ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಪಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 10 ಪಂದ್ಯಗಳಲ್ಲಿ 47.38ರ ಸರಾಸರಿಯಲ್ಲಿ 379 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಈ ಸೀಸನ್‌ನಲ್ಲಿಯೂ ಅವರು ಚೇಸಿಂಗ್‌ನಲ್ಲಿ ಬಹುತೇಕ ಮ್ಯಾಚ್ ವಿನ್ನಿಂಗ್ ಇನಿಂಗ್ಸ್‌ಗಳು ಮೂಡಿ ಬಂದಿವೆ. ಆದರೆ, ಮೇ 7 ರಂದು ಗುರುವಾರ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ಚೇಸಿಂಗ್‌ನಲ್ಲಿ ಕೊಹ್ಲಿ ಆಟ ನಡೆಯಲಿಲ್ಲ. ಯುವ ವೇಗಿ ಪ್ರಿನ್ಸ್ ಯಾದವ್ ತಮ್ಮ ಮಾರಕ ಎಸೆತದ ಮೂಲಕ ಕಿಂಗ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಶಾಕ್ ನೀಡಿದ್ದರು. ಕೇವಲ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಮಾತ್ರವಲ್ಲ ಸ್ವತಃ ವಿರಾಟ್ ಕೊಹ್ಲಿ ಕೂಡ ಅಚ್ಚರಿಗೆ ಒಳಗಾಗಿದ್ದರು.
ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರ ಭರ್ಜರಿ ಶತಕದ ಬಲದಿಂದ ಲಖನೌ ಸೂಪರ್ ಜಯಂಟ್ಸ್ ತಂಡ 9 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಡಿಎಲ್‌ಎಸ್ ನಿಯಮದ ಪ್ರಕಾರ 213 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ, ವಿರಾಟ್ ಕೊಹ್ಲಿ ವಿಕೆಟ್ ಅನ್ನು ಬೇಗ ಕಳೆದುಕೊಂಡರೂ ಕೊನೆಯವರೆಗೂ ತೀವ್ರ ಹೋರಾಟ ನಡೆಸಿತ್ತು. ಆದರೆ, ಅಂತಿಮವಾಗಿ ಕೇವಲ 9 ರನ್‌ಗಳಿಂದ ಸೋತಿತ್ತು. ಈ ಪಂದ್ಯದ ಬಳಿಕ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಕ್ರಿಕೆಟ್ ನಿರೂಪಕ ಮುರಳಿ ಕಾರ್ತಿಕ್ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
RCB vs LSG ಪಂದ್ಯದ ಕೊನೆಯ ಓವರ್ ದಿಗ್ವೇಶ್ ಸಿಂಗ್‌ಗೆ ನೀಡಲು ಕಾರಣ ತಿಳಿಸಿದ ರಿಷಭ್ ಪಂತ್!
ತಮ್ಮದೇ ಔಷಧಿಗೆ ಬಲಿಯಾದರು: ಮುರಳಿ ಕಾರ್ತಿಕ್
ಕ್ರಿಕ್‌ಬಝ್ ಜೊತೆ ಮಾತನಾಡಿದ ಮುರಳಿ ಕಾರ್ತಿಕ್, ವಿರಾಟ್ ಕೊಹ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಔಷಧಿಗೆ ಬಲಿಯಾಗಿದ್ದಾರೆ. ಅಂದರೆ ಈ ಹಿಂದೆ ಪ್ರಿನ್ಸ್ ಯಾದವ್‌ಗೆ ಆರ್‌ಸಿಬಿ ಮಾಜಿ ನಾಯಕ ಉಪಯುಕ್ತ ಸಲಹೆಯನ್ನು ನೀಡಿದ್ದರು. ಈ ಬಗ್ಗೆ ಎಲ್‌ಎಸ್‌ಜಿ ವೇಗಿ ಗುರುವಾರ ಪಂದ್ಯದ ಬಳಿಕ ರಿವೀಲ್ ಮಾಡಿದ್ದರು.
"ಕೊಹ್ಲಿ ತಮ್ಮದೇ ಔಷಧಿಯ ರುಚಿಯನ್ನು ನೋಡಿದ್ದಾರೆ. ಪ್ರಿನ್ಸ್ ಯಾದವ್ ಎಲ್ಲರನ್ನೂ ಅಚ್ಚರಿಪಡಿಸಿದ್ದರು. ಸ್ವತಃ ವಿರಾಟ್ ಕೊಹ್ಲಿಯೇ ಪಿಚ್ ಅನ್ನು ನೋಡುವ ಮೂಲಕ ಶಾಕ್ ಆಗಿದ್ದರು. ಚೆಂಡು ಕಡಿಮೆ ಪುಟಿದೆದ್ದಿಯಾ ಅಥವಾ ಇಲ್ಲವಾ? ಎಂಬ ಬಗ್ಗೆ ನಾನ್‌ಸ್ಟ್ರೈಟ್ ತುದಿಯಲ್ಲಿ ನಿಂತಿದ್ದ ಬ್ಯಾಟ್ಸ್‌ಮನ್‌ಗೆ ಕೊಹ್ಲಿ ಕೇಳುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ, ಚೆಂಡು ಕೊಹ್ಲಿ ಭಾವಿಸಿದಂತೆ ಬಂದಿರಲಿಲ್ಲ," ಎಂದು ಮುರಳಿ ಕಾರ್ತಿಕ್ ತಿಳಿಸಿದ್ದಾರೆ.
IPL 2026: ಕಳೆದ ಎರಡು ಪಂದ್ಯಗಳಲ್ಲಿ ಅವಕಾಶ ಸಿಗದ ಬಗ್ಗೆ ಡೇವಿಡ್ ಮಿಲ್ಲರ್ ಪ್ರತಿಕ್ರಿಯೆ!
ಲಖನೌ ಸೂಪರ್ ಜಯಂಟ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ 6 ಅಂಕಗಳ ಮೂಲಕ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಈ 10 ಪಂದ್ಯಗಳಲ್ಲಿ ತಂಡ ಕೇವಲ ಮೂರು ಗೆಲುವುಗಳನ್ನು ದಾಖಲಿಸಿದ್ದು, ಉಳಿದ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಪರಿಣಾಮ ಪ್ಲೇಆಫ್ಸ್‌ನಿಂದ ಬಹುತೇಕ ಹೊರಬಿದ್ದಿದೆ.
ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಎಲ್‌ಎಸ್‌ಜಿ ಸಮಾನ ಅಂಕಗಳನ್ನು ಹೊಂದಿದ್ದರೂ ಉತ್ತಮ ನೆಟ್ ರನ್‌ರೇಟ್‌ನ ಕಾರಣ ಮುಂಬೈ ತಂಡ ಒಂಬತ್ತನೇ ಸ್ಥಾನದಲ್ಲಿದೆ. ರಿಷಭ್ ಪಂತ್ ನೇತೃತ್ವದ ಲಖನೌ ತಂಡ, ಆರ್‌ಸಿಬಿ ವಿರುದ್ಧದ ಗೆಲುವಿನ ಬಳಿಕ ಅದೇ ಲಯವನ್ನು ಮುಂದುವರಿಸಿ ಮುಂದಿನ ಪಂದ್ಯದಲ್ಲೂ ಜಯ ಸಾಧಿಸುವ ವಿಶ್ವಾಸದಲ್ಲಿದೆ.