ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ!

IND vs ENG 1st T20I: ಚೆಸ್ಟರ್‌ ಲೀ ಸ್ಟ್ರೀಟ್‌ನ ರಿವರ್‌ಸೈಡ್‌ ಗ್ರೌಂಡ್‌ನಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ವರುಣ್‌ ಚಕ್ರವರ್ತಿ ಪ್ಲೇಯಿಂಗ್‌ XIಗೆ ಮರಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೊದಲನೇ ಟಿ20ಐ.

ಚೆಸ್ಟರ್‌ ಲೀ ಸ್ಟ್ರೀಟ್‌: ಇಲ್ಲಿನ ರಿವರ್‌ಸೈಡ್‌ ಗ್ರೌಂಡ್‌ನಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕಲು ಎದುರು ನೋಡುತ್ತಿದ್ದಾರೆ. ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಗೆ ಅಲಭ್ಯರಾಗಿದ್ದ ವರುಣ್‌ ಚಕ್ರವರ್ತಿ ಪ್ಲೇಯಿಂಗ್‌ XIಗೆ ಮರಳಿದ್ದು, ವೈಭವ್‌ ಸೂರ್ಯವಂಶಿ (Vaibhav Sooryavanshi) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಇನ್ನಷ್ಟು ದಿನಗಳ ಕಾಲ ಕಾಯಬೇಕಾಗುತ್ತದೆ.

ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟಿ20ಐ ಸರಣಿಯನ್ನು 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತದಿಂದ ಬಂದಿರುವ ಭಾರತ ತಂಡ, ಇದೀಗ ಬಲಿಷ್ಠ ಇಂಗ್ಲೆಂಡ್‌ ಎದುರು ಸರಣಿಯನ್ನು ಗೆದ್ದು ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಅಂದ ಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದ ವೈಭವ್‌ ಸೂರ್ಯವಂಶಿಗೆ ಈ ಪಂದ್ಯದಲ್ಲಿಯೂ ಅವಕಾಶ ನೀಡಲಾಗಿಲ್ಲ. ಹಾಗಾಗಿ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಓಪನಿಂಗ್‌ ಮಾಡಲಿದ್ದಾರೆ. ಭಾರತದ ಪ್ಲೇಯಿಂಗ್‌ XIನಲ್ಲಿ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳು ಕಣಕ್ಕೆ ಇಳಿದಿದ್ದಾರೆ. ಅಕ್ಷರ್‌ ಪಟೇಲ್‌ ಅವರು ಸ್ಪಿನ್‌ ಆಲ್‌ರೌಂಡರ್‌ ಆಗಿ ಆಡುತ್ತಿದ್ದಾರೆಂದು ನಾಯಕ ಶ್ರೇಯಸ್‌ ಅಯ್ಯರ್‌ ಟಾಸ್‌ ವೇಳೆ ತಿಳಿಸಿದ್ದಾರೆ.

ʻಭಾರತ ತಂಡವನ್ನು ತೊರೆದು ಶಾಲೆಗೆ ಹೋಗಿʼ: ವೈಭವ್‌ ಸೂರ್ಯವಂಶಿಗೆ ಡ್ಯಾರಿಲ್‌ ಕುಲ್ಲಿನನ್‌ ಸಲಹೆ!

ಇನ್ನು ಎದುರಾಳಿ ಇಂಗ್ಲೆಂಡ್‌ ತಂಡದ ಪರ ಫಿಲ್‌ ಸಾಲ್ಟ್‌ ಹಾಗೂ ಜೋಸ್‌ ಬಟ್ಲರ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ ಹಾಗೂ ಜೇಕಬ್‌ ಬೆಥೆಲ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದರೂ ನಾವು ಮೊದಲು ಬೌಲ್‌ ಮಾಡುತ್ತಿದ್ದೆವು ಎಂದು ನಾಯಕ ಹ್ಯಾರಿ ಬ್ರೂಕ್‌ ತಿಳಿಸಿದ್ದಾರೆ. ಅಂದ ಹಾಗೆ ಈ ಪಂದ್ಯವನ್ನು ಗೆದ್ದ ಟಿ20ಐ ಸರಣಿಯಲ್ಲಿ ಉತ್ತಮ ಆರಂಭ ಪಡೆಯಲು ಆಂಗ್ಲರು ಎದುರು ನೋಡುತ್ತಿದ್ದಾರೆ.



ಇತ್ತಂಡಗಳ ಪ್ಲೇಯಿಂಗ್‌ XI

ಭಾರತ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್‌), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ

ಇಂಗ್ಲೆಂಡ್‌: ಫಿಲಿಪ್‌ ಸಾಲ್ಟ್‌, ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್‌ (ನಾಯಕ), ಜಾಕೋಬ್‌ ಬೆಥೆಲ್‌, ಟಾಮ್‌ ಬ್ಯಾಂಟನ್‌, ಸ್ಯಾಮ್‌ ಕರನ್‌, ವಿಲ್‌ ಜ್ಯಾಕ್ಸ್‌, ಲಿಯಾಮ್‌ ಡಾಸನ್‌, ಸಾಕಿಬ್‌ ಮಹ್ಮೂದ್‌, ಆದಿಲ್‌ ರಶೀದ್‌, ಲ್ಯೂಕ್‌ ವುಡ್‌



ತಂಡಗಳು

ಭಾರತ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್‌), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಸೂರ್ಯಾಂಶ್ ಶೆಡ್ಗೆ, ಪ್ರಿನ್ಸ್‌ ಯಾದವ್, ವಾಷಿಂಗ್ಟನ್ ಸುಂದರ್‌, ವೈಭವ್ ಸೂರ್ಯವಂಶಿ, ಪ್ರಸಿಧ್‌ ಕೃಷ್ಣ

ಇಂಗ್ಲೆಂಡ್‌: ಫಿಲಿಪ್‌ ಸಾಲ್ಟ್‌, ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್‌ (ನಾಯಕ), ಜಾಕೋಬ್‌ ಬೆಥೆಲ್‌, ಟಾಮ್‌ ಬ್ಯಾಂಟನ್‌, ಸ್ಯಾಮ್‌ ಕರನ್‌, ವಿಲ್‌ ಜ್ಯಾಕ್ಸ್‌, ಲಿಯಾಮ್‌ ಡಾಸನ್‌, ಸಾಕಿಬ್‌ ಮಹ್ಮೂದ್‌, ಆದಿಲ್‌ ರಶೀದ್‌, ಲ್ಯೂಕ್‌ ವುಡ್‌, ಜೋರ್ಡನ್‌ ಕಾಕ್ಸ್‌, ಜೇಮ್ಸ್‌ ಕೋಲ್ಸ್‌, ರೆಹಾನ್‌ ಅಹ್ಮದ್‌, ಸನ್ನಿ ಬಾಕರ್‌