ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs KKR: ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ಪ್ಲೇಆಫ್ಸ್‌ ಆಸೆ ಜೀವಂತ!

MI vs KKR Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 4 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ ಆಸೆ ಜೀವಂತವಾಗಿದೆ.

ಮುಂಬೈ ಎದುರು ಕೋಲ್ಕತಾಗೆ ರೋಚಕ ಜಯ.

ಕೋಲ್ಕತಾ: ಬೌಲಿಂಗ್‌ ಹಾಗ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಮುಂಬೈ ಇಂಡಿಯನ್ಸ್ ಎದುರು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ(MI vs KKR) 4 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಈ ಗೆಲುವಿನ ಮೂಲಕ 13 ಅಂಕಗಳನ್ನು ಕಲೆ ಹಾಕಿರುವ ಕೆಕೆಆರ್‌ ಆರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ತನ್ನ ಕೊನೆಯ ಪಂದ್ಯವನ್ನು ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗೆದ್ದರೂ ಕೆಕೆಆರ್ ಪ್ಲೇಆಫ್ಸ್‌ಗೆ ಪ್ರವೇಶ ಮಾಡಬೇಕೆಂದರೆ, ರಾಜಸ್ಥಾನ್‌ ರಾಯಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ತನ್ನ-ತನ್ನ ಪ್ರತ್ಯೇಕ ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಗಿದೆ.

ಬುಧವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ನೀಡಿದ್ದ 148 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಮನೀಷ್‌ ಪಾಂಡೆ ಹಾಗೂ ರೊವ್ಮನ್‌ ಪೊವೆಲ್‌ ಅವರ ನಿರ್ಣಾಯಕ ಬ್ಯಾಟಿಂಗ್‌ ಬಲದಿಂದ 18.5 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿ ಗೆದ್ದು ಬೀಗಿತು. ಇದು ಈ ಸೀಸನ್‌ನಲ್ಲಿ ಅಜಿಂಕ್ಯ ರಹಾನೆ ಪಡೆಗೆ 6ನೇ ಗೆಲುವಾಗಿದೆ. ಇನ್ನು ಈಗಾಗಲೇ ಪ್ಲೇಆಫ್ಸ್‌ ರೇಸ್‌ನಿಂದ ಹೊರ ಬಿದ್ದಿರುವ ಹಾರ್ದಿಕ್‌ ಪಾಂಡ್ಯ ಸಾರಥ್ಯದ ಮುಂಬೈಗೆ ಇದು 9ನೇ ಸೋಲಾಯಿತು. ಕಾರ್ಬಿನ್‌ ಬಾಷ್‌ ಅವರ ಆಲ್‌ರೌಂಡರ್‌ ಆಟ ವ್ಯರ್ಥವಾಯಿತು.

IPL 2026: ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿಯ ಮಹತ್ವವನ್ನು ತಿಳಿಸಿದ ಮೊ ಬೊಬಾಟ್‌!

ಅಜಿಂಕ್ಯ ರಹಾನೆ ಜೊತೆ ಇನಿಂಗ್ಸ್‌ ಆರಂಭಿಸಿದ ಫಿನ್‌ ಆಲೆನ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ನಾಯಕ ಅಜಿಂಕ್ಯ ರಹಾನೆ 21 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಇದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಇವರು ಮನೀಷ್‌ ಪಾಂಡೆ ಜೊತೆ 38 ರನ್‌ಗಳ ಜೊತೆಯಾಟವನ್ನು ಆಡಿದರು. ಆದರೆ, ಇದೇ ಮೊದಲ ಬಾರಿ ಈ ಸೀಸನ್‌ನಲ್ಲಿ ಕ್ರೀಸ್‌ಗೆ ಬಂದ ಕನ್ನಡಿಗ ಮನೀಷ್‌ ಪಾಂಡೆ 33 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ನಿರ್ಣಾಯಕ 45 ರನ್‌ ಗಳಿಸಿದರು ಹಾಗೂ ರೊವ್ಮನ್‌ ಪೊವೆಲ್‌ ಜೊತೆ 64 ರನ್‌ಗಳ ಪ್ರಮುಖ ಜೊತೆಯಾಟವನ್ನು ಆಡಿದ ಬಳಿಕ 15ನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಕ್ಲೀನ್‌ ಬೌಲ್ಡ್‌ ಆದರು.



ನಂತರ ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರಿಸಿದ ರೊವ್ಮನ್‌ ಪೊವೆಲ್‌ 30 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 40 ರನ್‌ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದು ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ರಿಂಕು ಸಿಂಗ್‌ (9* ರನ್‌) ಬೌಂಡರಿ ಬಾರಿಸಿ ತಮ್ಮ ತಂಡವನ್ನು ಗೆಲ್ಲಿಸಿದರು.


IPL 2026: Corbin Bosch's All-Round Effort In Vain As Kolkata Knight Riders Beat Mumbai Indians To Stay Alive

147 ರನ್‌ ಕಲೆ ಹಾಕಿದ ಮುಂಬೈ ಇಂಡಿಯನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಮುಂಬೈ ಇಂಡಿಯನ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 147 ರನ್‌ಗಳನ್ನು ಕಲೆ ಹಾಕಿತು. ಮುಂಬೈ ಪರ ಕಾರ್ಬಿನ್‌ ಬಾಷ್‌ ಅವರು 18 ಎಸೆತಗಳಲ್ಲಿ ಅಜೇಯ 32 ರನ್‌ಗಳನ್ನು ಕಲೆ ಹಾಕಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ.



ಕ್ಯಾಮೆರಾನ್‌ ಗ್ರೀನ್‌, ಸೌರಭ್‌ ದುಬೇ ಹಾಗೂ ಕಾರ್ತಿಕ್‌ ತ್ಯಾಗಿ ಅವರು ಮಾರಕ ಬೌಲಿಂಗ್‌ ದಾಳಿಯ ಎದುರು ಮುಂಬೈ ಇಂಡಯನ್ಸ್‌ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ರಯಾನ್‌ ರಿಕೆಲ್ಟನ್‌(6) ಹಾಗೂ ನಮನ್‌ ಧಿರ್‌(0) ಅವರನ್ನು ಕ್ಯಾಮೆರಾನ್‌ ಗ್ರೀನ್‌ ಔಟ್‌ ಮಾಡಿದರು. 15 ರನ್‌ ಗಳಿಸಿದ ಬಳಿಕ ರೋಹಿತ್‌ ಶರ್ಮಾ ಹಾಗೂ ಸೂರ್ಯಕುಮಾರ್‌ ಯಾದವ್‌ (15) ಅವರನ್ನು ಸೌರಭ್‌ ದುಬೇ ಔಟ್‌ ಮಾಡಿದರು. ತಿಲಕ್‌ ವರ್ಮಾ 20 ರನ್‌ ಗಳಿಸಿ ಔಟ್‌ ಆದರು.

ಹಾರ್ದಿಕ್‌ ಪಾಂಡ್ಯ ಅವರು 27 ಎಸೆತಗಳಲ್ಲಿ 26 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ವಿಲ್‌ ಜ್ಯಾಕ್ಟ್‌ ಬೇಗ ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಕಾರ್ಬಿನ್‌ ಬಾಷ್‌ ಅವರು 18 ಎಸೆತಗಳಲ್ಲಿ 32 ರನ್‌ಗಳನ್ನು ಗಳಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತಂಡದ ಮೊತ್ತವನ್ನು 150ರ ಸನಿಹ ತಲುಪಿಸುವಲ್ಲಿ ನೆರವು ನೀಡಿದರು. ಸೌರಭ್‌ ದುಬೇ, ಕ್ಯಾಮೆರಾನ್‌ ಗ್ರೀನ್‌ ಹಾಗೂ ಕಾರ್ತಿಕ್‌ ತ್ಯಾಗಿ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.