ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL 2026) ಎಂಎಸ್ ಧೋನಿ (MS Dhoni) ಅವರ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ. ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಮುಂದುವರಿದರೆ, ಧೋನಿ ನಿವೃತ್ತಿಯನ್ನು ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಚೋಪ್ರಾ, “ಧೋನಿ ಸೀಮಿತ ಪಾತ್ರದಲ್ಲೇ ಆಡುತ್ತಿರುವುದು ಕಂಡುಬಂದರೆ, ಅವರು ‘ಬೂಟ್ಸ್ ನೇತಾಕುವ’ ಸಮಯ ಬಂದಿರಬಹುದು ಎಂಬ ಸೂಚನೆ ನೀಡುತ್ತದೆ,” ಎಂದು ಹೇಳಿದ್ದಾರೆ.
“ಇದು ಅವರ ಕೊನೆಯ ಸೀಸನ್ ಆಗಿರಬಹುದು ಎಂದು ನಾನು ಭಾವಿಸುತ್ತೇನೆ. ಈಗ ಅವರ ಉತ್ತರಾಧಿಕಾರಿ ಸಿದ್ಧನಿದ್ದಾರೆ. ಸಂಜು ಸ್ಯಾಮ್ಸನ್ ಮುಂದೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ, ಅದು ಈ ಸೀಸನ್‌ನಲ್ಲೇ ಯಾವಾಗಲಾದರೂ ಸಂಭವಿಸಬಹುದು,” ಎಂದು ಅವರು ತಿಳಿಸಿದ್ದಾರೆ.
IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕಠಿಣ ನಿಯಮ ಜಾರಿ; ಬೆಂಗಳೂರು ಕಮಿಷನರ್ ಮಹತ್ವದ ಸುದ್ದಿಗೋಷ್ಠಿ
“ಮತ್ತೊಮ್ಮೆ ಹೇಳುವುದಾದರೆ, ಎಂಎಸ್ ಧೋನಿ ಅವರ ಫಿಟ್ನೆಸ್ ಮತ್ತು ಮಣಿಕಟ್ಟು (ಮಂಡಿ) ಸ್ಥಿತಿಯ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಆದರೆ ಅವರು ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡಬಾರದು. ಅವರು ಆ ಪಾತ್ರದಲ್ಲೇ ಮುಂದುವರಿದರೆ, ನನ್ನ ಅಭಿಪ್ರಾಯದಲ್ಲಿ ಅವರು ನಿವೃತ್ತಿಯಾಗುವ ಸಮಯ ಬಂದಿದೆ,” ಎಂದು ಅವರು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅನೌಪಚಾರಿಕ ನಾಯಕತ್ವವನ್ನು ಇನ್ನೂ ಎಂಎಸ್ ಧೋನಿ ವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿ, “ಒಂದು ಸಣ್ಣ ಉದಾಹರಣೆ ಇದೆ. ಮಗುವು ನಡೆಯಲು ಆರಂಭಿಸಬೇಕಾದರೆ, ಅದರ ಕೈ ಹಿಡಿದು ಕಲಿಸಬೇಕು. ಆದರೆ ಅದು ಓಡಲು ಕಲಿಯಬೇಕಾದರೆ, ಕೈ ಬಿಡಬೇಕು. ನೀವು ಕೈ ಹಿಡಿದುಕೊಂಡೇ ಇದ್ದರೆ, ಅದು ಎಂದಿಗೂ ಓಡಲು ಕಲಿಯುವುದಿಲ್ಲ. ಧೋನಿ ಅವರ ದೃಷ್ಟಿಯಿಂದ ನೋಡಿದರೆ, ಯಾರನ್ನಾದರೂ ಮುಂದಿನ ನಾಯಕನಾಗಿ ಆಯ್ಕೆ ಮಾಡಿದ್ದರೆ, ಅವರು ಹಿಂದೆ ಸರಿಯಬೇಕು. ನನ್ನ ಅನಿಸಿಕೆಯಲ್ಲಿ, ಅವರು ಈಗಾಗಲೇ ಹಾಗೆ ಮಾಡಿದ್ದಾರೆ,” ಎಂದು ತಿಳಿಸಿದ್ದಾರೆ.
IPL 2026: ಕಾಲ್ತುಳಿದಲ್ಲಿ ಮೃತರಾದವರಿಗೆ ಗೌರವಾರ್ಥವಾಗಿ 11 ಆಸನಗಳನ್ನು ಕಾಯ್ದಿರಿಸಿದ ಆರ್‌ಸಿಬಿ!
“ಹರಾಜು ಪ್ರಕ್ರಿಯೆ ಮತ್ತು ತಂಡವನ್ನು ರೂಪಿಸಿರುವ ರೀತಿಯನ್ನು ನೋಡಿದರೆ, ಇದು ಸಂಪೂರ್ಣವಾಗಿ ಎಂಎಸ್ ಧೋನಿ ಕಟ್ಟುತ್ತಿದ್ದ ತಂಡವಲ್ಲ. ಒಂದೇ ಬಾರಿ ಇಷ್ಟು ಯುವ ಆಟಗಾರರನ್ನು ಅವರು ಆಯ್ಕೆ ಮಾಡುತ್ತಿದ್ದಾರೆಯೇ? ಇದು ಋತುರಾಜ್ ಗಾಯಕ್ವಾಡ್ ಅವರ ತಂಡ,” ಎಂದು ಅವರು ಹೇಳಿದ್ದಾರೆ.
“ಎಂಎಸ್ ಧೋನಿ ಈಗ ಪರಿಸ್ಥಿತಿಗಳನ್ನು ಗಮನಿಸುತ್ತಾರೆ, ಹೆಚ್ಚು ಮಾತನಾಡುವುದಿಲ್ಲ. ಅವಶ್ಯಕವಾದಲ್ಲಿ ಸಲಹೆ ನೀಡಬಹುದು, ಆದರೆ ಅದು ಅಷ್ಟರಲ್ಲೇ ಸೀಮಿತವಾಗಿರುತ್ತದೆ,” ಎಂದು ಅವರು ಸೇರಿಸಿದರು.