ನವದೆಹಲಿ: ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ (IPL 2026) ಮುನ್ನ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ನೇಥನ್ ಎಲ್ಲಿಸ್ (Nathan Ellis) ಅವರು ಸ್ನಾಯು ಸೆಳೆತದ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಚೆನ್ನೈ ತಂಡದ ಅಧಿಕಾರಿ ಗುರುವಾರ ಇದನ್ನು ದೃಢಪಡಿಸಿದ್ದಾರೆ. ಮತೀಶ ಪತಿರಣ ಅವರು ಕೋಲ್ಕತಾ ನೈಟ್ ರೈಡರ್ಸ್‌ಗೆ ಸೇರ್ಪಡೆಯಾದ ಬಳಿಕ ಸಿಎಸ್‌ಕೆ ವೇಗದ ಬೌಲಿಂಗ್ ವಿಭಾಗವನ್ನು ನೇಥನ್ ಎಲ್ಲಿಸ್ ಮುನ್ನಡೆಸಬೇಕಾಗಿತ್ತು. ಆದರೆ, ಅವರು ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ನೇಥನ್ ಎಲ್ಲಿಸ್ ಗಾಯಕ್ಕೆ ತುತ್ತಾಗಿರುವ ವಿಷಯವನ್ನು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್ ಅವರು ಮಾರ್ಚ್ 19 ರಂದು ಮಾಹಿತಿ ನೀಡಿದ್ದಾರೆ. ಆಸೀಸ್ ವೇಗಿ ಟೂರ್ನಿಯಿಂದ ಹೊರನಡೆದಿರುವ ಬಗ್ಗೆ ಚೆನ್ನೈ ಫ್ರಾಂಚೈಸಿ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ವರದಿ ಪ್ರಕಾರ, ನೇಥನ್ ಎಲ್ಲಿಸ್ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೊಳಗಾಗಿದ್ದು, ಐಪಿಎಲ್ ಆರಂಭಕ್ಕೂ ಮುನ್ನ ಗುಣಮುಖರಾಗುವ ಸಾಧ್ಯತೆ ಇಲ್ಲ.
IPL 2026: ರಾಜಸ್ಥಾನ್ ರಾಯಲ್ಸ್ ತೊರೆದ ಸಂಜು ಸ್ಯಾಮ್ಸನ್ ಬಗ್ಗೆ ರಿಯಾನ್ ಪರಾಗ್ ದೊಡ್ಡ ಹೇಳಿಕೆ!
“ಇದು ನಮಗೆ ದೊಡ್ಡ ಹೊಡೆತ. ನೇಥನ್ ಎಲ್ಲಿಸ್ ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಪ್ರಮುಖ ಬೌಲರ್. ನಾವು ಈಗ ಬದಲಿಗೆ ಆಟಗಾರರನ್ನು ಹುಡುಕುತ್ತಿದ್ದೇವೆ,” ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ನೇಥಮ್ ಎಲ್ಲಿಸ್ 17 ಐಪಿಎಲ್ ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂಜಾಬ್ ಕಿಂಗ್ಸ್‌ನೊಂದಿಗೆ ನಾಲ್ಕು ಋತುಗಳನ್ನು ಕಳೆದ ನಂತರ, ಅವರನ್ನು 2025ರ ಮೆಗಾ ಹರಾಜಿನಲ್ಲಿ 2 ಕೋಟಿ ರು. ಗಳಿಗೆ ಸಿಎಸ್‌ಕೆ ಖರೀದಿಸಿತ್ತು ಮತ್ತು 2026ರ ಟೂರ್ನಿಗೂ ಮುಂಚಿತವಾಗಿ ತಂಡ ಅವರನ್ನು ಉಳಿಸಿಕೊಂಡಿತ್ತು. ಇದೀಗ ಗಾಯಗೊಂಡಿರುವ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಹುಡುಕುತ್ತಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ, ಮಾರ್ಚ್ 30 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
IPL 2026: ಇಶಾನ್ ಕಿಶನ್‌ಗೆ ಎಸ್‌ಆರ್‌ಎಚ್ ನಾಯಕತ್ವ ನೀಡಿದ ಬಗ್ಗೆ ಆಕಾಶ್ ಚೋಪ್ರಾ ಪ್ರತಿಕ್ರಿಯೆ!
ಆರನೇ ಪ್ರಶಸ್ತಿಯತ್ತ ಸಿಎಸ್‌ಕೆ ಕಣ್ಣು
2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತನ್ನ ಆರನೇ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದು ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಸ್ಥಾನಮಾನವನ್ನು ಪಡೆಯಲು ಎದುರು ನೋಡುತ್ತಿದೆ. ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ತಂಡ ಅನುಭವ ಮತ್ತು ಯುವ ಉತ್ಸಾಹದ ಪರಿಪೂರ್ಣ ಮಿಶ್ರಣದೊಂದಿಗೆ ಮೈದಾನವನ್ನು ಪ್ರವೇಶಿಸಲು ಸಜ್ಜಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಪ್ರೀ-ಸೀಸನ್ ಶಿಬಿರವನ್ನು ಮೊದಲೇ ಆರಂಭಿಸಿತ್ತು. ಆದರೆ ಈ ಸೀಸನ್‌ನಲ್ಲಿ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅಲಭ್ಯರಾಗಿಲ್ಲ. ಇದರ ಬದಲಾಗಿ, ವಿಕೆಟ್‌ಕೀಪರ್-ಬ್ಯಾಟರ್ ವಿಭಾಗವನ್ನು ಬಲಪಡಿಸಲು ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಂಡಿದೆ. ಉತ್ತಮ ಫಾರ್ಮ್‌ನಲ್ಲಿರುವ ಸ್ಯಾಮ್ಸನ್, ನಾಯಕ ಋತುರಾಜ್ ಗಾಯಕ್ವಾಡ್ ಜೊತೆ ಓಪನಿಂಗ್ ಮಾಡುವ ನಿರೀಕ್ಷೆಯಿದೆ. ಎಂಎಸ್ ಧೋನಿ ಯುಗದ ನಂತರದ ಪರಿವರ್ತನಾ ಹಂತಕ್ಕೆ ಸಜ್ಜಾಗುತ್ತಿರುವ ಸಿಎಸ್‌ಕೆ, ಹೊಸ ಸಂಯೋಜನೆಯೊಂದಿಗೆ ಈ ಸೀಸನ್‌ಗೆ ಕಣಕ್ಕಿಳಿಯಲಿದೆ.