ಚೆಸ್ಟರ್-ಲೀ-ಸ್ಟ್ರೀಟ್: ಇಲ್ಲಿನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆದಿದ್ದ ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ಮೊದಲನೇ ಟಿ20ಐ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಯಿತು. ಭಾರತ ತಂಡದ (India) ಪ್ರಥಮ ಇನಿಂಗ್ಸ್ ಬಳಿಕ ಪಂದ್ಯಕ್ಕೆ ಮಳೆ ಕಾಟ ನೀಡಿತು. ಒಮ್ಮೆ ಮಳೆ ನಿಂತರೂ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಬಂದ ಮಳೆ ನಿಲ್ಲದ ಕಾರಣ ಇಂಗ್ಲೆಂಡ್ (England) ತಂಡದ ಇನಿಂಗ್ಸ್ ಅನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ಮೈದಾನವೀಡಿ ತೇವ ಜಾಸ್ತಿಯಾದ ಕಾರಣ ಅಂಪೈರ್‌ಗಳು ಎರಡೂ ನಾಯಕರನ್ನು ಕರೆಸಿ ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಿದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿ, ಪಂದ್ಯವನ್ನು ಗೆಲ್ಲಬೇಕೆಂದು ಎದುರು ನೋಡುತ್ತಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾಗೆ ಮಳೆ ನಿರಾಶೆ ಮೂಡಿಸಿತು.
ಐದು ಪಂದ್ಯಗಳ ಪೈಕಿ ಒಂದು ಪಂದ್ಯ ಮಳೆಗೆ ರದ್ದಾಗಿದ್ದು, ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದ ತಂಡ ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ. ಎರಡನೇ ಟಿ20ಐ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ನಡೆಯಲಿದೆ.
IND vs ENG: ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ!
ಭಾರತಕ್ಕೆ ಆರಂಭಿಕ ಆಘಾತ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಸಿಗಲಿಲ್ಲ. ಐರ್ಲೆಂಡ್ ಸರಣಿಯಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್, ಆಂಗ್ಲರು ಎದುರು ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿದರು. ಟಿ20ಐ ಬ್ಯಾಟಿಂಗ್ ಶ್ರೇಯಾಂಕದ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಖಾತೆ ತೆರೆಯದೆ ರನ್‌ಔಟ್ ಆದರು. ಆ ಮೂಲಕ ಟೀಮ್ ಇಂಡಿಯಾ 6 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.
ಅಭಿಷೇಕ್-ಶ್ರೇಯಸ್ ಜುಗಲ್‌ಬಂದಿ
ಕೇವಲ ಆರು ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದ್ದ ಭಾರತ ತಂಡವನ್ನು ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಮೇಲೆತ್ತಿದರು. ಈ ಇಬ್ಬರೂ ಮೂರನೇ ವಿಕೆಟ್‌ಗೆ ಆಡಿದ ಕೇವಲ 38 ಎಸೆತಗಳಲ್ಲಿ 82 ರನ್‌ಗಳನ್ನು ಕಲೆ ಹಾಕಿದರು. 245.83ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 59 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಇವರ ಇನಿಂಗ್ಸ್‌ನಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳು ಸೇರಿವೆ. ಈ ಇನಿಂಗ್ಸ್‌ನಲ್ಲಿ ಅಭಿಷೇಕ್ ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ನಾಯಕನಾಗಿ ಶ್ರೇಯಸ್ ಅಯ್ಯರ್‌ಗೆ ಮೊದಲ ಫಿಫ್ಟಿ
ಐರ್ಲೆಂಡ್ ಎದುರು ಕೊನೆಯ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ನಾಯಕ ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ಎದುರು ಆರಂಭಿಕ ಪಂದ್ಯದಲ್ಲಿ ನಾಯಕನ ಇನಿಂಗ್ಸ್ ಆಡಿದರು. ಪವರ್‌ಪ್ಲೇನಲ್ಲಿ ಭಾರತಕ್ಕೆ ಅಭಿಷೇಕ್ ಸ್ಪೋಟಕ ಆರಂಭ ತಂದುಕೊಟ್ಟರೆ, ಮಧ್ಯಮ ಓವರ್‌ಗಳಲ್ಲಿ ಶ್ರೇಯಸ್ ಅಯ್ಯರ್ ಭಾರತದ ಮೊತ್ತವನ್ನು 160ರ ಗಡಿ ದಾಟಿಸಿದರು. ಅವರು ಆಡಿದ 47 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 68 ರನ್ ಗಳಿಸಿದರು. ಅಲ್ಲದೆ ಕಂಡೀಷನ್ಸ್‌ಗೆ ತಕ್ಕಂತೆ ಬ್ಯಾಟ್ ಮಾಡಿ ಅಭಿಷೇಕ್ ಔಟ್ ಆದ ಬಳಿಕ ತಿಲಕ್ ವರ್ಮಾ ಜೊತೆ 36 ರನ್ ಹಾಗೂ ಶಿವಂ ದುಬೇ ಜೊತೆಗೆ 41 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು.
ಕೊನೆಯಲ್ಲಿ ಅಬ್ಬರಿಸಿದ ಶಿವಂ ದುಬೇ
ಕೊನೆಯಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಶಿವಂ ದುಬೇ ಅವರು 3 ಸಿಕ್ಸರ್ ಹಾಗೂ 2 ಬೌಂಡರಿಗಳ ಮೂಲಕ ಅಜೇಯ 42 ರನ್‌ಗಳನ್ನು ಸಿಡಿಸಿ ಡೆತ್ ಓವರ್‌ಗಳಲ್ಲಿ ಭಾರತ ತಂಡದ ಮೊತ್ತವನ್ನು 190ರ ಸನಿಹ ತಂದರು. ಅಂತಿಮವಾಗಿ ಟೀಮ್ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಕಲೆ ಹಾಕಿತು. ಇಂಗ್ಲೆಂಡ್ ಪರ ಸಾಕಿಬ್ ಮಹ್ಮೂದ್ ಅವರು 33 ರನ್ ನೀಡಿದರೂ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಸ್ಯಾಮ್ ಕರನ್ ಹಾಗೂ ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 189-7 (ಶ್ರೇಯಸ್ ಅಯ್ಯರ್ 68 ರನ್, ಅಭಿಷೇಕ್ ಶರ್ಮಾ 59 ರನ್, ಶಿವಂ ದುಬೇ 42* ರನ್ ; ಸಾಕಿನ್ ಮಹ್ಮೂದ್ 33ಕ್ಕೆ 3, ಸ್ಯಾಮ್ ಕರನ್ 25ಕ್ಕೆ 1)