ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದುಬಾರಿ ಆಟಗಾರರ ಸಾಲಿನಲ್ಲಿ ಒಬ್ಬರಾಗಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ (Cameron Green) ಮತ್ತೊಮ್ಮೆ ನಿರಾಶೆ ಮೂಡಿಸಿದ್ದಾರೆ. ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿಯೂ (PBKS vs KKR) ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಕೆಕೆಆರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಸೀಸ್ ಆಟಗಾರನ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ ನಿರ್ಧಾರಕ್ಕೆ ಕ್ಸಿವಿಯರ್ ಬಾರ್ಲೆಟ್ ಪೆಟ್ಟು ನೀಡಿದರು. ಅವರು ಫಿನ್ ಆಲೆನ್ ಹಾಗೂ ಕ್ಯಾಮೆರಾನ್ ಗ್ರೀನ್ ಅವರನ್ನು ಔಟ್ ಮಾಡಿದರು. ಫಿನ್ ಆಲೆನ್ ಔಟ್ ಆದ ಬಳಿಕ ಕ್ರೀಸ್‌ಗೆ ಬಂದ ಗ್ರೀನ್, ಎರಡು ಎಸೆತಗಳಲ್ಲಿ ಒಂದು ಬೌಂಡರಿ ಸಿಡಿಸಿದ ಬಳಿಕ ಬಾರ್ಲೆಟ್ ಎಸೆತದಲ್ಲಿ ಪ್ರಭ್‌ಸಿಮ್ರನ್‌ಗೆ ಕ್ಯಾಚ್ ಕೊಟ್ಟರು.
IPL 2026: ಅಧಿಕ ಪ್ರಸಂಗ ತೋರಿದ ಆವೇಶ್ ಖಾನ್‌ಗೆ ಬುದ್ದಿ ಕಲಿಸುತ್ತಾ ಬಿಸಿಸಿಐ? ಇಲ್ಲಿದೆ ವಿಡಿಯೊ
ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಹಾಗೂ ಸುನೀಲ್ ನರೇನ್ ಅವರ ಅನುಪಸ್ಥಿತಿಯಲ್ಲಿ ಕೆಕೆಆರ್ ಕಣಕ್ಕೆ ಇಳಿದಿತ್ತು. ಏಕೆಂದರೆ ಕಳೆದ ಎರಡೂ ಪಂದ್ಯಗಳಲ್ಲಿ ಈ ಇಬ್ಬರೂ ವಿಫಲರಾಗಿದ್ದರು. ಅಂದ ಹಾಗೆ ಗ್ರೀನ್ ಕೂಡ ಕೊನೆಯ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವಿಫಲರಾಗಿದ್ದರು. ಆದರೂ ಅವರಿಗೆ ಈ ಪಂದ್ಯದಲ್ಲಿ ಅವಕಾಶವನ್ನು ನೀಡಿತು. ಆದರೂ ಅವರು ಕೇವಲ 4 ರನ್‌ಗೆ ಸೀಮಿತರಾದರು.
ಕ್ಯಾಮೆರಾನ್ ಗ್ರೀನ್ ವಿರುದ್ಧ ಫ್ಯಾನ್ಸ್ ಆಕ್ರೋಶ
ಅಭಿಮಾನಿಗಳು ಕ್ಯಾಮೆರಾನ್ ಗ್ರೀನ್ ಅವರ ಫಾರ್ಮ್ ಅನ್ನು ಪ್ರಶ್ನೆ ಮಾಡಿದ್ದಾರೆ. ಇವರನ್ನು ಕೋಲ್ಕತಾ ಫ್ರಾಂಚೈಸಿ ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳನ್ನು ನೀಡಿ ಖರೀದಿಸಿತ್ತು. ಆದರೆ, ಅವರು ಮೂರು ಪಂದ್ಯಗಳಿಗೆ ತಮ್ಮ ಬೆಲೆಗೆ ಮೌಲ್ಯವನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಸೀಸ್ ಆಲ್‌ರೌಂಡರ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
IPL 2026: ʻನಾನಿನ್ನೂ ಆಡಬೇಕಾಗಿತ್ತುʼ-ಐಪಿಎಲ್ ನಿವೃತ್ತಿಗೆ ಕಾರಣ ತಿಳಿಸಿದ ಆರ್ ಅಶ್ವಿನ್!
ಇನ್ನೂ ಕೆಲ ಅಭಿಮಾನಿಗಳು ತಂಡದಲ್ಲಿನ ಕ್ಯಾಮೆರಾನ್ ಗ್ರೀನ್ ಅವರ ಪ್ರಸ್ತುತ ಪಾತ್ರದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಇವರಿಂದ ಇನ್ನೂ ಬೌಲಿಂಗ್ ಮಾಡಲು ಅನುಮತಿ ಸಿಗದಿರುವುದರಿಂದ, ಕೇವಲ ಬ್ಯಾಟ್ಸ್‌ಮನ್ ಆಗಿ ಅವರು ಆಡುತ್ತಿದ್ದಾರೆ ಹಾಗೂ ತಂಡ ನೀಡಿದ ಬೆಲೆಗೆ ತಕ್ಕಂತೆ ಅವರು ಆಡುತ್ತಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು. “ಬೆಲೆಗೂ ಪ್ರದರ್ಶನಕ್ಕೂ ಹೊಂದಾಣಿಕೆ ಇಲ್ಲ” ಎಂದು ದೂರಿದ್ದಾರೆ.
ಕೆಕೆಆರ್ vs ಪಿಬಿಕೆಎಸ್ ಪಂದ್ಯಕ್ಕೆ ಮಳೆ ಕಾಟ
ಇನ್ನು ಕ್ಯಾಮೆರಾನ್ ಗ್ರೀನ್ ಅವರು ವಿಕೆಟ್ ಒಪ್ಪಿಸಿದ ಬಳಿಕ ಪಂದ್ಯಕ್ಕೆ ಮಳೆ ಕಾಟ ನೀಡಿತು. ಕೆಕೆಆರ್ 3.4 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದ ಬಳಿಕ ಮಳೆ ಆಗಮಿಸಿತು. ಇದರಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು.