ನವದೆಹಲಿ: ಮುಂಬರುವ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2025-26) ನಿಮಿತ್ತ ತಮಿಳುನಾಡು (Tamil Nadu) ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿಗೆ (Varun Chakravarthy) ನಾಯಕತ್ವವನ್ನು ನೀಡಲಾಗಿದೆ. ನಾರಾಯಣ್ ಜಗದೀಶನ್ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ. ದೇಶಿ ಟಿ20 ಟೂರ್ನಿಯು ನವೆಂಬರ್ 26 ರಂದು ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20ಐ ಸರಣಿ ಗೆದ್ದಿದ್ದ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ ಮಹತ್ವದ ಪ್ರದರ್ಶನವನ್ನು ನೀಡಿದ್ದರು. ಇಲ್ಲಿ ಅವರು ಆಡಿದ್ದ ಮೂರು ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದರು.
ವರುಣ್ ಚಕ್ರವರ್ತಿ ದೇಶಿ ಕ್ರಿಕೆಟ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ತಮಿಳುನಾಡು ತಂಡದ ನಾಯಕನಾಗುವ ಮೂಲಕ ವರುಣ್ ಚಕ್ರವರ್ತಿ, ಶಾರೂಖ್ ಖಾನ್ ಅವರ ಸ್ಥಾನವನ್ನು ತುಂಬಿದ್ದಾರೆ. ಆ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಹೊಂದಿರುವ ಆರ್ ಸಾಯಿ ಕಿಶೋರ್ ಹಾಗೂ ಜಗದೀಶನ್ ಅವರನ್ನು ಆಯ್ಕೆದಾರರು ಕಡೆಗಣಿಸಿ ವರುಣ್ ಮೇಲೆ ನಂಬಿಕೆ ಇಟ್ಟಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಕಾಟ ನೀಡಬಲ್ಲ ಬ್ಯಾಟ್ಸ್‌ಮನ್ ಆರಿಸಿದ ಮಾರ್ಕ್ ಬೌಚರ್!
ತಮಿಳುನಾಡು ತಂಡದಲ್ಲಿ ಭಾರತದ ಎಡಗೈ ವೇಗಿ ಟಿ ನಟರಾಜನ್ ಮತ್ತು ಸಹ ಸೀಮರ್ ಗುರ್ಜಪ್ನೀತ್ ಸಿಂಗ್ ಕೂಡ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಸಾಯಿ ಕಿಶೋರ್ ಮತ್ತು ಎಂ ಸಿದ್ಧಾರ್ಥ್ ತಮ್ಮ ಎಡಗೈ ವ್ಯತ್ಯಾಸಗಳೊಂದಿಗೆ ದಾಳಿಯನ್ನು ಮುನ್ನಡೆಸಲಿದ್ದಾರೆ. ತಮಿಳುನಾಡು ಇದುವರೆಗೆ ಸಾಧಾರಣ ರಣಜಿ ಟ್ರೋಫಿ ಅಭಿಯಾನವನ್ನು ಎದುರಿಸಿದೆ, ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಎರಡು ಡ್ರಾಗಳೊಂದಿಗೆ ತಮ್ಮ ಗುಂಪಿನ ಪಾಯಿಂಟ್ಸ್ ಆರನೇ ಸ್ಥಾನದಲ್ಲಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ತಂಡ ರಾಜಸ್ಥಾನ, ದೆಹಲಿ, ಉತ್ತರಾಖಂಡ, ಕರ್ನಾಟಕ, ತ್ರಿಪುರ, ಜಾರ್ಖಂಡ್ ಮತ್ತು ಸೌರಾಷ್ಟ್ರಗಳೊಂದಿಗೆ ಎಲೈಟ್ ಗ್ರೂಪ್ ಡಿ ಯಲ್ಲಿ ಸ್ಥಾನ ಪಡೆದಿದೆ. ತಮಿಳುನಾಡು ಅಹಮದಾಬಾದ್‌ನಲ್ಲಿ ರಾಜಸ್ಥಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
IND vs SA: ಧ್ರುವ್ ಜುರೆಲ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಚೇತೇಶ್ವರ್ ಪೂಜಾರ!
ತಮಿಳುನಾಡು ತಂಡ: ವರುಣ್ ಚಕ್ರವರ್ತಿ (ನಾಯಕ), ನಾರಾಯಣ್ ಜಗದೀಶನ್ (ಉಪನಾಯಕ, ವಿಕೆಟ್‌ಕೀಪರ್), ತುಷಾರ್ ರಹೇಜಾ (ವಿಕೆಟ್‌ಕೀಪರ್), ವಿಪಿ ಅಮಿತ್ ಸಾಥ್ವಿಕ್, ಶಾರುಖ್ ಖಾನ್, ಆಂಡ್ರೆ ಸಿದ್ದಾರ್ಥ್, ಪ್ರದೋಶ್ ರಂಜನ್ ಪಾಲ್, ಶಿವಂ ಸಿಂಗ್, ಆರ್ ಸಾಯಿ ಕಿಶೋರ್, ಎಂ ಸಿದ್ದಾರ್ಥ್, ಟಿ ನಟರಾಜನ್, ಗುರುಜಪನೀತ್ ಸಿಂಗ್, ಎ. ಎಸಕ್ಕಿಮುತ್ತು, ಆರ್ ಸೋನು ಯಾದವ್, ಆರ್ ಸಿಲಂಬರಸನ್, ಎಸ್ ರಿತಿಕ್ ಈಶ್ವರನ್ (ವಿಕೆಟ್ ಕೀಪರ್).