ನವದೆಹಲಿ: ತಾವು ಕಟ್ಟಿ ಬೆಳೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 16,500 ಕೋಟಿ ರು.ಗಳಿಗೆ ಮಾರಾಟವಾದ ಬಳಿಕ ಮಾಜಿ ಓನರ್ ವಿಜಯ್ ಮಲ್ಯ (Vijay Malya) ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ತಾವು ಈ ತಂಡಕ್ಕೆ ಹೂಡಿಕೆ ಮಾಡಿದ್ದ ಆರಂಭಿಕ ದಿನಗಳಲ್ಲಿ ಟೀಕಿಸಿದ್ದವರಿಗೆ ತಿರುಗೇಟು ನೀಡಿದ್ದಾರೆ. ಮಾರ್ಚ್ 24 ರಂದು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಹಾಗೂ ಬೋಲ್ಡ್ ವೆನ್ಚರ್ಸ್ ಒಕ್ಕೂಟ ಖರೀದಿಸಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆರ್‌ಸಿಬಿ ಹೊಸ ಮಾಲೀಕರ ಅಡಿಯಲ್ಲಿ ಕಣಕ್ಕೆ ಇಳಿಯಲಿದೆ.
2008ರಲ್ಲಿ ಆರ್‌ಸಿಬಿ ತಂಡವನ್ನು 450 ಕೋಟಿ ರು.ಗಳಿಗೆ ಖರೀದಿಸಿದ್ದ ವಿಷಯವನ್ನು ವಿಜಯ ಮಲ್ಯ ಇದೀಗ ರಿವೀಲ್ ಮಾಡಿದ್ದು, ಕ್ರಿಕೆಟ್ ತಂಡವೊಂದಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ದಕ್ಕೆ ಹಲವರು ನನ್ನ ನಿರ್ಧಾರವನ್ನು ಟೀಕಿಸಿದ್ದರು ಹಾಗೂ ಇದನ್ನು ವ್ಯಾನಿಟಿ ಯೋಜನೆ ಎಂದು ವ್ಯಂಗ್ಯವಾಡಿದ್ದರು. ಆದರೆ, ಈಗ ಬೆಂಗಳೂರು ಫ್ರಾಂಚೈಸಿ ಮೌಲ್ಯ 37 ಪಟ್ಟು ಏರಿಕೆಯಾಗಿರುವುದನ್ನು ನೋಡುವುದು ಹುಚ್ಚುತನದಿಂದ ಕೂಡಿದೆ ಎಂದಿದ್ದಾರೆ.
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾಗುತ್ತಾ? ಸುಳಿವು ನೀಡಿದ ಹೊಸ ಮಾಲೀಕರು!
“ಆರ್‌ಸಿಬಿಯ ಹೊಸ ಮಾಲೀಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದ ಅವರಿಗೆ ನನ್ನ ಕಡೆಯಿಂದ ಶುಭಾಶಯಗಳು ಮತ್ತು ದೇವರ ಕೃಪೆ ಇರಲಿ. ನಾನು 2008ರಲ್ಲಿ ಈ ಫ್ರಾಂಚೈಸಿಯನ್ನು 450 ಕೋಟಿ ರು. ಗಳಿಗೆ ಖರೀದಿಸಿದಾಗ, ಬಹುತೇಕ ಜನರು ನನ್ನನ್ನು ನೋಡಿ ನಕ್ಕರು ಮತ್ತು ಇದನ್ನು ಕೇವಲ ದರ್ಪದ ಯೋಜನೆ (vanity project) ಎಂದು ಟೀಕಿಸಿದ್ದರು. ನನ್ನ ಬಗ್ಗೆ ‘ಹುಚ್ಚುತನ’ ಎಂದು ಹೇಳಲಾಗುತ್ತಿದ್ದ ಆ ನಿರ್ಧಾರಗಳ ಹಿಂದೆ ‘ರಾಯಲ್ ಚಾಲೆಂಜ್’ ಬ್ರ್ಯಾಂಡ್ ಅನ್ನು ನಿರ್ಮಿಸುವ ಉದ್ದೇಶವಿತ್ತು. ಅದಕ್ಕಾಗಿ ನಾನು ಈ ತಂಡಕ್ಕೆ ಆರ್‌ಸಿಬಿ ಎಂಬ ಹೆಸರಿಟ್ಟೆ,” ಎಂದು ವಿಜಯ್ ಮಲ್ಯ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
“ನಾನು 450 ಕೋಟಿ ರು ಹೂಡಿಕೆ ಮಾಡಿದ ಮೊತ್ತ 16,500 ಕೋಟಿಯಾಗಿರುವುದನ್ನು ನೋಡುವುದು ಅಪಾರ ತೃಪ್ತಿಯನ್ನು ನೀಡುತ್ತದೆ. ಅಳಿಸಲಾಗದ ನೆನಪುಗಳೊಂದಿಗೆ ಆರ್‌ಸಿಬಿ ನನ್ನ ಡಿಎನ್‌ಎಯ ಒಂದು ಭಾಗವಾಗಿಯೇ ಸದಾ ಉಳಿಯುತ್ತದೆ, ಇದಲ್ಲದೆ ಇಂದಿಗೆ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬನಾಗಿರುವ ಯುವ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ ಕ್ಷಣವೂ ಸೇರಿದೆ. ನನ್ನ ನಿರ್ವಹಣಾ ಅವಧಿಯಲ್ಲಿ ಹಾಗೂ ಅದರ ನಂತರ ಆರ್‌ಸಿಬಿಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಗೆ ಇದೇ ರೀತಿ ಬೆಂಬಲವನ್ನು ನೀಡುತ್ತೀರಿ, ನಮಸ್ಕಾರ," ಎಂದು ವಿಜಯ್ ಮಲಯ ತಿಳಿಸಿದ್ದಾರೆ.
ಆರ್‌ಸಿಬಿ ಫ್ರಾಂಚೈಸಿಗಾಗಿ ಜಯಶೀಲ ಬಿಡ್ ಅನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದಲ್ಲಿ ಸಲ್ಲಿಸಿತು. ಈ ಗುಂಪಿನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರ ನೇತೃತ್ವದಲ್ಲಿ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಜೊತೆಗೆ ಸಹಭಾಗಿತ್ವದಲ್ಲಿ ಈ ಬಿಡ್ ಮಾಡಲಾಗಿದೆ. ಈ ಕನ್ಸೋರ್ಟಿಯಂನಲ್ಲಿ ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ನೇತೃತ್ವದ ಬೋಲ್ಟ್ ವೆಂಚರ್ಸ್ ಕೂಡ ಸೇರಿದೆ. ಜೊತೆಗೆ ಜಾಗತಿಕ ಖಾಸಗಿ ಇಕ್ವಿಟಿ ದಿಗ್ಗಜ ಬ್ಲ್ಯಾಕ್‌ಸ್ಟೋನ್ ಇಂಕ್ ಕೂಡ ಈ ಒಕ್ಕೂಟದ ಭಾಗವಾಗಿದೆ.
IPL 2026: ʻವಿರಾಟ್ ಕೊಹ್ಲಿಯನ್ನು ನೋಡಿ ಕಲಿಯಿರಿʼ-ಅಜಿಂಕ್ಯ ರಹಾನೆಗೆ ಮೊಹಮ್ಮದ್ ಕೈಫ್ ಪಾಠ!
ಈ ಸ್ವಾಧೀನವು ಐಪಿಎಲ್ ಇತಿಹಾಸದಲ್ಲೇ ಮಹತ್ವದ “ಡಬಲ್ ಹೆಡರ್” ದಿನದ ಭಾಗವಾಗಿತ್ತು. ಅದೇ ದಿನ ರಾಜಸ್ತಾನ್ ರಾಯಲ್ಸ್ ತಂಡವನ್ನೂ 1.63 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. ಈ ವ್ಯವಹಾರವನ್ನು ಅಮೆರಿಕಾದ ಉದ್ಯಮಿ ಕಲ್ ಸೊಮಾನಿ ಅವರ ನೇತೃತ್ವದ ಕನ್ಸೋರ್ಟಿಯಂ ಮುನ್ನಡೆಸಿದ್ದು, ವಾಲ್ಟನ್ ಕುಟುಂಬ ಮತ್ತು ಫೋರ್ಡ್ ಕುಟುಂಬಗಳ ಬೆಂಬಲ ಇದಕ್ಕೆ ಇದೆ ಎಂದು ವರದಿಯಾಗಿದೆ.