ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಅಧಿಕ ಪ್ರಸಂಗ ತೋರಿದ ಆವೇಶ್‌ ಖಾನ್‌ಗೆ ಬುದ್ದಿ ಕಲಿಸುತ್ತಾ ಬಿಸಿಸಿಐ? ಇಲ್ಲಿದೆ ವಿಡಿಯೊ

ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳ ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ವೇಗಿ ಆವೇಶ್‌ ಖಾನ್‌ ಅಧಿಕ ಪ್ರಸಂಗತನ ತೋರಿದ್ದಾರೆ. ಈ ಕಾರಣದಿಂದಾಗಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಬಿಸಿಸಿಐ ಇದಕ್ಕೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆಯೇ ಎಂದು ಕಾದು ನೋಡಬೇಕಾಗಿದೆ.

ತೊಂದರೆಗೆ ಸಿಲುಕಿದ ಆವೇಶ ಖಾನ್‌.

ಹೈದರಾಬಾದ್‌: ಲಖನೌ ಸೂಪರ್‌ ಜಯಂಟ್ಸ್‌ ತಂಡದ ವೇಗದ ಬೌಲರ್‌ ಆವೇಶ್‌ ಖಾನ್‌ (Avesh Khan) ಅವರು ಅಶಿಸ್ತು ತೋರಿದ ಕಾರಣದಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ಏಪ್ರಿಲ್‌ 5 ರಂದು ಭಾನುವಾರ‌ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮೊದಲ ಹೆಡರ್‌ ಪಂದ್ಯದಲ್ಲಿ (LSG vs SRH) ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ ತಂಡ ಗೆಲುವು ಪಡೆದ ಬೆನ್ನಲ್ಲೆ ಆವೇಶ್‌ ಖಾನ್‌ ಅವರಿಂದ ವಿವಾದಾತ್ಮಕ ಘಟನೆ ನಡೆಯಿತು. ಇದು ಎಸ್‌ಆರ್‌ಚ್‌ ತಂಡದ ಅಸಮಾಧಾನಕ್ಕೂ ಕಾರಣವಾಗಿರಬಹುದು.

157 ರನ್‌ಗಳನ್ನು ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಪಂದ್ಯವನ್ನು ಗೆಲ್ಲಲು ಕೊನೆಯ ಓವರ್‌ನಲ್ಲಿ 9 ರನ್‌ಗಳ ಅಗತ್ಯವಿತ್ತು. ನಾಯಕ ರಿಷಭ್‌ ಪಂತ್‌ ಎರಡು ಬೌಂಡರಿಗಳನ್ನು ಹೊಡೆದು ಮೊತ್ತವನ್ನು ಸರಿದೂಗಿಸಿದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಒಂದು ರನ್‌ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ನಾಯಕ ರಿಷಭ್‌ ಪಂತ್‌ ಲಾಂಗ್‌ ಆನ್‌ ಮೇಲೆ ಬೌಂಡರಿ ಬಾರಿಸಿದರು. ಚೆಂಡು ಬೌಂಡರಿ ಲೈನ್‌ ದಾಟುವುದಕ್ಕೂ ಮುನ್ನ ಗೆರೆ ಬಳಿ ನಿಂತಿದ್ದ ಆವೇಶ್‌ ಖಾನ್‌ ತಮ್ಮ ಬ್ಯಾಟ್‌ನಿಂದ ಚೆಂಡನ್ನು ಹೊಡೆದರು.

IPL 2026: ʻನಾನಿನ್ನೂ ಆಡಬೇಕಾಗಿತ್ತುʼ-ಐಪಿಎಲ್‌ ನಿವೃತ್ತಿಗೆ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಈ ವೇಳೆ ಬೌಂಡರಿ ಲೈನ್‌ ಬಳಿ ಯಾವುದೇ ಫೀಲ್ಡರ್‌ ಇರಲಿಲ್ಲ. ಇದನ್ನು ಅರಿತುಕೊಂಡು ಆವೇಶ್‌ ಖಾನ್‌ ಗೆಲುವಿನ ಸಂಭ್ರಮದಲ್ಲಿ ತಮ್ಮ ಬ್ಯಾಟ್‌ನಿಂದ ಚೆಂಡನ್ನು ಹೊಡೆದರು. ಈ ಘಟನೆ ವಿವಾದವನ್ನು ಹುಟ್ಟು ಹಾಕಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸಾಮಾನ್ಯವಾಗಿ, ಫೀಲ್ಡಿಂಗ್ ಇಲೆವೆನ್‌ನಲ್ಲಿ ಇಲ್ಲದ ಆಟಗಾರರು ಆಟದ ಮೈದಾನದಲ್ಲಿ ಪ್ರವೇಶಿಸಬಾರದು ಅಥವಾ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು ಎಂಬುದು ನಿಮಯ. ಆದರೆ, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಅವರು ಮೈದಾನಕ್ಕೆ ಪ್ರವೇಶ ಮಾಡಬಹುದು. ಉದಾಹರಣೆಗೆ ಟೈಮ್-ಔಟ್‌ಗಳು, ವೈದ್ಯಕೀಯ ಸಹಾಯ ಅಥವಾ ಕ್ರಿಕೆಟ್‌ ಸಂಬಂಧಿತ ಸಾಮಗ್ರಿಗಳ ಬದಲಾವಣೆ ಸಂದರ್ಭದಲ್ಲಿ ಮಾತ್ರ ಇದಕ್ಕೆ ಅವಕಾಶವಿದೆ.



ಎಸ್‌ಆರ್‌ಎಚ್‌ ಪಂದ್ಯದಲ್ಲಿ 2 ವಿಕೆಟ್‌ ಕಿತ್ತ ಆವೇಶ್‌ ಖಾನ್‌

ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಆವೇಶ್‌ ಖಾನ್‌ ದುಬಾರಿ ಆಗಿದ್ದರೂ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅವರು ಮೊದಲ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಹೆನ್ರಿಕ್‌ ಕ್ಲಾಸೆನ್‌ ಮತ್ತು ಹರ್ಷ್‌ ದುಬೇ ಅವರನ್ನು ಔಟ್‌ ಮಾಡಿದ್ದರು. ಅವರು 36 ರನ್‌ಗಳೊಂದಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿ ತಮ್ಮ ಬೌಲಿಂಗ್‌ ಸ್ಪೆಲ್‌ ಮುಗಿಸಿದ್ದರು.

Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ

ಬಿಸಿಸಿಐಗೆ ದೂರು ನೀಡುತ್ತಾ ಎಸ್‌ಆರ್‌ಎಚ್‌?

ಕ್ರಿಕ್‌ಬಝ್‌ ವರದಿಯ ಪ್ರಕಾರ ಸನ್‌ರೈಸರ್ಸ್‌ ಹೈದರಾಬಾದ್‌, ಈ ಸೀಸನ್‌ನಲ್ಲಿ ತಮ್ಮ ವಿರುದ್ಧ ಹೋಗಿರುವ ಹಲವು ಅಂಪೈರ್‌ ತೀರ್ಪುಗಳಿಂದ ಅಸಮಾಧಾನಗೊಂಡಿದೆ. ಇದರಲ್ಲಿ ಆವೇಶ್‌ ಖಾನ್‌ ಸಂಬಂಧಿತ ಘಟನೆ ಕೂಡ ಒಂದಾಗಿದೆ. ಇದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ತನ್ನ ಮೊದಲನೇ ಪಂದ್ಯದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಅವರಿಗೆ ನೀಡಿದ್ದ ಕ್ಯಾಚ್‌ ಔಟ್‌ ಬಗ್ಗೆಯೂ ಹೈದರಾಬಾದ್‌ ಫ್ರಾಂಚೈಸಿ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲಿ ಅವರು ಫಿಲ್‌ ಸಾಲ್ಟ್‌ಗೆ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಟ್ಟು ಔಟ್‌ ಆಗಿದ್ದರು. ನಂತರದ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಅವರ ಔಟ್‌ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿತ್ತು.