ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs AUSW: ಸ್ಮೃತಿ ಮಂಧಾನಾ ಭರ್ಜರಿ ಶತಕ, ಆಸ್ಟ್ರೇಲಿಯಾ ವನಿತೆಯರಿಗೆ ಶಾಕ್‌ ಕೊಟ್ಟ ಭಾರತ!

ಸ್ಮೃತಿ ಮಂಧಾನಾ (117 ರನ್‌ಗಳು) ಶತಕ ಹಾಗೂ ಕ್ರಾಂತಿ ಗೌಡ್‌ (28ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ಮಹಿಳಾ ತಂಡ, ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 102 ರನ್‌ಗಳ ಭರ್ಜರಿ ಜಯವನ್ನು ಗಳಿಸಿದೆ. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಮಹಿಳಾ ಏಕದಿನ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದೆ.

ಎರಡನೇ ಒಡಿಐನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ಕೊಟ್ಟ ಭಾರತ!

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಜಯ. -

Profile Ramesh Kote Sep 17, 2025 9:12 PM

ಮುಲ್ಲಾನ್‌ಪುರ: ಸ್ಮೃತಿ ಮಂಧಾನಾ (Smriti Mandhana) ಶತಕ ಹಾಗೂ ಕ್ರಾಂತಿ ಗೌಡ್‌ ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ (India women team), ಎರಡನೇ ಏಕದಿನ ಪಂದ್ಯದಲ್ಲಿ (INDW vs AUSW) ಆಸ್ಟ್ರೇಲಿಯಾ ವಿರುದ್ಧ 102 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದರೊಂದಿಗೆ ಏಕದಿನ ಸರಣಿಯನ್ನು ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ ಜೀವಂತವಾಗಿರಿಸಿಕೊಂಡಿದೆ. ಮೂರನೇ ಹಾಗೂ ಸರಣಿಯ ನಿರ್ಣಾಯಕ ಪಂದ್ಯ ಸೆಪ್ಟಂಬರ್‌ 20 ರಂದು ದಿಲ್ಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಸ್ಮೃತಿ ಮಂಧಾನಾ (117 ರನ್‌) ಹಾಗೂ ದೀಪ್ತಿ ಶರ್ಮಾ (40 ರನ್‌) ಅವರ ಬ್ಯಾಟಿಂಗ್‌ ಬಲದಿಂದ 49.5 ಓವರ್‌ಗಳಿಗೆ 292 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 293 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 40.5 ಓವರ್‌ಗಳಿಗೆ 190 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಭಾರತ 102 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

Asia Cup 2025: ಬಾಂಗ್ಲಾ ವಿರುದ್ಧ ಸೋಲು; ಆಫ್ಘಾನ್‌ ಸೂಪರ್‌-4 ಲೆಕ್ಕಾಚಾರ ಹೇಗಿದೆ?

ಸ್ಮೃತಿ ಮಂಧಾನಾ ಭರ್ಜರಿ ಶತಕ

ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂಧಾನಾ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅದ್ಭುತ ಬ್ಯಾಟ್‌ ಮಾಡಿದ ಸ್ಮೃತಿ ಮಂಧಾನಾ ಹಾಗೂ ಪ್ರತೀಕಾ ರಾವಲ್‌ ಅವರು ಮುರಿಯದ ಮೊದಲನೇ ವಿಕೆಟ್‌ಗೆ 70 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಅತ್ಯುತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ಪ್ರತೀಕಾ ರಾವಲ್‌ ಅವರು 25 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಅವರು ಸ್ಮೃತಿ ಮಂಧಾನಾ ಅವರು ಆಡಿದ 91 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 117 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 12ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು.



ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ದೀಪ್ತಿ ಶರ್ಮಾ ಅವರು 53 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 40 ರನ್‌ಗಳನ್ನು ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್‌ 29 ರನ್‌ ಹಾಗೂ ಸ್ನೇಹಾ ರಾಣಾ 24 ರನ್‌ ಗಳಿಸಿದ್ದರು. ಆಸೀಸ್‌ ಪರ ಡಾರ್ಸಿ ಬ್ರೌನ್‌ 3 ವಿಕೆಟ್‌ ಕಿತ್ತರೆ, ಆಶ್ಲೆ ಗಾರ್ಡನರ್‌ 2 ವಿಕೆಟ್‌ ಕಿತ್ತಿದ್ದಾರೆ.



ಆಸ್ಟೇಲಿಯಾ ಬ್ಯಾಟಿಂಗ್‌ ವೈಫಲ್ಯ

293 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಎಲಿಸ್‌ ಪೆರಿ (44 ರನ್‌) ಹಾಗೂ ಅನಾಬೆಲ್‌ ಸೌತರ್‌ಲೆಂಡ್‌ (45 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಆಸೀಸ್‌ ಬ್ಯಾಟರ್‌ಗಳು ವಿಫಲರಾದರು. ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿ ಕ್ರಾಂತಿ ಗೌಡ್‌ 3 ವಿಕೆಟ್‌ ಕಿತ್ತರೆ, ದೀಪ್ತಿ ಶರ್ಮಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಬೌಲ್‌ ಮಾಡಿದ ಎಲ್ಲಾ ಬೌಲರ್‌ಗಳು ಕೂಡ ತಲಾ ಒಂದೊಂದು ವಿಕೆಟ್‌ ಕಿತ್ತರು.