ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ರಿಯಾನ್‌ ಪರಾಗ್‌ ನಾಯಕತ್ವದಲ್ಲಿನ ದೌರ್ಬಲ್ಯವನ್ನು ರಿವೀಲ್‌ ಮಾಡಿದ ವೀರೇಂದ್ರ ಸೆಹ್ವಾಗ್!

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ಸೋಲು ಅನುಭವಿಸಿದ ಬಳಿಕ ನಾಯಕ ರಿಯಾನ್‌ ಪರಾಗ್‌ ಅವರನ್ನು ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಟೀಕಿಸಿದ್ದಾರೆ. ರಿಯಾನ್‌ ಪರಾಗ್‌ ನಾಯಕತ್ವದ ತಂತ್ರ ಹಾಗೂ ಬೌಲಿಂಗ್‌ ಬದಲಾವಣೆಯ ಬಗ್ಗೆ ಬೇಸ್‌ ವ್ಯಕ್ತಪಡಿಸಿದ್ದಾರೆ.

ರಿಯಾನ್‌ ಪರಾಗ್‌ ನಾಯಕತ್ವವನ್ನು ಟೀಕಿಸಿದ ಸೆಹ್ವಾಗ್‌.

ಜೈಪುರ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ಸೋಲು ಅನುಭವಿಸಿದ ಬಳಿಕ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ (Riyan Parag) ಅವರನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ (Virender Sehwag) ಟೀಕಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ ರಿಯಾನ್‌ ಪರಾಗ್‌ಗೆ ನಾಯಕತ್ವ ನೀಡಿರುವ ನಿರ್ಧಾರದ ಬಗ್ಗೆ ಮತ್ತೊಮ್ಮೆ ಚಿಂತಿಸಬೇಕಾದ ಅಗತ್ಯಿದೆ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ 228 ರನ್‌ಗಳ ಬೃಹತ್‌ ಗುರಿಯನ್ನು ನೀಡಿದ್ದರ ಹೊರತಾಗಿಯೂ ಎದುರಾಳಿ ಎಸ್‌ಆರ್‌ಎಚ್‌ ತಂಡವನ್ನು ಈ ಮೊತಕ್ಕೆ ಕಟ್ಟಿ ಹಾಕುವಲ್ಲಿ ಆರ್‌ಆರ್‌ ಬೌಲರ್‌ಗಳು ವಿಫಲರಾದರು. ಈ ಮೊತ್ತವನ್ನು ಹೈದರಾಬಾದ್‌ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಚೇಸ್‌ ಮಾಡಿ ಗೆದ್ದಿತ್ತು.

ತಮ್ಮ ತಂಡದ ಮುಂಚೂಣಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ರವಿ ಬಿಷ್ಣೋಯ್‌ ಅವರನ್ನು ಸರಿಯಾಗಿ ಬಳಿಸಿಕೊಳ್ಳುವಲ್ಲಿ ರಿಯಾನ್‌ ಪರಾಗ್‌ ವಿಫಲರಾದರು. ಅವರು ಈ ಇಬ್ಬರಿಗೂ ಕೇವಲ ಒಂದೊಂದು ಓವರ್‌ ಬೌಲ್‌ ಮಾಡಲು ನೀಡಿದ್ದರು. ಪರಾಗ್‌ ಅವರ ಈ ನಿರ್ಧಾರವನ್ನು ಮಾಜಿ ಆರಂಭಿಕ ಸೆಹ್ವಾಗ್‌ ಟೀಕಿಸಿದ್ದಾರೆ. ಅಲ್ಲದೆ ಆರ್‌ಆರ್‌ ನಾಯಕ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿರುವುದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

IPL 2026: ಮಂಡಿರಜ್ಜು ಗಾಯಕ್ಕೆ ತುತ್ತಾದ ವೈಭವ್ ಸೂರ್ಯವಂಶಿ; ರಾಜಸ್ಥಾನ್‌ಗೆ ಆತಂಕ!

ಪರಾಗ್‌ ನಾಯಕತ್ವದ ಬಗ್ಗೆ ವೀರು ಕಳವಳ

ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಿಯಾನ್‌ ಪರಾಗ್‌ ಅವರು ತಮ್ಮನ್ನು ಸೇರಿದಂತೆ ಒಟ್ಟು ಎಂಟು ಬೌಲರ್‌ಗಳನ್ನು ಬಳಸಿಕೊಂಡಿದ್ದರು. ದುಬಾರಿ ಮೊದಲ ಓವರ್‌ ಬಳಿಕ ರಾಜಸ್ಥಾನ್‌ ರಾಯಲ್ಸ್‌ ತಂಡ ತಮ್ಮ ಮುಂಚೂಣಿ ಸ್ಪಿನ್ನರ್‌ಗಳಿಗೆ ಮತ್ತೆ ಬೌಲರ್‌ ನೀಡಿರಲಿಲ್ಲ ಎಂದು ಸೆಹ್ವಾಗ್‌ ಹೇಳಿದ್ದಾರೆ. ತಮ್ಮ ಮೊದಲ ಓವರ್‌ನಲ್ಲಿ ಜಡೇಜಾ 11 ರನ್‌ ನೀಡಿದ್ದರೆ, ರವಿ ಬಿಷ್ಣೋಯ್‌ 16 ರನ್‌ಗಳನ್ನು ಕೊಟ್ಟಿದ್ದರು. ಈ ಇಬ್ಬರೂ ಸ್ಪಿನ್ನರ್‌ಗಳಿಗೆ ಮತ್ತೊಂದು ಓವರ್‌ ಅನ್ನು ನೀಡಬೇಕಾಗಿತ್ತು ಎಂದು ಸೆಹ್ವಾಗ್‌ ಅಭಿಪ್ರಾಯ ಪಟ್ಟಿದ್ದಾರೆ.

“ರವಿ ಬಿಷ್ಣೋಯ್‌ ಒಂದು ಓವರ್ ಮಾತ್ರ ಬೌಲ್‌ ಮಾಡಿದರು, ರವೀಂದ್ರ ಜಡೇಜಾ ಕೂಡ ಕೇವಲ ಒಂದು ಓವರ್ ಮಾತ್ರ ಬೌಲ್‌ ಮಾಡಿದ್ದರು. ಇವರಿಬ್ಬರೂ ಕೆಟ್ಟ ಬೌಲರ್‌ಗಳು ಅಲ್ಲ. ಮೊದಲ ಓವರ್ ನಂತರ ಅವರಿಗೆ ಮತ್ತೆ ಅವಕಾಶ ನೀಡಲಿಲ್ಲ. ಕೆಲವೊಮ್ಮೆ ಅವರು ದುಬಾರಿಯಾಗಬಹುದು, ಆದರೆ ಕನಿಷ್ಠ ಎರಡನೇ ಓವರ್‌ಗೆ ಅವರನ್ನು ಪ್ರಯತ್ನಿಸಬೇಕಿತ್ತು. ಅವರಲ್ಲದೆ ವಿಕೆಟ್‌ಗಳನ್ನು ಯಾರು ಪಡೆಯುತ್ತಾರೆ? ಪಾರ್ಟ್-ಟೈಮ್ ಬೌಲರ್‌ಗಳು ಸಾಮಾನ್ಯವಾಗಿ ಓವರ್ ಮುಗಿಸುವುದು ಹೇಗೆ ಎಂಬ ಚಿಂತನೆಯಲ್ಲಿರುತ್ತಾರೆ. ರಿಯಾನ್ ಪರಾಗ್ ತಮ್ಮ ನಾಯಕತ್ವದ ಬಗ್ಗೆ ಆಲೋಚಿಸಬೇಕಾಗಿದೆ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ಪರಾಗ್‌ ಅವರು ಸರಿಯಾದ ನಾಯಕನೇ ಎಂಬುದನ್ನು ಮರು ಚಿಂತಿಸಬೇಕಾದ ಅಗತ್ಯವಿದೆ,” ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

RR vs SRH: ಸೂರ್ಯವಂಶಿ ಶತಕ ವ್ಯರ್ಥ, ರಾಜಸ್ಥಾನ್‌ಗೆ ಆಘಾತ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್‌!

ರಿಯಾನ್‌ ಪರಾಗ್‌ ಬ್ಯಾಟಿಂಗ್‌ ವೈಫಲ್ಯದ ಬಗ್ಗೆ ಸೆಹ್ವಾಗ್‌ ಬೇಸರ

ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲೂ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿಯಿತು. ಅವರು 9 ಎಸೆತಗಳಲ್ಲಿ ಕೇವಲ 7 ರನ್‌ಗಳಿಸಿ ಔಟಾದರು. 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಆರ್ ನಾಯಕ ಪರಾಗ್, ಎಂಟು ಪಂದ್ಯಗಳಿಂದ 112.82ರ ಸ್ಟ್ರೈಕ್‌ರೇಟ್ ಮತ್ತು 12.57ರ ಸರಾಸರಿಯಲ್ಲಿ ಒಟ್ಟು 88 ರನ್‌ಗಳನ್ನು ಗಳಿಸಿದ್ದಾರೆ. ನಾಯಕ ರನ್‌ಗಳನ್ನು ಗಳಿಸಲು ವಿಫಲವಾದರೆ, ಅದು ಮೈದಾನದಲ್ಲಿನ ನಿರ್ಧಾರಗಳಿಗೆ ಪರಿಣಾಮ ಬೀರುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.

“ನಾನು ನಾಯಕನಾಗಿದ್ದಾಗ ರನ್‌ಗಳನ್ನು ಗಳಿಸಲು ವಿಫಲವಾದರೆ, ಅದು ಶೇಕಡಾ 100 ನನ್ನ ನಾಯಕತ್ವದ ಮೇಲೆ ಪರಿಣಾಮ ಬೀರುತ್ತದೆ. ನಾನು ನನ್ನ ರನ್‌ಗಳ ಬಗ್ಗೆ ಯೋಚಿಸುತ್ತಿರುತ್ತೇನೆ, ಜೊತೆಗೆ ವೈಭವ್ ಸುರ್ಯವಂಶಿ 36 ಚೆಂಡುಗಳಲ್ಲಿ 100 ರನ್ ಗಳಿಸಿದಾಗ, ನಾನು ಹಿರಿಯ ಮತ್ತು ಅನುಭವಿಯಾದರೂ ಏಕೆ ಅಷ್ಟು ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಯೋಚಿಸುತ್ತೇನೆ,” ಎಂದು ಮಾಜಿ ಆರಂಭಿಕ ತಿಳಿಸಿದ್ದಾರೆ.