ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs GT ಮೊದಲನೇ ಕ್ವಾಲಿಫೈಯರ್‌ಗೆ ಮಳೆ ಕಾಟ ಇದೆಯಾ? ಧರ್ಮಶಾಲಾ ಹವಾಮಾನ ವರದಿ ಇಲ್ಲಿದೆ!

RCB vs GT weather Forecast: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಮಂಗಳವಾರ ನಡೆಯುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಹವಾಮಾನ ವರದಿ ಇಲ್ಲಿದೆ.

RCB vs GT ಪಂದ್ಯಕ್ಕೂ ಮುನ್ನ ಧರ್ಮಶಾಲಾ ಹವಾಮಾನ ವರದಿ.

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಇಂದು (ಮಂಗಳವಾರ) ನಡೆಯುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ (RCB vs GT) ತಂಡಗಳು ಕಾದಾಟ ನಡಸಲಿವೆ. ಈ ಪಂದ್ಯವನ್ನು ಗೆದ್ದು ನೇರವಾಗಿ ಫೈನಲ್‌ಗೆ ಪ್ರವೇಶ ಮಾಡಲಿದೆ. ಹಾಗಾಗಿ ಈ ಎರಡೂ ತಂಡಗಳ ನಡುವಣ ಈ ಪಂದ್ಯ ಅತ್ಯಂತ ರೋಚಕವಾಗಿರಲಿದೆ.

ಈ ಪಂದ್ಯ ನಡೆಯುವ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದ್ದು, ಇಲ್ಲಿ ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿ ಜೊತೆಗೆ ಫಿಲ್‌ ಸಾಲ್ಟ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ವೆಂಕಟೇಶ್‌ ಅಯ್ಯರ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದರೆ, ದೇವದತ್‌ ಪಡಿಕ್ಕಲ್‌, ರಜತ್‌ ಪಾಟಿದಾರ್‌, ಟಿಮ್‌ ಡೇವಿಡ್‌, ಕೃಣಾಲ್‌ ಪಾಂಡ್ಯ ಒಳಗೊಂಡ ಬ್ಯಾಟಿಂಗ್‌ ವಿಭಾಗ ಅತ್ಯಂತ ಬಲಿಷ್ಠವಾಗಿರಲಿದೆ.

RCB vs GT: ಫಿಲ್‌ ಸಾಲ್ಟ್‌ or ವೆಂಕಟೇಶ್‌ ಅಯ್ಯರ್‌? ಮೊದಲನೇ ಕ್ವಾಲಿಫೈಯರ್‌ಗೂ ಮುನ್ನ ಆರ್‌ಸಿಬಿಗೆ ಟೆನ್ಷನ್‌!

ಆರ್‌ಸಿಬಿ ತಂಡದ ಬೌಲಿಂಗ್ ದಾಳಿಯೂ ಸಮತೋಲನದಿಂದ ಕೂಡಿದೆ. ಜಾಶ್‌ ಹೇಝಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಮತ್ತು ರಸಿಕ್‌ ಸಲಾಂ ದಾರ್‌ ಹೊಸ ಚೆಂಡಿನ ಜೊತೆಗೆ ಡೆತ್ ಓವರ್‌ಗಳಲ್ಲೂ ಪರಿಣಾಮಕಾರಿ ಬೌಲಿಂಗ್‌ ಮೂಲಕ ತಂಡಕ್ಕೆ ಬಲ ತುಂಬಿದ್ದಾರೆ. ಇದರ ಜೊತೆಗೆ ವಿಶ್ವಾಸಾರ್ಹ ಸ್ಪಿನ್ನರ್‌ಗಳು ಮಧ್ಯದ ಓವರ್‌ಗಳಲ್ಲಿ ಪಂದ್ಯದ ಮೇಲಿನ ಹಿಡಿತ ಸಾಧಿಸಲು ನೆರವಾಗಿದ್ದು, ಬೆಂಗಳೂರು ತಂಡಕ್ಕೆ ಹೆಚ್ಚುವರಿ ಮುನ್ನಡೆ ಒದಗಿಸಿದೆ.

ಇನ್ನೊಂದೆಡೆ, ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಸ್ಥಿರ ಪ್ರದರ್ಶನದ ಮಾದರಿಯಾಗಿ ಹೊರಹೊಮ್ಮಿದೆ. ಆರಂಭಿಕ ಬ್ಯಾಟರ್‌ಗಳಾದ ಸಾಯಿ ಸುದರ್ಶನ್‌ ಮತ್ತು ಶುಭಮನ್ ಗಿಲ್ ಹಲವಾರು ಪಂದ್ಯಗಳಲ್ಲಿ ತಂಡಕ್ಕೆ ಭದ್ರ ಆರಂಭ ಒದಗಿಸಿದ್ದಾರೆ. ಅಲ್ಲದೆ, ಮಧ್ಯಮ ಕ್ರಮದ ಬ್ಯಾಟರ್‌ಗಳೂ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿ ತಂಡದ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ.

RCB vs GT ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಆಡ್ತಾರಾ? ಓಪನರ್‌ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜತ್‌ ಪಾಟಿದಾರ್‌!

ಗುಜರಾತ್‌ನ ಶಿಸ್ತುಬದ್ಧ ಬೌಲಿಂಗ್ ಲೈನ್‌ಅಪ್ ನಿರ್ಣಾಯಕವಾಗಬಹುದು. ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ, ಅವರ ವೇಗದ ವ್ಯತ್ಯಾಸಗಳು ಮತ್ತು ಯುದ್ಧತಂತ್ರದ ನಿಯೋಜನೆಯು ಈ ಋತುವಿನಲ್ಲಿ ತಂಡದ ಯಶಸ್ಸಿಗೆ ಕೇಂದ್ರಬಿಂದುವಾಗಿದೆ.

ಧರ್ಮಶಾಲಾದ ಹವಾಮಾನ ವರದಿ

ಧರ್ಮಶಾಲಾ ನಗರದ ಹವಾಮಾನ ಭಾಗಶಃ ಬಿಸಿಲಿನಿಂದ ಕೂಡಿರಲಿದ್ದು, ಮಧ್ಯೆ-ಮಧ್ಯೆ ಸಣ್ಣ ಮಳೆಯಾಗುವ ಸಾಧ್ಯತೆಯೂ ಇದೆ. AccuWeather ವರದಿ ಪ್ರಕಾರ, ಹಗಲಿನ ವೇಳೆ ತಾಪಮಾನ ಸುಮಾರು 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ.

ಪಂದ್ಯ ನಡೆಯುವ ಸಮಯದಲ್ಲಿ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಆರ್ದ್ರತೆ ಶೇ.20 ಮತ್ತು ಮೋಡ ಕವಿದ ಪ್ರಮಾಣ ಶೇ.5ರಷ್ಟಿರಲಿದೆ. ಸಂಜೆ ವೇಳೆಗೆ ಮಳೆಯ ಸಾಧ್ಯತೆ ಶೂನ್ಯಕ್ಕೆ ಇಳಿಯುವ ಸಾಧ್ಯತೆ ಇರುವುದರಿಂದ, ಅಭಿಮಾನಿಗಳು ಸಂಪೂರ್ಣ 40 ಓವರ್‌ಗಳ ಪಂದ್ಯವನ್ನು ನಿರ್ಬಂಧವಿಲ್ಲದೆ ವೀಕ್ಷಿಸುವ ಅವಕಾಶ ದೊರೆಯಬಹುದು.