ನವದೆಹಲಿ: ಪ್ರಸ್ತುತ ಸಾಗುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ಅತ್ಯಂತ ಕುತೂಹಲ ಹಂತಕ್ಕೆ ಬಂದು ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದು, ಮೇ 26 ರಂದು ನಾಕ್‌ಔಟ್ ಹಂತದ ಪಂದ್ಯಗಳು ಆರಂಭವಾಗಲಿವೆ. ಪ್ರಶಸ್ತಿ ಗೆಲುವಿಗಾಗಿ ಈ ನಾಲ್ಕು ತಂಡಗಳ ನಡುವೆ ಪೈಪೋಟಿ ತೀವ್ರವಾಗಿವೆ. ಆದರೆ, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು (RCB vs GT) ಅಲಂಕರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ. ಏಕೆಂದರೆ ಮೊದಲನೇ ಕ್ವಾಲಿಫೈಯರ್‌ನಲ್ಲಿ ಸೋತರೂ ಫೈನಲ್‌ಗೆ ಪ್ರವೇಶಿಸಲು ಮತ್ತೊಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿದೆ.
ಮಂಗಳವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಪ್ರವೇಶ ಮಾಡಲಿದೆ. ಮೇ 27 ರಂದು ಚಂಡೀಗಢದ ಮುಲ್ಲಾನ್‌ಪುರದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 3 ಮತ್ತು 4 ನೇ ಸ್ಥಾನವನ್ನು ಪಡೆದಿರುವ ತಂಡಗಳಾದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ.
RCB vs GT ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ಆರ್‌ಸಿಬಿ, ಜಿಟಿಗೆ ಪ್ರಶಸ್ತಿ ಗೆಲ್ಲಲು ಶೇ 93.3ರಷ್ಟು ಅವಕಾಶ
ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲಲು ಆರ್‌ಸಿಬಿ ಹಾಗೂ ಜಿಟಿ ತಂಡಗಳಿಗೆ ಶೇಕಡಾ 93.2ರಷ್ಟು ಅವಕಾಶವಿದೆ, ಆದರೆ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಕೇವಲ 6.66ರಷ್ಟು ಮಾತ್ರ ಅವಕಾಶವಿದೆ. ಪ್ಲೇಆಫ್ಸ್ ಅನ್ನು ಪರಿಚಯಿಸಿದ 2011 ರಿಂದ ನಡೆದಿದ್ದ 15 ಆವೃತ್ತಿಗಳ ಪೈಕಿ 14 ಋತುಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿ ಮೊದಲ ಕ್ವಾಲಿಫೈಯರ್ ಆಡುವ ತಂಡಗಳೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಆದರೆ, 2016ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದು ಎಲಿಮಿನೇಟರ್ ಆಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಆರ್‌ಸಿಬಿಯನ್ನು ಮಣಿಸಿ ಎಸ್‌ಆರ್‌ಎಚ್ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
2011ರಿಂದ ಇಲ್ಲಿಯವರೆಗೂ ಮೊದಲನೇ ಕ್ವಾಲಿಫೈಯರ್ ಮೂಲಕ ಚಾಂಪಿಯನ್ ಆದ ತಂಡಗಳು
2011ರಿಂದ ಮೊದಲನೇ ಕ್ವಾಲಿಫೈಯರ್ ತಂಡಗಳು, ಎಲಿಮಿನೇಟರ್ ಆಡಿದ ತಂಡಗಳು, ಪ್ರಶಸ್ತಿ ಗೆದ್ದ ತಂಡ
| ವರ್ಷ | ಮೊದಲನೇ ಕ್ವಾಲಿಫೈಯರ್ ಆಡಿದ ತಂಡಗಳು (ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ | ಎಲಿಮಿನೇಟರ್ ಪಂದ್ಯವಾಡಿದ ತಂಡಗಳು (ಅಂಕಪಟ್ಟಿಯಲ್ಲಿ 3, 4ನೇ ಸ್ಥಾನದ ತಂಡಗಳು) | ಫೈನಲ್‌ಗೇರಿದ ತಂಡಗಳು | ವಿಜೇತ ತಂಡಗಳು |
|---|---|---|---|---|
| 2011 | RCB VS CSK | MI VS KKR | CSK VS RCB | CSK |
| 2012 | DD VS KKR | MI VS CSK | KKR VS CSK | KKR |
| 2013 | MI VS CSK | RR VS SRH | CSK vs MI | MI |
| 2014 | PBKS VS KKR | CSK VS MI | KKR VS PBKS | KKR |
| 2015 | CSK VS MI | RCB VS RR | MI VS CSK | MI |
| 2016 | GL VS RCB | SRH VS KKR | RCB VS SRH | SRH |
| 2017 | MI VS RPSG | KKR VS SRH | RPSG VS MI | MI |
| 2018 | SRH VS CSK | RR VS KKR | CSK VS SRH | CSK |
| 2019 | MI VS CSK | SRH VS DC | MI VS CSK | MI |
| 2020 | MI VS DC | RCB VS SRH | MI VS DC | MI |
| 2021 | DC VS CSK | RCB vs KKR | CSK VS KKR | CSK |
| 2022 | GT VS RR | RCB VS LSG | GT VS RR | GT |
| 2023 | GT VS CSK | LSG VS MI | GT VS CSK | CSK |
| 2024 | KKR VS SRH | RR VS RCB | KKR VS SRH | KKR |
| 2025 | PBKS VS RCB | GT VS MI | RCB VS PBKS | RCB |
| 2026 | RCB VS GT | SRH VS RR | TBD | TBD |
ಕಳೆದ 15 ಸೀಸನ್‌ಗಳ ಪೈಕಿ 12ರ ಋತುಗಳಲ್ಲಿ ಮೊದಲನೇ ಕ್ವಾಲಿಫೈಯರ್ ಆಡಿದ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಿವೆ. ಡೆಲ್ಲಿ ಡೇರ್ ಡೆವಿಲ್ಸ್/ಡೆಲ್ಲಿ ಕ್ಯಾಪಿಟಲ್ಸ್ (2012 ಮತ್ತ 2021) ಮತ್ತು ಗುಜರಾತ್ ಲಯನ್ಸ್ ಮಾತ್ರ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದರೂ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದ ಎರಡು ತಂಡಗಳಾಗಿವೆ. 2013 ಮತ್ತು 2017ರಲ್ಲಿ ಮುಬೈ ಇಂಡಿಯನ್ಸ್ ಹಾಗೂ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹೊರತುಪಡಿಸಿ ಈ 15 ಸೀಸನ್‌ಗಳಲ್ಲಿ 12ರಲ್ಲಿ ಮೊದಲನೇ ಕ್ವಾಲಿಫೈಯರ್ ಗೆದ್ದ ತಂಡಗಳೇ ಚಾಂಪಿಯನ್ ಆಗಿವೆ.