ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ (IND vs SL XI) ಮೊದಲ ದಿನದಂದು ಶ್ರೀಲಂಕಾ XI ತಂಡ 8 ವಿಕೆಟ್ ನಷ್ಟಕಕೆ 363 ರನ್ ಗಳಿಸಿತು. ಭಾರತ ತಂಡದ ಯಾವುದೇ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಪರಿಣಾಮಕಾರಿಯಾಗಿ ಸವಾಲು ನೀಡಲು ಸಾಧ್ಯವಾಗಲಿಲ್ಲ. ದಿನವಿಡೀ ಒಟ್ಟು 90 ಓವರ್‌ಗಳನ್ನು ಬೌಲ್ ಮಾಡಲಾಯಿತು. ಭಾರತ, ಏಳು ಬೌಲರ್‌ಗಳನ್ನು ಬಳಸಿಕೊಂಡಿತು, ಅವರಲ್ಲಿ ಐದು ಮಂದಿ ನಾಲ್ಕು ಓವರ್‌ಗಳಿಗಿಂತ ಹೆಚ್ಚಿನ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದು, ಕುತ್ತಿಗೆ ನೋವಿನಿಂದಾಗಿ ಶುಭಮನ್ ಗಿಲ್ ಅವರು ಅಲಭ್ಯರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ XI ತಂಡ, ಆರಂಭಿಕ ಜೋಡಿ ನಿಶಾನ್ ಮದುಷ್ಕ ಮತ್ತು ರವಿಂದು ರಸಂತ ಅವರ ನೆರವಿನಿಂದ ಸ್ಫೋಟಕ ಆರಂಭವನ್ನು ಪಡೆಯಿತು. ಈ ಜೋಡಿ 20.4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 110 ರನ್‌ಗಳನ್ನು ಸೇರಿಸಿತು. ನಿಶಾನ್ 65 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 66 ರನ್ ಗಳಿಸಿ, ರನೌಟ್ ಆದರು. ಮೊದಲ ಸೆಷನ್‌ನಲ್ಲಿ ಭಾರತ ಕೇವಲ ಒಂದು ವಿಕೆಟ್ ಮಾತ್ರ ಪಡೆಯಿತು. ರವಿಂದು ಕೂಡ ಅರ್ಧಶತಕ ಬಾರಿಸಿದರು. ರವೀಂದ್ರ ಜಡೇಜಾ ಪಸಿಂದು ಸೂರ್ಯಬಂದರ (35) ಅವರನ್ನು ಔಟ್ ಮಾಡುವ ಮೂಲಕ ಭಾರತದ ಪರ ಎರಡನೇ ಬ್ರೇಕ್‌ಥ್ರೂ ತಂದರು. ರವಿಂದು 71 ರನ್ ಗಳಿಸಿದ ಬಳಿಕ ವಿಕೆಟ್ ಕೈಚೆಲ್ಲಿದರು.
ʻಸಿಎಸ್‌ಕೆ ತಂಡದಲ್ಲಿದ್ದಾಗ ಈ ವೇಗಿ ನನಗೆ ಬೌಲ್ ಮಾಡಲು ನಿರಾಕರಿಸಿದ್ದರುʼ: ಚೇತೇಶ್ವರ್ ಪೂಜಾರ!
ಪವನ್ ರತ್ನಾಯಕೆ 39 ರನ್ ಗಳಿಸಿದರು ಮತ್ತು ಅಹಾನ್ ವಿಕ್ರಮಸಿಂಘೆ 31 ರನ್ ಗಳಿಸಿದರು; ತಂಡದ ಸ್ಕೋರ್ 250 ತಲುಪುವ ಹೊತ್ತಿಗೆ ಇಬ್ಬರೂ ಪೆವಿಲಿಯನ್‌ಗೆ ಮರಳಿದರು. ನಂತರ, ನಾಯಕ ಸೋನಲ್ ದಿನುಷಾ ಕ್ರೀಸ್‌ನಲ್ಲಿ ನೆಲೆಯೂರಿದರು. ಅವರು ವಿಕೆಟ್ ಕೀಪರ್ ಅಂಜಲಾ ಬಂಡಾರ ಅವರೊಂದಿಗೆ 34 ರನ್‌ಗಳ ಪಾಲುದಾರಿಕೆ ಮತ್ತು ರಮೇಶ್ ಮೆಂಡಿಸ್ ಅವರೊಂದಿಗೆ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರವೀಂದ್ರ ಜಡೇಜಾ ಹೊಸ ಚೆಂಡಿನಲ್ಲಿ ಮೆಂಡಿಸ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟವನ್ನು ಮುರಿದರು. ಮೆಂಡಿಸ್ 49 ಎಸೆತಗಳಲ್ಲಿ 32 ರನ್ ಗಳಿಸಿದ್ದರು.
ನಾಯಕ ಸೋನಲ್ ಅರ್ಧಶತಕ
ನಂತರ ಮಾನವ್ ಸುತಾರ್ ನಾಯಕ ಸೋನಲ್ ದಿನುಷಾ ಅವರ ವಿಕೆಟ್ ಪಡೆದರು. ಅವರು 71 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 52 ರನ್ ಗಳಿಸಿದರು. ಮೊಸಲನೇ ದಿನದಾಟದ ಅಂತ್ಯಕ್ಕೆ ಕೇಶರ ನುವಾಂಟ (9*) ಮತ್ತು ದಿಲುಮ್ ಸುಧೀರ (1*) ಕ್ರೀಸ್‌ನಲ್ಲಿದ್ದರು. ಭಾರತದ ಪರ ರವೀಂದ್ರ ಜಡೇಜಾ, ಕುಲ್‌ದೀಪ್ ಯಾದವ್ ಮತ್ತು ಮಾನವ್ ಸುತಾರ್ ತಲಾ ಎರಡು ವಿಕೆಟ್ ಪಡೆದರು, ಆದರೆ ಗುರ್ನೂರ್ ಬ್ರಾರ್ ಒಂದು ವಿಕೆಟ್ ಪಡೆದರು.
ಸ್ಕೋರ್ ವಿವರ (ಮೊದಲನೇ ದಿನದಾಟದ ಅಂತ್ಯಕ್ಕೆ)
ಶ್ರೀಲಂಕಾ XI: 90 ಓವರ್‌ಗಳಿಗೆ 363-8 (ನಿಶಾನ್ ಮದುಷ್ಕ 66 ರನ್, ರವಿಂದು ರಸಂತ 71 ರನ್, ಸೋನಲ್ ದಿನುಶ 52 ರನ್; ಮಾನವ್ ಸುತಾರ್ 33 ಕ್ಕೆ 2, ರವೀಂದ್ರ ಜಡೇಜಾ 64 ಕ್ಕೆ 2)