ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಟೂರ್ನಿಯ (IPL 2026) ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಅಲಂಕರಿಸುವ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ (SRH vs RR) ತಂಡಗಳು ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯ ಇಲ್ಲಿನ ಮುಲ್ಲಾನ್‌ಪುರದ ಮಹರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದ ತಂಡ, ಎರಡನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಹಾಗೂ ಜಿಟಿ ನಡುವೆ ಮೊದಲನೇ ಕ್ವಾಲಿಫೈಯರ್ ಸೋತ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಪ್ಯಾಟ್ ಕಮಿನ್ಸ್ ನಾಯಕತ್ವದ ಎಸ್‌ಆರ್‌ಎಚ್ ತಂಡ, ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಿಂದ 18 ಅಂಕಗಳನ್ನು ಕಲೆ ಹಾಕುವ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು. ಇನ್ನು ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ, 16 ಅಂಕಗಳ ಮೂಲಕ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆದಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಪಡೆಯುವ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶ ಮಾಡಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಿ ಎಸ್‌ಆರ್‌ಎಚ್ ತಂಡವನ್ನು ಮಣಿಸಲು ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ಎದುರು ನೋಡುತ್ತಿದ್ದಾರೆ.
IPL 2026: ʻಒಂದು ವಿಕೆಟ್‌ಗೆ 4.50 ಕೋಟಿ ರು!ʼ- ಐಪಿಎಲ್ ಓನರ್ಸ್‌ಗೆ ನಷ್ಟ ಉಂಟುಮಾಡಿದ ಬೌಲರ್ಸ್!
ಈ ಸೀಸನ್‌ನಲ್ಲಿ ಈ ಎರಡೂ ತಂಡಗಳು ಎರಡು ಬಾರಿ ಕಾದಾಟ ನಡೆಸಿದ್ದವು. ಆದರೆ, ಈ ಎರಡೂ ಪಂದ್ಯಗಳನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆದ್ದು ಪ್ರಾಬಲ್ಯ ಸಾಧಿಸಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಿ ಆರ್‌ಆರ್ ತಂಡವನ್ನು ಮಣಿಸಲು 2016ರ ಚಾಂಪಿಯನ್ಸ್ ಪ್ರಯತ್ನಿಸಲಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ಹೆನ್ರಿಕ್ ಕ್ಲಾಸೆನ್ ಎಸ್‌ಆರ್‌ಎಚ್ ತಂಡದ ಬ್ಯಾಟಿಂಗ್ ಬಲ.
ಪಂದ್ಯದ ವಿವರ
2026ರ ಇಂಡಿಯನ್ ಪ್ರೀಮಿಯರ್ ಲೀಗ್
ಎಲಿಮಿನೇಟರ್ ಪಂದ್ಯ
ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್
ದಿನಾಂಕ: ಮೇ 27, 2026
ಸಮಯ: ಸಂಜೆ 07:30ಕ್ಕೆ
ಸ್ಥಳ: ಮಹರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ಮುಲ್ಲಾನ್‌ಪುರ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ ಹಾಟ್‌ಸ್ಟಾರ್
ʻಇದು ನನ್ನ ನಿರ್ಧಾರವಲ್ಲʼ:IPL 2026 ಟೂರ್ನಿಯಿಂದ ಹೊರಗುಳಿಯಲು ಅಸಲಿ ಕಾರಣ ತೆರೆದಿಟ್ಟ ಯಶ್ ದಯಾಳ್!
ಮುಖಾಮುಖಿ ದಾಖಲೆ
ಒಟ್ಟು ಆಡಿದ ಪಂದ್ಯಗಳು: 23
ಎಸ್‌ಆರ್‌ಎಚ್‌ನ ಗೆಲುವು: 14
ಆರ್‌ಆರ್ ತಂಡದ ಗೆಲುವು: 09
ಪಿಚ್ ರಿಪೋರ್ಟ್
ಎಲಿಮಿನೇಟರ್ ಪಂದ್ಯ ನಡೆಯುವ ಮುಲ್ಲಾನ್‌ಪುರ ಮಹರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದ ಪಿಚ್ ಹೈಸ್ಕೋರಿಂಗ್ ನೆರವು ನೀಡಲಿದೆ. ಇಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ 200ಕ್ಕೂ ಅಧಿಕ ರನ್‌ಗಳು ಮೂಡಿ ಬಂದಿವೆ. ಇದರ ಆಧಾರದ ಮೇಲೆ ಇದು ಬ್ಯಾಟಿಂಗ್ ಸ್ನೇಹಿ ವಿಕೆಟ್ ಎಂದು ಹೇಳಬಹುದು. ಈ ಕಾರಣದಿಂದಲೇ ಟಾಸ್ ಗೆದ್ದ ತಂಡಗಳು ಚೇಸ್ ಮಾಡಲು ಬಯಸುತ್ತವೆ.
IPL 2026: ʻವಿರಾಟ್ ಕೊಹ್ಲಿಯನ್ನು ಹೆಚ್ಚು ಅವಲಂಬಿಸಬೇಡಿʼ-ಆರ್‌ಸಿಬಿಗೆ ಸಂಜಯ್ ಮಾಂಜ್ರೇಕರ್ ವಾರ್ನಿಂಗ್!
ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ಶುಭಂ ದುಬೆ, ದಸೂನ್ ಶಣಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ರವೀಂದ್ರ ಜಡೇಜಾ
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಶಿವಾಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್
ಇಂಪ್ಯಾಕ್ಟ್ ಪ್ಲೇಯರ್: ಟ್ರಾವಿಸ್ ಹೆಡ್