ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಕ್ಯಾಮೆರಾಗಳ ಮುಂದೆ ವಿರಾಟ್‌ ಕೊಹ್ಲಿ ನಟನೆ? ಸಂಜಯ್‌ ಮಾಂಜ್ರೇಕರ್‌ ಅಚ್ಚರಿ ಹೇಳಿಕೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿಯೂ ಇನ್ನೂ ಅದೇ ಉತ್ಸಾಹ, ಜ್ವಾಲೆ ಮತ್ತು ಶಕ್ತಿಯನ್ನು ಉಳಿಸಿಕೊಂಡಿರುವುದು ತಮಗೆ ಅಚ್ಚರಿ ತಂದಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್ ಹೇಳಿದ್ದಾರೆ. ಕೊಹ್ಲಿಯ ಭಾವನಾತ್ಮಕ ತೀವ್ರತೆ ಹಾಗೂ ಟೀಕೆಗಳಿಗೆ ಸ್ಪಂದಿಸುವ ಸ್ವಭಾವವೇ ಹಲವು ವರ್ಷಗಳಿಂದ ಅವರ ಆಟಕ್ಕೆ ಪ್ರೇರಣೆಯಾಗಿದ್ದು, ಅದೇ ಮನೋಭಾವ ಅವರನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುವಂತೆ ಮಾಡುತ್ತಿದೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ಸಂಜಯ್‌ ಮಾಂಜ್ರೇಕರ್.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ(Virat Kohli) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆ, ಅವರು ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದ್ದಾರೆ. ಆದರೂ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌, ವಿರಾಟ್‌ ಕೊಹ್ಲಿ ಅವರಲ್ಲಿನ ಆಟದ ಉತ್ಸಾಹ, ತೀವ್ರತೆ ಹಾಗೂ ಆಕ್ರಮಣಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಇನ್‌ಸೈಟ್‌ ಎಡ್ಜ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸಂಜಯ್‌ ಮಾಂಜ್ರೇಕರ್‌, ವಿರಾಟ್‌ ಕೊಹ್ಲಿ ಅವರ ಮೈದಾನದೊಳಗಿನ ವ್ಯಕ್ತಿತ್ವವನ್ನು ಸುತ್ತುವರೆದಿರುವ ನಕಾರಾತ್ಮಕ ಸಂಗತಿಗಳನ್ನು ತಳ್ಳಿಹಾಕಿದರು. 37ನೇ ವಯಸ್ಸಿನ ವಿರಾಟ್‌ ಕೊಹ್ಲಿ ಅವರಲ್ಲಿ ಇಂದು ಕಾಣಿಸುತ್ತಿರುವ ಆ ಕಿಚ್ಚು ಹೊಸದಾಗಿ ಸೃಷ್ಟಿಸಲಾದ ವ್ಯಕ್ತಿತ್ವವಲ್ಲ. ದೆಹಲಿಯ ಧೂಳಿನ ಮೈದಾನಗಳಲ್ಲಿ ಅವರ ಕ್ರಿಕೆಟ್ ಪಯಣ ಆರಂಭವಾದಾಗಿನಿಂದಲೇ ಇದ್ದ ಅದೇ ನೈಜ ಉತ್ಸಾಹ ಮತ್ತು ಆಕ್ರಮಣಕಾರಿ ಮನೋಭಾವ ಇಂದಿಗೂ ಮುಂದುವರಿದಿದೆ ಎಂದು ಅವರು ಹೇಳಿದರು.

RCB vs KKR: ಕೆಕೆಆರ್‌ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದ ವೇಳೆಯೂ ವಿರಾಟ್‌ ಕೊಹ್ಲಿ ಡಗೌಟ್‌ನಲ್ಲಿ ಆಕ್ರಮಣಕಾರಿ ಸಂಭ್ರಮಿಸಿದ್ದರು. ಟಿವಿಯಲ್ಲಿ ಇದನ್ನು ಸೆರೆಹಿಡಿಯಲಾಗಿತ್ತು ಹಾಗೂ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಇದನ್ನು ನೋಡಿದ ಕೆಲವರು ವಿರಾಟ್‌ ಕೊಹ್ಲಿ ಕ್ಯಾಮೆರಾ ಮುಂದೆ ಮಾತ್ರ ಈ ರೀತಿಯ ವರ್ತನೆ ತೋರುತ್ತಾರೆಂದು ಚರ್ಚೆ ನಡೆಸಿದ್ದರು. ಆದರೆ, ಇದನ್ನು ಸಂಜಯ್‌ ಮಾಂಜ್ರೇಕರ್‌ ತಳ್ಳಿ ಹಾಕಿದ್ದಾರೆ.

“ಬಹಳಷ್ಟು ಜನರು ಹಾಗೂ ಕೆಲ ಆಟಗಾರರೂ ಸಹ, ವಿರಾಟ್‌ ಕೊಹ್ಲಿ ಕ್ಯಾಮೆರಾಗಾಗಿ ಈ ರೀತಿಯ ವರ್ತನೆ ತೋರಿಸುತ್ತಾರೆ ಎಂದು ನಂಬುತ್ತಾರೆ,” ಎಂದು ಸಂಜಯ್‌ ಮಾಂಜ್ರೇಕರ್‌ ತಿಳಿಸಿದ್ದಾರೆ.

“ಆದರೆ ನಾನು ಅದನ್ನು ಒಪ್ಪುವುದಿಲ್ಲ. ಏಕೆಂದರೆ ಅಂಡರ್-19 ಹಂತದಲ್ಲಿಯೇ ಅವರನ್ನು ನಾನು ನೋಡಿದ್ದೇನೆ. ಅವರು ಆಟವನ್ನು ಇದೇ ರೀತಿಯಲ್ಲಿ ಆಡುತ್ತಾರೆ. ಅದೇ ಮನೋಭಾವವೇ ಅವರನ್ನು ಬ್ಯಾಟರ್ ಆಗಿಯೂ ಮುಂದಕ್ಕೆ ಕೊಂಡೊಯ್ದಿದೆ. ಎದುರಾಳಿ ತಂಡದ ಮೇಲೆ ಅವರು ಕೋಪಗೊಂಡಾಗ, ಇನ್ನಷ್ಟು ಉತ್ತಮವಾಗಿ ಆಡುತ್ತಾರೆ,” ಎಂದು ಅವರು ಹೇಳಿದ್ದಾರೆ.

RCB vs KKR: ಕೆಕೆಆರ್‌ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

ಈ ವಿಶಿಷ್ಟ ಶಕ್ತಿ, ನಿರಂತರ ಉತ್ಸಾಹ ಮತ್ತು ಕಡಿಮೆಯಾಗದ ಚೈತನ್ಯವೇ ವಯಸ್ಸಿನ ಸಹಜ ಪ್ರಭಾವವನ್ನೂ ಮೀರಿ ನಿಂತಿದೆ. ಸಾಮಾನ್ಯವಾಗಿ ಆಟಗಾರರ ವಯಸ್ಸು ಹೆಚ್ಚಾದಂತೆ, ಕೂದಲು ಬೆಳ್ಳಗಾಗುತ್ತಾ ಟ್ರೋಫಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಉತ್ಸಾಹ ಕಡಿಮೆಯಾಗಬೇಕು, ಶಾಂತ ಸ್ವಭಾವಕ್ಕೆ ತಿರುಗಬೇಕು ಎಂಬ ಅಭಿಪ್ರಾಯವಿದೆ. ಆದರೆ ವಿರಾಟ್‌ ಕೊಹ್ಲಿ ಮಾತ್ರ ಆ ಕಲ್ಪನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದು ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯವಾಗಿದೆ.

“ಈ ವಯಸ್ಸಿನಲ್ಲಿ ಅವರು ಸ್ವಲ್ಪ ಶಾಂತವಾಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಇನ್ನೂ ಅವರು ಕ್ಯಾಚ್‌ಗಳನ್ನು ಪಡೆಯುತ್ತಾರೆ, ರನ್‌ಔಟ್‌ಗಳನ್ನು ಮಾಡುತ್ತಾರೆ, ಮೈದಾನದಲ್ಲಿ ಅಪಾರ ಶಕ್ತಿಯೊಂದಿಗೆ ಕಾಣಿಸುತ್ತಾರೆ,” ಎಂದು ಕ್ರಿಕೆಟ್‌ ನಿರೂಪಕ ಹೇಳಿದ್ದಾರೆ.