ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG 2nd T20I: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ, ಅಫ್ಘಾನಿಸ್ತಾನ ಮೊದಲ ಬ್ಯಾಟಿಂಗ್!

IND vs AFG 2ndT20I Match Toss, Playing XI's: ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿದೆ.

ಎರಡನೇ ಟಿ20ಐ ಪಂದ್ಯದಲ್ಲಿ ಭಾರತ vs ಅಫ್ಘಾನಿಸ್ತಾನ ಕಾದಾಟ.

ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟಿ20ಐ ಪಂದ್ಯದಲ್ಲಿ (IND vs AFG) ಭಾರತ ಹಾಗೂ ಅಫ್ಘಾನಿಸ್ತಾನ ತಂಡೆಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer)ಮೊದಲು ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಆ ಮೂಲಕ ಎದುರಾಳಿ ಅಫ್ಘಾನಿಸ್ತಾನ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಈ ಪಂದ್ಯವನ್ನು ಗೆದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.

ಮೊದಲನೇ ಟಿ20ಐ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ, ಇದೀಗ ಎರಡನೇ ಪಂದ್ಯಕ್ಕೆ ತನ್ನ ಪ್ಲೇಯಿಂಗ್‌ XI ನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಗಾಯಕ್ಕೆ ತುತ್ತಾಗಿರುವ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರು ಟಿ20ಐ ಸರಣಿಯಿಂದ ಹೊರಬಿದ್ದಿದ್ದಾರೆ. ಹಾಗಾಗಿ ಅವರ ಬದಲು ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ ಪ್ಲೇಯಿಂಗ್‌ XIನಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ನಾಯಕ ಶ್ರೇಯಸ್‌ ಅಯ್ಯರ್‌ ಟಾಸ್‌ ವೇಳೆ ಮಾಹಿತಿ ನೀಡಿದ್ದಾರೆ.

IND vs AFG: ಭಾರತ ತಂಡಕ್ಕೆ ಆಘಾತ; ಆಫ್ಘನ್‌ ಟಿ20ಐ ಸರಣಿಯಿಂದ ವರುಣ್‌ ಚಕ್ರವರ್ತಿ ಔಟ್‌?

ಇನ್ನು ಎದುರಾಳಿ ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ಟಾಸ್‌ ವೇಳೆ ಆಫ್ಘನ್‌ ನಾಯಕ ಇಬ್ರಾಹಿಂಃ ಝದ್ರಾನ್‌ ತಿಳಿಸಿದ್ದಾರೆ. ಮೊದಲನೇ ಪಂದ್ಯದ ಸೋಲಿನಿಂದಾಗಿ ಆತಿಥೇಯ ಆಫ್ಘನ್‌, ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ.



ಇತ್ತಂಡಗಳ ಪ್ಲೇಯಿಂಗ್‌ XI

ಭಾರತ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್‌ ಬುಮ್ರಾ



ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಝ್‌ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ಸಿದ್ದಿಕುಲ್ಲಾ ಅಟಲ್, ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ

ಭಾರತ ತಂಡ ಶುಭಾರಂಭ

ಇದೇ ಅಂಗಣದಲ್ಲಿ ಸೆಪ್ಟಂಬರ್‌ 13 ರಂದು ಭಾನುವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ, ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡಿದ್ದ ಭಾರತ ತಂಡ, ಎದುರಾಳಿ ಆಫ್ಘನ್‌ ತಂಡವನ್ನು 156 ರನ್‌ಗಳಿಗೆ ಕಟ್ಟಿ ಹಾಕಿತ್ತು. ಆತಿಥೇಯರ ಪರ ಅಝಮತ್‌ವುಲ್ಲಾ ಒಮರ್ಜೈಯ್‌ 64 ರನ್‌ ಹಾಗೂ ಮೊಹಮ್ಮದ್‌ ನಬಿ 33 ರನ್‌ ಗಳಿಸಿದ್ದರು. ಇವರನ್ನು ಹೊರತುಪಡಿಸಿ ಇನ್ನುಳಿದವರು ವಿಫಲರಾಗಿದ್ದರು. ಭಾರತದ ಪರ ಅರ್ಷದೀಪ್‌ ಸಿಂಗ್‌ 3 ವಿಕೆಟ್‌ ಕಿತ್ತಿದ್ದರು.

IND vs AFG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಶ್ರೇಯಸ್‌ ಅಯ್ಯರ್‌!

ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಭಾರತಕ್ಕೆ ಚೇಸಿಂಗ್‌ನಲ್ಲಿ ಯಾವುದೇ ಕಠಿಣತೆ ಎದುರಾಗಲಿಲ್ಲ. ಸಂಜು ಸ್ಯಾಮ್ಸನ್‌ ಬೇಗ ವಿಕೆಟ್‌ ಒಪ್ಪಿಸಿದರೂ ಅಭಿಷೇಕ್‌ ಶರ್ಮಾ ಶರ್ಮಾ (82 ರನ್‌) ಹಾಗೂ ಇಶಾನ್‌ ಕಿಶನ್‌ (42) ಅವರ ಬ್ಯಾಟಿಂಗ್‌ ಬಲದಿಂದ ಟೀಮ್‌ ಇಂಡಿಯಾ ಇನ್ನೂ 38 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತ್ತು. ಆ ಮೂಲಕ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿತ್ತು.