ನವದೆಹಲಿ: ಭಾರತದ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್‌ನ ಐತಿಹಾಸಿಕ ತಾಣವಾದ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಕೊನೆಯ ಪಂದ್ಯವಾಡಿದ ಬಳಿಕ ಚಹಲ್ ಈ ನಿರ್ಧಾರ ಪ್ರಕಟಿಸಿದ್ದಾರೆ. 2026-27ರ ಕೌಂಟಿ ಋತುವಿನಲ್ಲಿ (County Championship) ನಾರ್ಥ್‌ಹ್ಯಾಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಲಾರ್ಡ್ಸ್‌ನಲ್ಲಿ ಮಿಡಲ್‌ಸೆಕ್ಸ್ ವಿರುದ್ಧ ಆಡಿದ ಪಂದ್ಯವೇ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯ ಎಂದು ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದಿದ್ದರು.
ಚಹಲ್ ತಮ್ಮ ನಿವೃತ್ತಿ ಸಂದೇಶದಲ್ಲಿ ಕೆಂಪು ಚೆಂಡಿನ ಕ್ರಿಕೆಟ್‌ನೊಂದಿಗೆ ತಮ್ಮ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡಿದ್ದಾರೆ. ತಮ್ಮ 10ನೇ ವಯಸ್ಸಿನಲ್ಲಿ ಮೊದಲ ಬಾರಿ ಕೆಂಪು ಚೆಂಡನ್ನು ಕೈಗೆತ್ತಿಕೊಂಡಿದ್ದಾಗಿ ಹೇಳಿದ ಅವರು, ಪ್ರಥಮ ದರ್ಜೆ ಕ್ರಿಕೆಟ್ ತಮ್ಮ ಪಾಲಿಗೆ ಕೇವಲ ಮತ್ತೊಂದು ಮಾದರಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
"ಕೆಂಪು ಚೆಂಡಿನ ಕ್ರಿಕೆಟ್ ನನಗೆ ತಾಳ್ಮೆ, ವ್ಯಕ್ತಿತ್ವ, ಹೋರಾಟದ ಮನೋಭಾವ ಮತ್ತು ಪ್ರತಿಯೊಂದು ರನ್ ಹಾಗೂ ವಿಕೆಟ್‌ಗಾಗಿ ಗಂಟೆಗಟ್ಟಲೆ ಹೋರಾಡುವ ಸಂತೋಷವನ್ನು ಕಲಿಸಿತು," ಎಂದು ಯುಜ್ವೇಂದ್ರ ಚಹಲ್ ತಮ್ಮ ನಿವೃತ್ತಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಲೆಜೆಂಡ್ಸ್ ವಿಶ್ವ ಚಾಂಪಿಯನ್‌ಷಿಪ್‌ಗೆ ಮರಳಲು ಯುವರಾಜ್, ಡಿವಿಲಿಯರ್ಸ್‌ಮ ಗೇಲ್ಸ್ ಸಜ್ಜು!
ಲಾರ್ಡ್ಸ್‌ನಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿರುವುದು ಭಾವನಾತ್ಮಕ ಕ್ಷಣವಾಗಿದೆ ಎಂದು ಚಹಲ್ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಟೆಸ್ಟ್ ಕ್ಯಾಪ್ ಧರಿಸುವುದು ತಮ್ಮ ಬಹುಕಾಲದ ಕನಸಾಗಿತ್ತು. ಆ ಕನಸು ನನಸಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಾವು ಸಾಗಿದ ಪಯಣದ ಬಗ್ಗೆ ಸಂಪೂರ್ಣ ತೃಪ್ತಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತ ತಂಡಕ್ಕೆ ಮರಳುವ ಗುರಿ
ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಚಹಲ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಿಲ್ಲ. ಭಾರತ ತಂಡಕ್ಕೆ ಮರಳುವ ಹಸಿವು ಇನ್ನೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಲಿಸ್ಟ್-ಎ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿರುವ ಅವರು, ಏಕದಿನ ಮತ್ತು ಟಿ20ೈ ಮಾದರಿಗಳಲ್ಲಿ ಮತ್ತೊಮ್ಮೆ ಭಾರತ ತಂಡದ ಅವಕಾಶ ಪಡೆಯಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
IND vs WI: ಮೂರನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಭಾರತ ಸಜ್ಜು!
ದೇಶಕ್ಕಾಗಿ ಆಡುವ ಹಂಬಲ ಇನ್ನೂ ಜೀವಂತವಾಗಿದೆ ಮತ್ತು ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬ ವಿಶ್ವಾಸವಿದೆ ಎಂದು ಚಹಲ್ ಹೇಳಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಹರಿಯಾಣ ತಂಡವನ್ನು ಪ್ರತಿನಿಧಿಸುತ್ತಿರುವ ಚಹಲ್, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಹರಿಯಾಣ ಕ್ರಿಕೆಟ್ ಅಸೋಸಿಯೇಷನ್ ಸೇರಿದಂತೆ ತಮ್ಮ ವೃತ್ತಿಜೀವನದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
49 ಪಂದ್ಯಗಳಲ್ಲಿ 148 ವಿಕೆಟ್
ಚಹಲ್ 2009ರಲ್ಲಿ ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣ ಪರವಾಗಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ಭಾರತ ‘ಎ’ ತಂಡದ ಪರ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರಿಗೆ ಮತ್ತೊಂದು ಪ್ರಮುಖ ಅವಕಾಶ ದೊರೆಯಿತು. ಆ ಸರಣಿಯಲ್ಲಿ ನಾಲ್ಕು ಇನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. ಒಟ್ಟಾರೆ ಚಹಲ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 49 ಪಂದ್ಯಗಳಿಂದ 148 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ.
ʻ100 ರೈಸಿಂಗ್ ಸ್ಟಾರ್ಸ್ ಪಟ್ಟಿಯಲ್ಲಿ ಸ್ಥಾನʼ: ವೈಭವ್ ಸೂರ್ಯವಂಶಿಗೆ TIME ಗೌರವ!
2023ರ ಬಳಿಕ ಭಾರತ ತಂಡದಿಂದ ದೂರ
ಚಹಲ್ ಕೊನೆಯ ಬಾರಿಗೆ 2023ರ ಆಗಸ್ಟ್‌ನಲ್ಲಿ ಭಾರತ ತಂಡದ ಪರ ಆಡಿದ್ದರು. 2023ರ ಏಕದಿನ ವಿಶ್ವಕಪ್‌ಗೆ ಮುನ್ನ ಅವರನ್ನು ಭಾರತ ತಂಡದ ಏಕದಿನ ತಂಡದಿಂದ ಕೈಬಿಡಲಾಗಿತ್ತು. ನಂತರ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಮರಳಿದರೂ, ಟೂರ್ನಿಯ ಬಳಿಕ ಮತ್ತೆ ತಂಡದಿಂದ ಹೊರಗುಳಿದರು.
ಇದೀಗ 36 ವರ್ಷದ ಚಹಲ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ತಮ್ಮ ಗಮನವನ್ನು ಲಿಸ್ಟ್-ಎ ಮತ್ತು ಟಿ20 ಕ್ರಿಕೆಟ್‌ನತ್ತ ಕೇಂದ್ರೀಕರಿಸಿದ್ದಾರೆ. ಭಾರತ ತಂಡಕ್ಕೆ ಮತ್ತೊಮ್ಮೆ ಮರಳುವ ಅವಕಾಶಕ್ಕಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಪ್ರಯತ್ನ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.