ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಪ್ಲೇಆಆಫ್ಸ್‌ಗೆ ಈಗಾಗಲೇ ಅರ್ಹತೆಯನ್ನು ಪಡೆದಿದೆ. ಇದೀಗ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ (SRH) ಎದುರು ಆಡಲು ಎದುರು ನೋಡುತ್ತಿದೆ. ಈ ಪಂದ್ಯ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿ ತಂಡ ಈ ಪಂದ್ಯದಲ್ಲಿ ಸೋತರೆ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುತ್ತಾ? ಅಥವಾ ಎರಡನೇ ಸ್ಥಾನಕ್ಕೆ ಇಳಿಯುತ್ತಾ? ಇದರ ಬಗ್ಗೆ ಈ ಸುದ್ದಿಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ, ಇಲ್ಲಿಯರೆಗೂ ಆಡಿದ 13 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇದೀಗ 18 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಆ ಮೂಲಕ ನಾಕ್‌ಔಟ್ ಹಂತದಲ್ಲಿ ಮೊದಲನೇ ಕ್ವಾಲಿಫೈಯರ್ ಪಂದ್ಯಕ್ಕೆ ಸಿದ್ದತೆಯನ್ನು ನಡೆಸುತ್ತಿದೆ. ಆದರೆ, ಮೊದಲನೇ ಕ್ವಾಲಿಫೈಯರ್‌ನಲ್ಲಿ ಎಸ್‌ಆರ್‌ಎಸ್ ಅಥವಾ ಗುಜರಾತ್ ಟೈಟನ್ಸ್ ಪೈಕಿ ಒಂದು ತಂಡದ ಎದುರು ಸೆಣಸಲಿದೆ. ಅಂದ ಹಾಗೆ ಈ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಇದೇ ಎಸ್‌ಆರ್‌ಎಚ್ ವಿರುದ್ಧ ಆರ್‌ಸಿಬಿ ಗೆದ್ದಿತ್ತು,ಇದೀಗ ಅದೇ ಲಯವನ್ನು ಅವರದೇ ತವರು ನೆಲದಲ್ಲಿ ತೋರಲು ಬೆಂಗಳೂರು ತಂಡ ಲೆಕ್ಕಾಚಾರ ಹಾಕಿಕೊಂಡಿದೆ.
SRH vs RCB: ಟೇಬಲ್ ಟಾಪರ್ ಆರ್‌ಸಿಬಿಗೆ ಸವಾಲೊಡ್ಡಿತೇ ಸನ್‌ರೈಸರ್ಸ್?
ಎಸ್‌ಆರ್‌ಎಚ್ ಎದುರು ಸೋತರೆ ಅಗ್ರ ಸ್ಥಾನ ಕಳೆದುಕೊಳ್ಳುತ್ತಾ ಆರ್‌ಸಿಬಿ?
ಸದ್ಯ ಆರ್‌ಸಿಬಿ ತಂಡ 18 ಅಂಕಗಳ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಇದರ ಜೊತೆಗೆ +1.065ರ ನೆಟ್ ರನ್‌ರೇಟ್ ಹೊಂದಿದೆ. ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಲಾ 16 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇಆಫ್ಸ್ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ. ಈ ಎರಡೂ ತಂಡಗಳಿಗೂ 18 ಅಂಕಗಳನ್ನು ಕಲೆ ಹಾಕಲು ಅವಕಾಶವಿದೆ. ತನ್ನ ತನ್ನ ಕೊನೆಯ ಲೀಗ್ ಪಂದ್ಯಗಳನ್ನು ಗೆದ್ದುಕೊಂಡರೆ ಈ ತಂಡಗಳು ಕೂಡ 18 ಅಂಕಗಳನ್ನು ಹೊಂದಲಿವೆ. ಈ ಎರಡೂ ತಂಡಗಳ ಪೈಕಿ ಉತ್ತಮ ರನ್‌ರೇಟ್ ಹೊಂದಿದ ತಂಡ ಅಗ್ರ ಎರಡರಲ್ಲಿ ಅವಕಾಶ ಪಡೆಯಬಹುದು.
IPL playoffs scenario: ಕೆಕೆಆರ್ ತಂಡದ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ?
ಆದರೆ, ಆರ್‌ಸಿಬಿ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ಎದುರು ಕಡಿಮೆ ಅಂತರದಲ್ಲಿ ಸೋತರೂ ಅತ್ಯುತ್ತಮ ರನ್‌ರೇಟ್ ಆಧಾರದ ಮೇಲೆ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲಿದೆ. ಒಂದು ವೇಳೆ ದೊಡ್ಡ ಅಂತರದಲ್ಲಿ ಸೋತರೆ, ಆಗ ಎರಡನೇ ಸ್ಥಾನಕ್ಕೆ ಕುಸಿಯಬಹುದು. ಅಂದ ಹಾಗೆ, ಆರ್‌ಸಿಬಿ ಲೀಗ್ ಹಂತವನ್ನು ಕನಿಷ್ಠ ಎರಡನೇ ಸ್ಥಾನವನ್ನು ಮುಗಿಸಲು ಅವಕಾಶವಿದೆ. ಆದರೆ, ಇಲ್ಲಿ ದೊಡ್ಡ ಅಂತರದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಷ್ಟೆ. ಎಸ್‌ಆರ್‌ಎಚ್ ರನ್ ರೇಟ್ +0.350 ರಷ್ಟಿದ್ದು, ಗುಜರಾತ್ ರನ್‌ರೇಟ್ +0.400 ರಷ್ಟಿದೆ.
2026ರ ಐಪಿಎಲ್ ಪಾಯಿಂಟ್ಸ್ ಟೇಬಲ್
ಪ್ಲೇಆಫ್ಸ್‌ನಲ್ಲಿ ನಾಲ್ಕನೇ ಸ್ಥಾನ ಯಾವ ತಂಡಕ್ಕೆ?
ಈಗಾಗಲೇ ಮೂರು ತಂಡಗಳ ಪ್ಲೇಆಫ್ಸ್ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ. ಇದೀಗ ಇನ್ನುಳಿದ ಒಂದು ಸ್ಥಾನಕ್ಕೆ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬಲವಾದ ಪೈಪೋಟಿ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ 14 ಅಂಕಗಳನ್ನು ಕಲೆ ಹಾಕಲು ಅವಕಾಶವಿದ್ದರೂ ಬಹುತೇಕ ಟೂರ್ನಿಯಿಂದ ಹೊರ ಬಿದ್ದಿವೆ ಎಂದು ಹೇಳಬಹುದು. ಅಂದ ಹಾಗೆ ಕೆಕೆಆರ್ ಹಾಗೂ ಪಿಬಿಕೆಎಸ್ ತಂಡಗಳ ಪ್ಲೇಅಫ್ಸ್ ಭವಿಷ್ಯ ರಾಜಸ್ಥಾನ್ ರಾಯಲ್ಸ್ ಕೈಯಲ್ಲಿದೆ. ಆರ್‌ಆರ್ ತಂಡ ಮೇ 24 ರಂದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಗೆದ್ದರೆ, ಪಂಜಾಬ್, ಕೋಲ್ಕತಾ, ಡೆಲ್ಲಿ ಹಾಗೂ ಚೆನ್ನೈ ತಂಡಗಳು ಅಧಿಕೃತವಾಗಿ ಎಲಿಮಿನೇಟ್ ಆಗಲಿವೆ. ಒಂದು ವೇಳೆ ಆರ್‌ಆರ್ ಸೋತರೆ, ಪಂಜಾಬ್ ಹಾಗೂ ಕೋಲ್ಕತಾ ಪೈಕಿ ಕೊನೆಯ ಲೀಗ್ ಗೆದ್ದ ತಂಡ ನಾಕ್‌ಔಟ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಈ ಎರಡೂ ತಂಡಗಳು ಗೆದ್ದರೂ ರನ್ ರೇಟ್ ಆಧಾರದ ಮೇಲೆ ಒಂದು ತಂಡ ಪ್ಲೇಆಫ್ಸ್‌ಗೆ ಪ್ರವೇಶ ಮಾಡಲಿದೆ.