ: ಗುರ್ನೂರ್‌ ಬ್ರಾರ್‌ ಮಾರಕ ದಾಳಿಗೆ 134ಕ್ಕೆ ನ್ಯೂಜಿಲೆಂಡ್‌ ಆಲ್‌ಔಟ್‌, ಭಾರತಕ್ಕೆ 135 ರನ್‌ ಗುರಿ!

ಕಿವೀಸ್‌ಗೆ ಡ್ಯಾರಿಲ್‌ ಮಿಚೆಲ್‌ ಅರ್ಧಶತಕದ ಆಸರೆ

ಕಿವೀಸ್‌ ಪರ ಡ್ಯಾರಿಲ್‌ ಮಿಚೆಲ್‌ ಹಾಗೂ ನಾಯಕ ಮಿಚೆಲ್‌ ಸ್ಯಾಂಟ್ನರ್‌ ಅವರು ಭಾರತದ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತರು. ಮಿಚೆಲ್‌ 104 ಎಸೆತಗಳಲ್ಲಿ 55 ರನ್‌ ಗಳಿಸಿದರೆ, ಸ್ಯಾಂಟ್ನರ್‌ 38 ಎಸೆತಗಳಲ್ಲಿ 31 ರನ್‌ ಗಳಿಸಿದರು. ಈ ಇಬ್ಬರೂ 59 ರನ್‌ಗಳ ಉಪಯುಕ್ತ ಜೊತೆಯಾಟವನ್ನು ಆಡಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಜೋಡಿಯಿಂದ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ.

ಭಾರತ ತಂಡದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಗುರ್ನೂರ್‌ ಬ್ರಾರ್‌ 10 ಓವರ್‌ಗಳಿಗೆ ಕೇವಲ 30 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆಕಿಬ್‌ ನಬಿ, ಅನ್ಶುಲ್‌ ಕಾಂಬೋಜ್‌ ಹಾಗೂ ಅಕ್ಷರ್‌ ಪಟೇಲ್‌ ಕೂಡ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.