ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Breaking News: 4 ವರ್ಷಗಳ ಬಳಿಕ ಭಾರತ ತಂಡಕ್ಕೆ ಭುವನೇಶ್ವರ್‌ ಕುಮಾರ್‌, ನ್ಯೂಜಿಲೆಂಡ್‌ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ!

ಮುಂಬರುವ ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಸರಣಿಗೆ 16 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಕ್ಟೋಬರ್‌ 6ರಂದು ಪ್ರಕಟಿಸಿದ್ದು, ನಾಲ್ಕು ವರ್ಷಗಳ ಬಳಿಕ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ಅವರು ಐಪಿಎಲ್‌ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರ ಫಲವಾಗಿ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಪುನಃ ಸ್ಥಾನ ದೊರಕಿದೆ.

ಭಾರತ ಟಿ20 ತಂಡಕ್ಕೆ ಮರಳಿದ ಭುವನೇಶ್ವರ್‌ ಕುಮಾರ್‌.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಮುಂಬರುವ ಟಿ20ಐ ಸರಣಿಗೆ (IND vs NZ) 16 ಸದಸ್ಯರ ಭಾರತ ತಂಡವನ್ನು (India's T20I Squad) ಬಿಸಿಸಿಐ ಆಯ್ಕೆ ಸಮಿತಿ ಅಕ್ಟೋಬರ್‌ 6 ರಂದು ಮಂಗಳವಾರ ಪ್ರಕಟಿಸಿದೆ. ಕಳೆದ ಎರಡು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗಳಲ್ಲಿ ಹಾಗೂ ದೇಶೀ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದ ಭುವನೇಶ್ವರ್‌ ಕುಮಾರ್‌ (Bhuvneshwar Kumar) ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಭಾರತ ಟಿ20 ತಂಡದ ಜೊತೆಗೆ ಭಾರತ ಎ ತಂಡವನ್ನು ಕೂಡ ಪ್ರಕಟಿಸಲಾಗಿದೆ.

ಆರ್‌ಸಿಬಿ ವೇಗಿ ಭುವನೇಶ್ವರ್‌ ಕುಮಾರ್‌ ಅವರು 2022ರ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಕೊನೆಯ ಪಂದ್ಯವನ್ನು ಆಡಿದ್ದರು. ಅಡಿಲೇಡ್‌ ಓವಲ್‌ನಲ್ಲಿ ಭಾರತದ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಆದರೆ, ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಅದ್ಭುತ ಬೌಲಿಂಗ್‌ ಫಾರ್ಮ್‌ ಮುಂದುವರಿಸಿದ ಫಲವಾಗಿ ಅವರು, ಇದೀಗ ನಾಲ್ಕು ವರ್ಷಗಳ ಬಳಿಕ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. 2025 ಮತ್ತು 2026ರ ಐಪಿಎಲ್‌ ಟೂರ್ನಿಗಳಲ್ಲಿ ಭುವನೇಶ್ವರ್‌ ಕುಮಾರ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಒಟ್ಟು 45 ವಿಕೆಟ್‌ಗಳನ್ನು ಪಡೆದಿದ್ದರು.

IND vs WI: ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಏಕೆ ಆಡುತ್ತಿಲ್ಲ? ಕಾರಣ ಇಲ್ಲಿದೆ!

ಇತ್ತೀಚೆಗೆ ಹಾಂಕಾಂಗ್‌ ಸಿಕ್ಸಸ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ನಾಯಕನನ್ನಾಗಿ ಭುವನೇಶ್ವರ್‌ ಕುಮಾರ್‌ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ ಕಾರಣ, ಹಾಂಕಾಂಗ್‌ ಸಿಕ್ಸಸ್‌ ಟೂರ್ನಿಯನ್ನು ಕಳೆದುಕೊಳ್ಳಲಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ಐದು ಪಂದ್ಯಗಳ ಟಿ20ಐ ಸರಣಿ ಅಕ್ಟೋಬರ್‌ 22 ರಂದು ಆರಂಭವಾಗಲಿದೆ. ಈ ಸರಣಿಯಲ್ಲಿಯೂ ಭಾರತ ತಂಡವನ್ನು ಎಂದಿನಂತೆ ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದು, ಉಪ ನಾಯಕನಾಗಿ ತಿಲಕ್‌ ವರ್ಮಾ ನೆರವು ನೀಡಲಿದ್ದಾರೆ. ಭುವನೇಶ್ವರ್‌ ಕುಮಾರ್‌ ಅವರನ್ನು ಬಿಟ್ಟರೆ ತಂಡದಲ್ಲಿ ಬೇರೆ ಯಾವುದೇ ದೊಡ್ಡ ಬದಲಾವಣೆ ಇಲ್ಲ. ವೈಭವ್‌ ಸೂರ್ಯವಂಶಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.



ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸಲುವಾಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಅವರು ಕಿವೀಸ್‌ ಎದುರಿನ ಒಡಿಐ ಹಾಗೂ ಟೆಸ್ಟ್‌ ಸರಣಿಗಳಲ್ಲಿ ಆಡಲಿದ್ದಾರೆ. ನ್ಯೂಜಿಲೆಂಡ್‌ ಪ್ರವಾಸದಲ್ಲಿ ಭಾರತ ತಂಡ, ಐದು ಪಂದ್ಯಗಳ ಟಿ20ಐ ಸರಣಿ, ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ.

IND vs WI 1st T20I: ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ಟೀಮ್‌ ಇಂಡಿಯಾ!

ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್‌ ಅಯ್ಯರ್‌ (ನಾಯಕ), ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ವೈಭವ್‌ ಸೂರ್ಯವಂಶಿ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ತಿಲಕ್‌ ವರ್ಮಾ (ಉಪ ನಾಯಕ), ಅಕ್ಷರ್‌ ಪಟೇಲ್‌,ಶಿವಂ ದುಬೇ, ನಿತೀಶ್‌ ಕುಮಾರ್‌ ರೆಡ್ಡಿ, ನಮನ್‌ ಧೀರ್‌, ಪ್ರಿನ್ಸ್‌ ಯಾದವ್‌, ಮಯಾಂಕ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಭುವನೇಶ್ವರ್‌ ಕುಮಾರ್‌, ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌

ಭಾರತ ಎ ತಂಡ: ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ದೇವದತ್‌ ಪಡಿಕ್ಕಲ್‌, ರವಿಚಂದ್ರನ್‌ ಅಶ್ವಿನ್‌, ರಿಷಭ್‌ ಪಂತ್‌ (ಫಿಟ್ನೆಸ್‌), ಧ್ರುವ್‌ ಜುರೆಲ್‌ (ನಾಯಕ, ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌, ಆಕಿಬ್‌ ನಬಿ, ಆಕಾಶ್‌ ದೀಪ್‌, ಅನ್ಶುಲ್‌ ಕಾಂಬೋಜ್‌, ಮಾಣವ್‌ ಸುತಾರ್‌, ಮುಕೇಶ್‌ ಕುಮಾರ್‌, ಮುಖೇಶ್‌ ಚೌಧರಿ, ಸಾಯಿ ಸುದರ್ಶನ್‌, ಯಶ್‌ ರಾಥೋಡ್‌, ಮುಕೇಶ್‌ ಕುಮಾರ್‌

ಭಾರತ vs ನ್ಯೂಜಿಲೆಂಡ್ ನಡುವಣ 5 ಪಂದ್ಯಗಳ ಟಿ20ಐ ಸರಣಿಯ ವೇಳಾಪಟ್ಟಿ

22 ಅಕ್ಟೋಬರ್ 2026: 1ನೇ ಟಿ20 ಕ್ರೈಸ್ಟ್‌ಚರ್ಚ್

24 ಅಕ್ಟೋಬರ್ 2026: 2ನೇ ಟಿ20 ಕ್ರೈಸ್ಟ್‌ಚರ್ಚ್

27 ಅಕ್ಟೋಬರ್ 2026: 3ನೇ ಟಿ20 ವೆಲ್ಲಿಂಗ್ಟನ್

30 ಅಕ್ಟೋಬರ್ 2026: 4ನೇ ಟಿ20 ಆಕ್ಲೆಂಡ್

01 ನವೆಂಬರ್ 2026: 5ನೇ ಟಿ20 ‌ ಹ್ಯಾಮಿಲ್ಟನ್