ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಸ್ಥಾನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಂದಿದ್ದು ನಾಯಕತ್ವಕ್ಕಾಗಿ? ಅಸಲಿ ಸತ್ಯ ಬಾಯ್ಬಿಟ್ಟ ಸಂಜು ಸ್ಯಾಮ್ಸನ್‌!

IPL 2026: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿರುವ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಅವರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವವನ್ನು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಬಗ್ಗೆ ಊಹಾಪೋಹಗಳನ್ನು ಸ್ವತಃ ಸಂಜು ಸ್ಯಾಮ್ಸನ್‌ ಅವರೇ ತಳ್ಳಿ ಹಾಕಿದ್ದಾರೆ.

ಸಿಎಸ್‌ಕೆ ನಾಯಕತ್ವದ ಬಗ್ಗೆ ಸಂಜು ಹೇಳಿಕೆ.

ಚೆನ್ನೈ: ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಟ್ರೇಡ್‌ ಡೀಲ್‌ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡಕ್ಕೆ ಬಂದಿದ್ದ ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ (Sanju Samson), ಸದ್ಯ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು 10 ಪಂದ್ಯಗಳಿಂದ 402 ರನ್‌ಗಳ ಮೂಲಕ ಸಿಎಸ್‌ಕೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಇದರಲ್ಲಿ ಎರಡು ಶತಕಗಳನ್ನು ಕೂಡ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡದ ನಾಯಕತ್ವಕ್ಕೆ ಸಂಜು ಸ್ಯಾಮ್ಸನ್‌ ಅವರನ್ನು ಪರಿಗಣಿಸಬಹುದೆಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸ್ವತಃ ಸಂಜು ಸ್ಯಾಮ್ಸನ್‌ ಅವರೇ ಪ್ರತಿಕ್ರಿಯಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಅವರು ಸಿಎಸ್‌ಕೆ ತಂಡಕ್ಕೆ ಬಂದಾಗಿನಿಂದಲೂ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಂಎಸ್‌ ಧೋನಿ ನಿವೃತ್ತಿ ಪಡೆಯುವ ಅಂಚಿನಲ್ಲಿದ್ದು, ಋತುರಾಜ್‌ ಗಾಯಕ್ವಾಡ್‌ ಅವರಿಂದ ನಾಯಕತ್ವವನ್ನು ಸಂಜು ಸ್ಯಾಮ್ಸನ್‌ಗೆ ನೀಡಬಹುದು ಎಂಬ ಬಗ್ಗೆ ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಏಕೆಂದರೆ ಹಿಂದೆ ಹಲವು ವರ್ಷಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಋತುರಾಜ್‌ ಗಾಯಕ್ವಾಡ್‌ ಅವರಿಗಿಂತ ನಾಯಕತ್ವದ ಅನುಭವದಲ್ಲಿ ಸಂಜು ಮುಂಚೂಣಿಯಲ್ಲಿದ್ದಾರೆ. 2022 ರಿಂದಲೂ ಗಾಯಕ್ವಾಡ್‌ ಸಿಎಸ್‌ಕೆ ನಾಯಕತ್ವದಲ್ಲಿ ಮುಂದುವರಿದಿದ್ದಾರೆ.

CSK vs LSG ಪಂದ್ಯಕ್ಕೆ ಹಾಜರಾಗುವ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಮಹತ್ವದ ಸಲಹೆ

ಸಿಎಸ್‌ಕೆಗೆ ನಾಯಕನಾಗುವ ಎಲ್ಲಾ ಸಾಮರ್ಥ್ಯ ಸಂಜು ಸ್ಯಾಮ್ಸನ್‌ಗೆ ಇದೆ, ಆದರೆ ನಾಯಕತ್ವವನ್ನು ನೀಡುವುದು ಅಥವಾ ಬಿಡುವುದು ಸಿಎಸ್‌ಕೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದು. ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ತಂಡವನ್ನು ಋತುರಾಜ್‌ ಗಾಯಕ್ವಾಡ್‌ ಹೇಗೆ ಮುನ್ನಡೆಸಲಿದ್ದಾರೆಂಬುದು ಇಲ್ಲಿ ಪ್ರಮುಖ ಸಂಗತಿಯಾಗಲಿದೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದ ನಿಮಿತ್ತ ಸಂಜು ಸ್ಯಾಮ್ಸನ್‌, ಸಿಎಸ್‌ಕೆ ನಾಯಕತ್ವದ ಬಗ್ಗೆ ಪ್ರಾಮಾಣಿಕ ಹೇಳಿಕೆಯನ್ನು ನೀಡಿದ್ದಾರೆ. ತಂಡದ ನಾಯಕನಾಗಬೇಕೆಂಬ ಬೇಡಿಕೆ ನನ್ನಲ್ಲಿ ಇಲ್ಲ, ಆದರೆ, ತಂಡಕ್ಕಾಗಿ ನನ್ನ ಕಡೆಯಿಂದ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.

“ಇಲ್ಲ. (ಸಿಎಸ್‌ಕೆ ನಾಯಕತ್ವದ ವಿಚಾರ ನನ್ನ ಮನಸ್ಸಿಗೆ ಬಂದಿತ್ತೇ ಎಂಬ ಪ್ರಶ್ನೆಗೆ). ನನಗೆ ಈಗಾಗಲೇ ಒಂದು ತಂಡ ಇತ್ತು. ನನ್ನದೇ ಆದ ಒಂದು ಸ್ಥಾನವೂ ಇತ್ತು. ಅಲ್ಲಿಂದ ಹೊರಬಂದು ಮತ್ತೊಂದು ತಂಡಕ್ಕೆ ಸೇರ್ಪಡೆಯಾಗಬೇಕೆಂದು ನಾನು ಬಯಸಿದ್ದೆ. ಅಂಥ ಸಂದರ್ಭದಲ್ಲಿ ಬೇಡಿಕೆಗಳನ್ನು ಇಡುವ ಅವಕಾಶವೇ ಇರುವುದಿಲ್ಲ. ನಿಜ ಹೇಳಬೇಕೆಂದರೆ, ನೀವು ಹೊಸ ತಂಡವೊಂದಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ, ಅಲ್ಲಿ ಬೇಡಿಕೆಗಳನ್ನು ಇಟ್ಟುಕೊಂಡು ಹೋಗುವುದಿಲ್ಲ ಎಂಬುದನ್ನು ನಾನು ಕಲಿತಿದ್ದೇನೆ,” ಎಂದು ಸಂಜು ಸ್ಯಾಮ್ಸನ್ ಅವರು ಅಭಿನವ್ ಮುಕುಂದ್‌ ನಡೆಸಿದ ‘ಸೂಪರ್ ಕಿಂಗ್ಸ್’ ಪಾಡ್‌ಕಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ ಎಂ.ಎಸ್‌ ಧೋನಿ

“ನೀವು ಅಲ್ಲಿ ಹೋಗಿ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಸ್ವಭಾವದಂತೆ ನಡೆದುಕೊಳ್ಳುತ್ತೀರಿ, ನಿಮ್ಮ ಶ್ರೇಷ್ಠ ಪ್ರದರ್ಶನ ನೀಡುತ್ತೀರಿ. ಅದರ ನಂತರವೇ ಮುಂದಿನ ಹಂತಗಳು ಬರುತ್ತವೆ. ಇನ್ನೊಂದು ವಿಷಯವೇನೆಂದರೆ, ಚೆನ್ನೈಯಲ್ಲಿ ಅನೇಕ ಮಲಯಾಳಿಗಳು ಕೆಲಸ ಮಾಡುತ್ತಿದ್ದಾರೆ. ದುಬೈಯಲ್ಲೂ ಹಲವಾರು ಮಲಯಾಳಿಗಳು ಕೆಲಸ ಮಾಡುತ್ತಿದ್ದಾರೆ. ಮಲಯಾಳಿಗಳನ್ನು ಆಯ್ಕೆ ಮಾಡುವುದಕ್ಕೆ ಕಾರಣ ಏನೆಂದರೆ, ಅವರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಪ್ರತಿಫಲ ನೀಡಲು ಜೀವವನ್ನೇ ಅರ್ಪಿಸುತ್ತಾರೆ. ಸಿಎಸ್‌ಕೆ ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿ ಆಹ್ವಾನಿಸಿದೆ. ನಾನು ಇಲ್ಲಿ ನನ್ನ ಸಂಪೂರ್ಣ ಶಕ್ತಿಯನ್ನು ಅರ್ಪಿಸಲು ಸಿದ್ಧನಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.

ಋತುರಾಜ್‌ ಗಾಯಕ್ವಾಡ್‌ಗೆ ಸಂಜು ಸ್ಯಾಮ್ಸನ್‌ ಮೆಚ್ಚುಗೆ

“ಋತು ನಿಜವಾಗಿಯೂ ಅತ್ಯಂತ ಒಳ್ಳೆಯವರು, ಭಾರತೀಯ ಕ್ರಿಕೆಟ್‌ನ ವಿಭಿನ್ನ ಶೈಲಿಯ ಸೂಪರ್‌ಸ್ಟಾರ್‌. ಅವರು ಖಂಡಿತವಾಗಿಯೂ ಸೂಪರ್‌ಸ್ಟಾರ್‌. ಐಪಿಎಲ್‌ನ ಅತ್ಯಂತ ದೊಡ್ಡ ಫ್ರಾಂಚೈಸಿಗಳಲ್ಲೊಂದನ್ನು ಮುನ್ನಡೆಸುತ್ತಿದ್ದಾರೆ. ಆದರೆ ಸಾಮಾನ್ಯ ಸೂಪರ್‌ಸ್ಟಾರ್‌ಗಳಂತೆ ಅವರು ನಡೆದುಕೊಳ್ಳುವುದಿಲ್ಲ. ಅವರು ನೋಡಲು ಅಥವಾ ಮಾತನಾಡಲು ಆತ್ಮವಿಶ್ವಾಸಿ ವ್ಯಕ್ತಿಯಂತೆ ಕಾಣದೇ ಇರಬಹುದು. ಆದರೆ ನನ್ನ ಅಭಿಪ್ರಾಯದಲ್ಲಿ, ಭಾರತೀಯ ಕ್ರಿಕೆಟ್ ವಲಯದಲ್ಲೇ ಅತ್ಯಂತ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೊಂದಿರುವ ಕ್ರಿಕೆಟಿಗ ಋತುರಾಜ್‌," ಎಂದು ಸಂಜು ಸ್ಯಾಮ್ಸನ್‌ ಗುಣಗಾನ ಮಾಡಿದ್ದಾರೆ.