ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವೇಗಿ ಮುಖೇಶ್ ಚೌಧರಿ (Mukesh ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 33ನೇ ಪಂದ್ಯದಲ್ಲಿ ಆಡುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾದರು. ಮುಖೇಶ್ ಚೌಧರಿ ಅವರು ತಾಯಿ ಕೆಲವೇ ದಿನಗಳ ಹಿಂದೆ ನಿಧನರಾಗಿದ್ದರು. 29ರ ವಯಸ್ಸಿನ ವೇಗಿ ತನ್ನ ತಾಯಿಯನ್ನು ಕಳೆದುಕೊಂಡ ದುಃಖವನ್ನು ಹೃದಯದ ಆಳದಲ್ಲಿ ಹೊತ್ತುಕೊಂಡು ಅಂಗಣಕ್ಕೆ ಕಾಲಿಟ್ಟರು. ಎಡಗೈ ವೇಗಿ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (7) ಅವರನ್ನು ತಮ್ಮ ಮೊದಲ ಓವರ್‌ನಲ್ಲಿಯೇ ಕ್ಲೀನ್ ಬೌಲ್ಡ್ ಮಾಡಿ ತಮ್ಮ ತಾಯಿಗೆ ಗೌರವ ಸಲ್ಲಿಸಿದರು.
ಮುಖೇಶ್ ಚೌಧರಿ ಅವರ ತಾಯಿ ಪ್ರೇಮ್ ದೇವಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಮುಖೇಶ್ ತಮ್ಮ ಕುಟುಂಬದೊಂದಿಗೆ ಇರಲು ರಾಜಸ್ಥಾನದ ಭಿಲ್ವಾರಕ್ಕೆ ಮರಳಿದ್ದರು. ಅವರು ಸಿಎಸ್‌ಕೆ ತಂಡಕ್ಕೆ ಸೇರುವ ಮುನ್ನ ತಮ್ಮ ಅಣ್ಣನೊಂದಿಗೆ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
CSK vs MI: ಸೆಂಚುರಿ ಬಾರಿಸಿ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್!
ಮುಖೇಶ್ ಚೌಧರಿ ತಾಯಿಗೆ ಸಿಎಸ್‌ಕೆ ಗೌರವ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರು ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಬಂದರು. ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದ ಸಿಎಸ್‌ಕೆ ವೇಗದ ಬೌಲರ್ ಮುಖೇಶ್ ಚೌಧರಿ ಅವರ ತಾಯಿಗೆ ಗೌರವ ಸಲ್ಲಿಸಲು ಈ ರೀತಿ ಮಾಡಲಾಯಿತು.
ಪಂದ್ಯಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ ಸಿಎಸ್‌ಕೆ, "ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಸಿಎಸ್‌ಕೆ ಕುಟುಂಬವು ಸಂತಾಪ ಸೂಚಿಸುತ್ತಿದೆ. ಈ ಕಷ್ಟದ ಸಮಯದಲ್ಲಿ ನಾವು ಮುಖೇಶ್ ಮತ್ತು ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಮತ್ತು ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ," ಎಂದು ತಿಳಿಸಿದೆ.
ಎರಡನೇ ಶತಕ ಬಾರಿಸಿದ ಸಂಜು ಸ್ಯಾಮ್ಸನ್
ಪಂದ್ಯದ ಬಗ್ಗೆ ಹೇಳುವುದಾದರೆ, ಸಂಜು ಸ್ಯಾಮ್ಸನ್ (101*) ಅವರ ಏಳನೇ ಐಪಿಎಲ್ ಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 207 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು 208 ರನ್‌ಗಳ ಗುರಿಯನ್ನು ನೀಡಿತು. ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಅವರ ಎರಡನೇ ಶತಕ ಇದಾಗಿದೆ.