ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼನನ್ನನ್ನು ಹುಚ್ಚ ಎಂದಿದ್ರು, ನಾನು ತಲೆ ಕೆಡಿಸಿಕೊಳ್ಳಲಿಲ್ಲʼ: ಕಷ್ಟದ ದಿನಗಳನ್ನು ನೆನೆದ ಮುಕುಲ್‌ ಚೌಧರಿ ತಂದೆ!

ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಲಖನೌ ಸೂಪರ್‌ ಜಯಂಟ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮುಕುಲ್‌ ಚೌಧರಿ ಬಗ್ಗೆ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಮುಕುಲ್‌ ತಂದೆ ದಿಲೀಪ್‌ ಚೌಧರಿ ಅವರು ತಮ್ಮ ಪುತ್ರನ ಕನಸು ನನಸು ಮಾಡುವ ಹಾದಿಯಲ್ಲಿ ಅನುಭವಿಸಿದ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದಾರೆ.

ಸಾಲ ಕಟ್ಟಲಾಗದೆ ಜೈಲು ಸೇರಿದ್ದ ಮುಕುಲ್‌ ಚೌಧರಿ ತಂದೆ.

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಮುಕುಲ್‌ ಚೌಧರಿ (Mukul Choudhary) ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಬಳಿಕ ಮುಕುಲ್‌ ಚೌಧರಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವರ ಐಪಿಎಲ್‌ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಅವರು ಸಾಕಷ್ಟು ಕಠಿಣ ಪರಿಶ್ರಮ ಪಟ್ಟು ಇಲ್ಲಿಗೆ ಬಂದಿದ್ದಾರೆ. ತಮ್ಮ ಪುತ್ರನ ಕನಸು ನನಸು ಮಾಡಲು ತಂದೆ ದಿಲೀಪ್‌ ಚೌಧರಿ ಕೂಡ ಶ್ರಮಿಸಿದ್ದಾರೆ. ಈ ಬಗ್ಗೆ ಸ್ವತಃ ತಂದೆ ದಿಲೀಪ್‌ ಪ್ರತಿಕ್ರಿಯೆ ನೀಡಿದ್ದಾರೆ.

ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ ದಿಲೀಪ್‌ ಚೌಧರಿ, ತನ್ನ ಮಗ ಮುಕುಲ್‌ ಕ್ರಿಕೆಟರ್‌ ಆಗಬೇಕು ಹಾಗೂ ಇದಕ್ಕಾಗಿ ನಾನು ಏನೇ ತ್ಯಾಗ ಮಾಡಲು ಸಿದ್ದನಿದ್ದೆ. ತನ್ನ ಮಗನ ಕನಸಿಗಾಗಿ ಮನೆಯನ್ನೇ ಮಾರಿದ್ದೆ ಹಾಗೂ ಸಾಲವನ್ನು ಪಡೆದಿದ್ದೆ. ಇದರಲ್ಲಿ ಒಮ್ಮೆ ತಾವು ಜೈಲಿಗೂ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮುಕುಲ್‌ ಬರೋಬ್ಬರಿ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಮೂಲಕ ರಿಷಭ್‌ ಪಂತ್‌ ಪಡೆಯ ಗೆಲುವಿಗೆ ನೆರವು ನೀಡಿದ್ದರು.

RR vs RCB: ಇಂದಿನ ಆರ್‌ಸಿಬಿ vs ರಾಜಸ್ಥಾನ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಮಗ ಹುಟ್ಟಿದಾಗಲೇ ಕ್ರಿಕೆಟರ್‌ ಆಗಬೇಕೆಂದು ಬಯಸಿದ್ದೆ: ದಿಲೀಪ್‌

"2003ರಲ್ಲಿ ನಾನು ಪದವಿ ಪಡೆದಿದ್ದೆ ಹಾಗೂ ಅದೇ ವರ್ಷ ನಾನು ಮದುವೆಯಾಗಿದ್ದೆ. ನನಗೆ ಏನಾದರೂ ಮಗ ಹುಟ್ಟಿದರೆ, ಅವನನ್ನು ದೊಡ್ಡ ಕ್ರಿಕೆಟರ್‌ ಮಾಡಬೇಕೆಂದು ಕನಸು ಕಂಡಿದ್ದೆ. ಇದರ ಮುಂದಿನ ವರ್ಷ ನನಗೆ ಮಗ ಹುಟ್ಟಿದ ಹಾಗೂ ಮಗ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಕ್ರಿಕೆಟರ್‌ ಮಾಡಬೇಕೆಂದು ಕನಸು ಕಂಡಿದ್ದೆ. ನನ್ನ ಮಗನನ್ನು ಏನಾದರೂ ಮಾಡಿ ಕ್ರಿಕೆಟರ್‌ ಮಾಡಬೇಕೆಂದು ಅಂದೇ ನಿರ್ಧರಿಸಿದ್ದೆ. ಸಾಕಷ್ಟು ಜನರು ತಮ್ಮ-ತಮ್ಮ ಮಕ್ಕಳನ್ನು ಕ್ರಿಕೆಟರ್‌ ಮಾಡಿದ್ದಾರೆ, ನನ್ನ ಮಗನನ್ನು ಮಾಡಲು ಸಾಧ್ಯವಿಲ್ಲವೇ?" ಎಂದು ದಿಲೀಪ್‌ ಚೌಧರಿ ತಮಗೇ ತಾವೇ ಪ್ರಶ್ನೆ ಹಾಕಕೊಂಡಿದ್ದಾರೆ.

ತಮ್ಮ ವೃತ್ತಿ ಜೀವನವನ್ನು ಉತ್ತಮ ಪಡಿಸಿಕೊಳ್ಳಲು ಹಲವು ವರ್ಷಗಳ ಕಾಲ ಶ್ರಮಿಸಿದ್ದರು. ರಾಜಸ್ಥಾನದಲ್ಲಿ ಸರ್ಕಾರಿ ಹುದ್ದೆಯನ್ನು ಪಡೆಯುವ ಸಲುವಾಗಿ ದಿಲೀಪ್‌ ಆರು ವರ್ಷಗಳ ಕಾಲ ತಯಾರಿ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ. ನಂತರ ಅವರು ರಿಯಲ್‌ ಎಸ್ಟೇಟ್‌ ಕೆಲಸವನ್ನು ಶುರು ಮಾಡಿದ್ದರು. ಆದರೂ ತಮ್ಮ ಪುತ್ರನ ಕ್ರಿಕೆಟ್‌ ಖರ್ಚುಗಳನ್ನು ಭರಿಸಲು ಸಾಧ್ಯವಾಗಿರಲಿಲ್ಲ.

Who is Mukul Choudhary?: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸುವ ಮುಕುಲ್ ಚೌಧರಿ ಯಾರು?

2016ರಲ್ಲಿ ತಂದೆ ಮತ್ತು ಮಗ ತಮ್ಮ ಮನೆಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಎಸ್‌ಬಿಎಸ್‌ ಕ್ರಿಕೆಟ್‌ ಹಬ್‌ಗೆ ತೆರಳಿದ್ದರು. ಇಲ್ಲಿ ಮುಕುಲ್ ಅವರ ಕ್ರಿಕೆಟ್ ತರಬೇತಿ ಅಧಿಕೃತವಾಗಿ ಆರಂಭವಾಗಿತ್ತು. ಈ ಬಗ್ಗೆಯೂ ಅವರು ಇಲ್ಲಿ ಹೇಳಿಕೊಂಡಿದ್ದಾರೆ.

"ತನ್ನ ಮಗನನ್ನು ಕ್ರಿಕೆಟ್‌ ಅಕಾಡೆಮಿಗೆ ರಿಜಿಸ್ಟರ್‌ ಮಾಡಿದ ಬಳಿಕ, ನನ್ನ ಬಳಿ ಇರುವ ಹಣ ಸಾಕಾಗುವುದಿಲ್ಲ ಎಂಬುದು ಮನದಟ್ಟಾಯಿತು. ಆಗ ನಾನು ನಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ, ಏಕೆಂದರೆ ನನಗೆ ನಿಯಮಿತವಾಗಿ ಆದಾಯ ಬರುತ್ತಿರಲಿಲ್ಲ. ಮನೆ ಮಾರಾಟ ಮಾಡಿದ ಬಳಿಕ ನನಗೆ 21 ಲಕ್ಷ ರು ಹಣ ದೊರೆಯಿತು. ಮನೆ ಖರೀದಿದಾರರಿಗೆ, ಸಂಪೂರ್ಣ ಹಣವನ್ನು ನನ್ನ ಖಾತೆಗೆ ಕಳುಹಿಸಿ ಎಂದು ಹೇಳಿದ್ದೆ, ಏಕೆಂದರೆ ಇದರ ಸಂಪೂರ್ಣ ದಾಖಲೆ ನನಗೆ ಅಗತ್ಯವಿತ್ತು. ಮುಂದಿನ ವರ್ಷ ನಾನು ಹೋಟೆಲ್‌ ಆರಂಭಿಸಿದೆ ಹಾಗೂ ಮತ್ತೊಂದು ಲೋನ್‌ ಕೂಡ ಪಡೆದುಕೊಂಡಿದ್ದೆ," ಎಂದು ಮುಕುಲ್‌ ತಂದೆ ತಿಳಿಸಿದ್ದಾರೆ.

LSG vs KKR: ಮುಕುಲ್‌ ಚೌಧರಿ ಫಿಫ್ಟಿ, ಕೋಲ್ಕತಾಗೆ ಮಣ್ಣು ಮುಕ್ಕಿಸಿದ ಲಖನೌ ಸೂಪರ್‌ ಜಯಂಟ್ಸ್‌!

ಜೈಲಿಗೂ ಹೋಗಿ ಬಂದಿದ್ದೇನೆ: ದಿಲೀಪ್‌ ಚೌಧರಿ

ʻಲೋನ್‌ಗೆ ಇಎಂಐ ಕಟ್ಟಲು ಕಷ್ಟವಾಗುತ್ತಿತ್ತು ಹಾಗೂ ನಿಗದಿತ ಸಮಯಕ್ಕೆ ಇಎಂಐ ಕಟ್ಟಲು ಸಾಧ್ಯವಾಗಿರಲಿಲ್ಲ. ಈ ವೇಳೆ ನಾನು ಜೈಲಿಗೂ ಹೋಗಿದ್ದೆ. ಆದರೆ, ನಾನು ಯಾವಾತ್ತೂ ಮೋಸ ಮಾಡಿಲ್ಲ. ಸಂಬಂಧಿಕರು ನನ್ನ ಕೈ ಬಿಟ್ಟರು. ಅವರು ನನ್ನನ್ನು ಹುಚ್ಚ ಎಂದಿದ್ದರು. ನಿನ್ನ ಜೀವನವನ್ನು ಹಾಳುಕೊಂಡಿರುವ ಜೊತೆಗೆ ನಿಮ್ಮ ಮಗನ ಜೀವನವನ್ನೂ ಹಾಳು ಮಾಡುತ್ತಿದ್ದೀಯಾ ಎಂದು ವ್ಯಂಗ್ಯವಾಡಿದ್ದರು. ಇದರಿಂದ ನನ್ನ ಕುಟುಂಬ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಾಯಿತು," ಎಂದು ಮುಕುಲ್‌ ಚೌಧರಿ ತಂದೆ ಹೇಳಿಕೊಂಡಿದ್ದಾರೆ.