ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಸ್ಪಿನ್ನರ್‌ ಮಿಂಚು, 7ವಿಕೆಟ್‌ ಕಿತ್ತ ಮಾನವ್‌ ಸುತಾರ್‌!

ಭಾರತದ ಹೊಸ ಸ್ಪಿನ್ ಬೌಲಿಂಗ್ ತಾರೆ ಮಾನವ್ ಸುತಾರ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್‌ ಪಂದ್ಯವೊಂದರಲ್ಲಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ವಾರ್ವಿಕ್‌ಶೈರ್ ತಂಡ, ಡಿವಿಷನ್-1 ಪಂದ್ಯದಲ್ಲಿ ಹ್ಯಾಂಪ್‌ಶೈರ್ ತಂಡವನ್ನು ಇನಿಂಗ್ಸ್‌ ಮತ್ತು 129 ರನ್‌ಗಳಿಂದ ಭರ್ಜರಿಯಾಗಿ ಮಣಿಸಿತು.

ಕೌಂಟಿ ಪಂದ್ಯದಲ್ಲಿ 7 ವಿಕೆಟ್‌ ಕಿತ್ತು ಮಿಂಚಿದ ಮಾನವ್‌ ಸುತಾರ್‌.

ನವದೆಹಲಿ: ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಮಾನವ್ ಸುತಾರ್ (Manav Suthar) ಅದ್ಭುತ ಸ್ಪಿನ್‌ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಬರೋಬ್ಬರಿ 10 ಬ್ಯಾಟರ್‌ಗಳನ್ನು ಔಟ್ ಮಾಡಿದ್ದ ಅವರು, ಎರಡನೇ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಶ್ರೀಲಂಕಾ ಪ್ರವಾಸ ಮುಗಿಸಿದ ಬಳಿಕ ಮಾನವ್ ಸುತಾರ್ ಇಂಗ್ಲೆಂಡ್‌ಗೆ ತೆರಳಿದ್ದು, ಅಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ (County Championship) ವಾರ್ವಿಕ್‌ಶೈರ್ ತಂಡದ ಪರ ಆಡುತ್ತಿದ್ದಾರೆ. ಹ್ಯಾಂಪ್‌ಶೈರ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅವರು ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ವಾರ್ವಿಕ್‌ಶೈರ್ ಪರ ಬ್ಯಾಟಿಂಗ್‌ನಲ್ಲಿ ಮಾನವ್ ಸುತಾರ್ ಕೇವಲ 9 ರನ್ ಗಳಿಸಿದರು. ಆದರೆ ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಹ್ಯಾಂಪ್‌ಶೈರ್‌ನ ಮೊದಲ ಇನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರು. ಈ ವೇಳೆ ನಿಕ್ ಗುಬ್ಬಿನ್ಸ್, ಜೇಮ್ಸ್ ಫುಲ್ಲರ್ ಮತ್ತು ಎಡ್ಡಿ ಜ್ಯಾಕ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಮಾನವ್ 23.3 ಓವರ್‌ಗಳಲ್ಲಿ 52 ರನ್ ನೀಡಿ 4 ವಿಕೆಟ್ ಕಬಳಿಸಿದರು.

IPL 2027: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ತೆಗೆಯಬೇಕೆಂದ‌ ಸುರೇಶ್‌ ರೈನಾ!

ಹೀಗಾಗಿ ಪಂದ್ಯದಲ್ಲಿ ಒಟ್ಟು 39.3 ಓವರ್‌ಗಳಲ್ಲಿ 94 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು. ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ವಾರ್ವಿಕ್‌ಶೈರ್ ತಂಡ, ಹ್ಯಾಂಪ್‌ಶೈರ್ ವಿರುದ್ಧ ಇನಿಂಗ್ಸ್ ಮತ್ತು 129 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್-1ರ ಈ ಪಂದ್ಯದಲ್ಲಿ ವಾರ್ವಿಕ್‌ಶೈರ್ ತಂಡ, ಹ್ಯಾಂಪ್‌ಶೈರ್ ವಿರುದ್ಧ ಇನಿಂಗ್ಸ್ ಮತ್ತು 129 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಸೌಥಾಂಪ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ವಾರ್ವಿಕ್‌ಶೈರ್ 398 ರನ್‌ಗಳನ್ನು ಕಲೆಹಾಕಿತು. ಆರಂಭಿಕ ಬ್ಯಾಟರ್ ರಾಬರ್ಟ್ಸ್ ಯೇಟ್ಸ್ 109 ರನ್‌ಗಳ ಶತಕದ ಇನಿಂಗ್ಸ್ ಆಡಿದರು. ಸ್ಯಾಮ್ ಹೈನ್ 90 ರನ್ ಗಳಿಸಿದರು. ಹ್ಯಾಂಪ್‌ಶೈರ್ ಪರ ಕೈಲ್ ಅಬಾಟ್ 4 ವಿಕೆಟ್ ಪಡೆದರೆ, ಆಂಡ್ರ್ಯೂ ಜಾನ್ ನೀಲ್ 3 ವಿಕೆಟ್ ಕಬಳಿಸಿದರು.



ಬಳಿಕ ಬ್ಯಾಟಿಂಗ್ ಮಾಡಿದ ಹ್ಯಾಂಪ್‌ಶೈರ್ ತಂಡದ ಮೊದಲ ಇನಿಂಗ್ಸ್ ಕೇವಲ 115 ರನ್‌ಗಳಿಗೆ ಅಂತ್ಯಗೊಂಡಿತು. ಫಾಲೋಆನ್ ಆಡಿದ ಹ್ಯಾಂಪ್‌ಶೈರ್ ಎರಡನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲು ಸಾಧ್ಯವಾಗದೆ 154 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ವಾರ್ವಿಕ್‌ಶೈರ್ ಇನಿಂಗ್ಸ್ ಜಯ ಸಾಧಿಸಿತು.

ಮೂರು ಟೆಸ್ಟ್ ಪಂದ್ಯಗಳಲ್ಲಿ ಮಾನವ್ ಸುತಾರ್‌ಗೆ 23 ವಿಕೆಟ್

24ರ ವಯಸ್ಸಿನ ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದರು. ಇದುವರೆಗೆ ಆಡಿರುವ 3 ಟೆಸ್ಟ್ ಪಂದ್ಯಗಳಲ್ಲಿ ಮಾನವ್ ಸುಥಾರ್ 23 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ 79 ರನ್ ಗಳಿಸಿದ್ದಾರೆ.

ʻನೀವು ಐಪಿಎಲ್‌ ಆಡಬೇಡಿʼ: ಮಾನವ್‌ ಸುತಾರ್‌ಗೆ ಚೇತೇಶ್ವರ್‌ ಪೂಜಾರ ಈ ಸಲಹೆ ನೀಡಿದ್ದೇಕೆ?

ಭಾರತದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಭವಿಷ್ಯದಲ್ಲಿ ರವೀಂದ್ರ ಜಡೇಜಾ ಅವರ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗುತ್ತಿದೆ. ಜಡೇಜಾಗೆ ಈಗ 36 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ, ಸುತಾರ್ ಅವರಂತಹ ಯುವ ಸ್ಪಿನ್ನರ್‌ಗಳತ್ತ ಭಾರತ ತಂಡದ ಗಮನ ಹೆಚ್ಚಾಗಿದೆ.