ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್‌ ಅನ್ನು ಆರಿಸಿದ ವಿರಾಟ್‌ ಕೊಹ್ಲಿ!

Virat Kohli on toughest Bowler: ಭಾರತ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ತಮ್ಮ ಕ್ರಿಕೆಟ್‌ ವೃತ್ತೊ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ವೇಗಿ ಡೇಲ್‌ ಸ್ಟೇನ್‌ ಅವರನ್ನು ಕಡೆಗಣಿಸಿದ ಕೊಹ್ಲಿ, ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಜೇಮ್ಸ್‌ ಆಂಡರ್ಸನ್‌ ಅವರನ್ನು ಆರಿಸಿದ್ದಾರೆ.

ಕಠಿಣ ಬೌಲರ್‌ ಅನ್ನು ಆರಿಸಿದ ವಿರಾಟ್‌ ಕೊಹ್ಲಿ!

ಬೆಂಗಳೂರು: ಭಾರತ (India) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರುRCB) ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ್ದಾರೆ. ಟೆಸ್ಟ್‌, ಏಕದಿನ ಹಾಗೂ ಟಿ20 ಸೇರಿದಂತೆ ಎಲ್ಲಾ ಸ್ವರೂಪದಲ್ಲಿಯೂ ವಿರಾಟ್‌ ಕೊಹ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಮೆರೆದಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್‌ ಅನ್ನು ಆರಿಸಿದ್ದಾರೆ. ದಕ್ಷಿಣ ಆಫ್ರಿಕಾ ದಿಗ್ಗಹ ವೇಗಿ ಡೇಲ್‌ ಸ್ಟೇನ್‌ ಅವರನ್ನು ಕೆಡಗಣಿಸಿ ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಜೇಮ್ಸ್‌ ಆಂಡರ್ಸನ್‌ ಅವರನ್ನು ಆರಿಸಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೂಡ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಅಲ್ಲದೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 10000 ರನ್‌ಗಳನ್ನು ಪೂರ್ಣಗೊಳಿಸಿದ ಬ್ಯಾಟ್ಸ್‌ಮನ್‌ ಕೂಡ ವಿರಾಟ್‌ ಕೊಹ್ಲಿ. ಹಲವು ವರ್ಷಗಳ ಕಾಲ ಭಾರತ ತಂಡದ ಪರ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ಬ್ಯಾಟ್ಸ್‌ಮನ್‌ ಕೂಡ ಕೊಹ್ಲಿಆಗಿದ್ದಾರೆ.

RCB vs CSK: ಚೆನ್ನೈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ ರಾಯುಡು

2011 ರಿಂದ ಇಲ್ಲಿಯವರೆಗೂ ವಿರಾಟ್‌ ಕೊಹ್ಲಿ ಭಾರತ ಟೆಸ್ಟ್‌ ತಂಡದಲ್ಲಿ ನಿಯಮಿತವಾಗಿ ಆಡಿಕೊಂಡು ಬರುತ್ತಿದ್ದಾರೆ. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲವೇ ಕೆಲವು ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ಈ ಬೌಲರ್‌ಗಳ ಪೈಕಿ ಇಂಗ್ಲೆಂಡ್‌ ಮಾಜಿ ವೇಗಿ ಜೇಮ್ಸ್‌ ಆಂಡರ್ಸನ್‌ ಕೂಡ ಒಬ್ಬರು.

ಜೇಮ್ಸ್‌ ಆಂಡರ್ಸನ್‌ ಅತ್ಯಂತ ಕಠಿಣ ಬೌಲರ್‌

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಟೆಸ್ಟ್‌, ಒಡಿಐ ಹಾಗೂ ಟಿ20 ಸೇರಿ ಮೂರೂ ಸ್ವರೂಪದಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ವೇಗಿ ಯಾರೆಂದು ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ದಿಗ್ಗಜ ವೇಗಿ ಡೇಲ್‌ ಸ್ಟೇನ್‌ ಅವರನ್ನು ಕಡೆಗಣಿಸಿದ ವಿರಾಟ್‌ ಕೊಹ್ಲಿ, ಜೇಮ್ಸ್‌ ಆಂಡರ್ಸನ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.‌

IPL 2025: ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರೈಸಿ ಎಲೈಟ್‌ ಪಟ್ಟಿ ಸೇರಿದ ಬಟ್ಲರ್‌

ವಿರಾಟ್‌ ಕೊಹ್ಲಿ vs ಜೇಮ್ಸ್‌ ಆಂಡರ್ಸನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಜೇಮ್ಸ್‌ ಆಂಡರ್ಸನ್‌ ಅವರು ಸಾಕಷ್ಟು ಬಾರಿ ಮುಖಾಮುಖಿಯಾಗಿದ್ದಾರೆ. ಇಂಟರ್‌ನ್ಯಾಷನಲ್‌ ಕ್ರಿಕೆಟ್‌ನಲ್ಲಿ ಜೇಮ್ಸ್‌ ಆಂಡರ್ಸನ್‌ ಅವರ ಒಟ್ಟು 710 ಎಸೆತಗಳನ್ನು ಆಡಿರುವ ವಿರಾಟ್‌ ಕೊಹ್ಲಿ 7 ಬಾರಿ ವಿಕೆಟ್‌ ಒಪ್ಪಿಸಿದ್ದಾರೆ ಹಾಗೂ 305 ರನ್‌ಗಳನ್ನು ಕಲೆ ಹಾಕಿದ್ದಾರೆ. ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಈ ಇಬ್ಬರೂ 36 ಬಾರಿ ಮುಖಾಮುಖಿಯಾಗಿದ್ದಾರೆ.

IPL 2025 Points Table: ಗುಜರಾತ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ತಂಡ ಆರ್‌ಸಿಬಿ

ಸುನೀಲ್‌ ನರೇನ್‌ ಟಿ20ಯಲ್ಲಿ ಕಠಿಣ ಬೌಲರ್‌

ಇನ್ನು ಟಿ20 ಕ್ರಿಕೆಟ್‌ನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ವೆಸ್ಟ್‌ ಇಂಡೀಸ್‌ ಸ್ಪಿನ್ನರ್‌ ಸುನೀಲ್‌ ನರೇನ್‌ ಅವರನ್ನು ಆರಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಸಾಕಷ್ಟು ಬಾರಿ ಸುನೀಲ್‌ ನರೇನ್‌ ಅವರನ್ನು ಎದುರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ದಿಗ್ಗಹ ಲಸಿತ್‌ ಮಾಲಿಂಗ ಹಾಗೂ ಆದಿಲ್‌ ರಶೀದ್‌ ಅವರನ್ನು ಆಯ್ಕೆ ಮಾಡಿದ್ದಾರೆ.