ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಒಂದೇ ಒಂದು ಪ೦ದ್ಯವನ್ನು ಕೂಡ ಆಡಲಿಲ್ಲ. ಅವರು ಗಾಯಗಳ ಸಮಸ್ಯೆಯಿಂದ ಸೀಸನ್‌ ಪೂರ್ತಿ ಬೆಂಚ್‌ನಲ್ಲಿಯೇ ಕಾಲ ಕಳೆಯಬೇಕಾಯಿತು. ಇದೀಗ ಅವರು 2027ರ ಟೂರ್ನಿಯಲ್ಲಿ ಆಡುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ಸಿಎಸ್‌ಕೆ ತಂಡದಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ(IPL 2026) ಆಡಲು ಎಂಎಸ್‌ ಧೋನಿ (Sanju samson) ಸಾಕಷ್ಟು ಉತ್ಸುಕರಾಗಿದ್ದರು ಹಾಗೂ ಎರಡೂ-ಮೂರೂ ತಿಂಗಳುಗಳಿಗೂ ಮುನ್ನ ಅವರು ಅಭ್ಯಾಸವನ್ನು ಆರಂಭಿಸಿದ್ದರು. ಆದರೆ, ಗಾಯದ ಸಮಸ್ಯೆಗೆ ಒಳಗಾಗಿದ್ದ ಅವರು ಈ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡಲು ಸಾಧ್ಯವಾಗಲಿಲ್ಲ ಹಾಗೂ ಇಡೀ ಟೂರ್ನಿಯುದ್ದಕ್ಕೂ ಅವರು ಬೆಂಚ್‌ ಕಾಯಬೇಕಾಯಿತು. ಇದೀಗ ಅವರು 2027ರ ಐಪಿಎಲ್‌ ಟೂರ್ನಿಯಲ್ಲಿಯೂ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು 45ನೇ ವಯಸ್ಸಿಗೆ ಪದಾರ್ಪಣೆ ಮಾಡಲಿದ್ದಾರೆ. ಒಂದು ವೇಳೆ ಅವರು ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದರೆ, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆಂದು ಇಲ್ಲಿ ವಿವರಿಸಲಾಗಿದೆ.

ಮೊಣ ಕಾಲು ಗಾಯದ ಹೊರತಾಗಿಯೂ ಎಂಎಸ್‌ ಧೋನಿ ಅವರು 2025ರ ಟೂರ್ನಿಯಲ್ಲಿ ಆಡಿದ್ದರು. ಆದರೆ, 2026ರ ಟೂರ್ನಿಯಲ್ಲಿ ಅವರು ಅಪಾಯವನ್ನು ತೆಗೆದುಕೊಳ್ಳಲಿಲ್ಲ. ಅವರು ಆಡದೇ ಇದ್ದರೂ ಡ್ರೆಸ್ಸಿಂಗ್‌ ರೂಂನಲ್ಲಿ ಅವರು ಯುವ ಆಟಗಾರರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ. ಸಿಎಸ್‌ಕೆ ಕ್ಯಾಂಪ್‌ನಲ್ಲಿ ಎಂಎಸ್‌ ಧೋನಿ ಅನುಪಸ್ಥಿತಿ ಅತ್ಯಂತ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ.

ಅಂದ ಹಾಗೆ 2027ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡುವ ಬಗ್ಗೆ ಅನುಮಾನವಿದೆ. ಹಾಗಾಗಿ ಇಂದಿನಿಂದಲೇ ಚೆನ್ನೈ ಫ್ರಾಂಚೈಸಿ ಎಂಎಸ್‌ ಧೋನಿಯ ಸ್ಥಾನವನ್ನು ತುಂಬಬಲ್ಲ ಆಟಗಾರರ ಕಡೆಗೆ ಗಮನ ನೀಡಲಿದೆ. ಈ ಲೆಖನದಲ್ಲಿ ಸಿಎಸ್‌ಕೆ ತಂಡದಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಿದೆ.

2027ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ಕೊಟ್ಟ ಸ್ಟೀಫನ್‌ ಫ್ಲೆಮಿಂಗ್‌!

ಊರ್ವಿಲ್‌ ಪಟೇಲ್‌

ಊರ್ವಿಲ್‌ ಪಟೇಲ್‌ ಇದುವರೆಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 10 ಪಂದ್ಯಗಳನ್ನು ಆಡಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ವಿಶೇಷ ಬ್ಯಾಟರ್ ಆಗಿಯೇ ಕಣಕ್ಕಿಳಿದಿದ್ದಾರೆ. ಆದರೆ, ಅವರು ಪೂರ್ಣ ಪ್ರಮಾಣದ ವಿಕೆಟ್‌ಕೀಪರ್ ಕೂಡ ಆಗಿದ್ದಾರೆ. 27ರ ವಯಸ್ಸಿನ ಉರ್ವಿಲ್ ಅವರಿಗೆ ಇನ್ನೂ ಸಾಕಷ್ಟು ಸಮಯವಿದ್ದು, ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ತಮ್ಮ ಆಟವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶವಿದೆ.

ಅವರು ತಮ್ಮ ಸಮಕಾಲೀನ ಆಟಗಾರರಷ್ಟೇ ಪರಿಣಾಮಕಾರಿಯಾಗಿ ದೊಡ್ಡ ಹೊಡೆತಗಳನ್ನು ಆಡಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. 205.21ರ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿರುವ ಊರ್ವಿಲ್, ತಮ್ಮ ಶಾಟ್ ಆಯ್ಕೆಯಲ್ಲಿ (Shot Selection) ಇನ್ನಷ್ಟು ಸುಧಾರಣೆ ಮಾಡಿಕೊಂಡರೆ, ಮುಂದಿನ ಐಪಿಎಲ್ ಋತುವಿನಲ್ಲಿ ಸಿಎಸ್‌ಕೆ ಪರ ಅತ್ಯುತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಎಂಎಸ್‌ ಧೋನಿ ಇನ್ನೂ ಐಪಿಎಲ್‌ ಪಂದ್ಯ ಆಡದೇ ಇರಲು ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಕಾರ್ತಿಕ್‌ ಶರ್ಮಾ

ಕಾರ್ತಿಕ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್ 2026ರ ಐಪಿಎಲ್ ಮಿನಿ ಹರಾಜಿನಲ್ಲಿ 14.20 ಕೋಟಿ ರುಗಳಿಗೆ ಖರೀದಿಸಿತು. ರಾಜಸ್ಥಾನ್‌ ಮೂಲದ ಈ ವಿಕೆಟ್‌ಕೀಪರ್-ಬ್ಯಾಟರ್ ಋತುವಿನ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರೂ, ಟೂರ್ನಿ ಮುಂದುವರಿದಂತೆ ಅವರ ಆಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು.

ಈ ಯುವ ಆಟಗಾರ 11 ಇನಿಂಗ್ಸ್‌ಗಳಲ್ಲಿ 32.78ರ ಸರಾಸರಿಯಲ್ಲಿ ಹಾಗೂ 136.58ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 295 ರನ್‌ಗಳನ್ನು ಗಳಿಸಿ ಋತುವನ್ನು ಮುಗಿಸಿದರು. ಸ್ಪಿನ್ ಬೌಲಿಂಗ್ ವಿರುದ್ಧ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರ್ತಿಕ್, ತಂಡಕ್ಕೆ ಭರವಸೆಯ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಟಿ20ಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಮೊಹಮ್ಮದ್‌ ಶಮಿ

ಸಂಜು ಸ್ಯಾಮ್ಸನ್‌

ಸಂಜು ಸ್ಯಾಮ್ಸನ್‌ ಅವರನ್ನು ಕಳೆದ ಋತುವಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಟ್ರೇಡ್ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ದೀರ್ಘಕಾಲ ತಂಡವನ್ನು ಮುನ್ನಡೆಸಿದ ಎಂಎಸ್‌ ಧೋನಿ ಅವರ ಸ್ಥಾನವನ್ನು ಭರ್ತಿ ಮಾಡುವ ತಕ್ಷಣದ ಪರಿಹಾರವಾಗಿ ಸ್ಯಾಮ್ಸನ್ ಕಾಣಿಸಿಕೊಂಡಿದ್ದಾರೆ.

2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ, ಮುಂದಿನ ಋತುವಿನಿಂದ ತಂಡದ ನಾಯಕತ್ವವನ್ನು ಸ್ಯಾಮ್ಸನ್ ಅವರಿಗೆ ವಹಿಸಬೇಕು ಎಂಬ ಅಭಿಪ್ರಾಯ ಅನೇಕ ವಲಯಗಳಲ್ಲಿ ಕೇಳಿಬರುತ್ತಿದೆ. 2026ರ ಋತುವಿನಲ್ಲಿ ಸ್ಯಾಮ್ಸನ್ ಕೆಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಕೆಲ ಪಂದ್ಯಗಳಲ್ಲಿ ನಿರೀಕ್ಷೆ ಮೂಡಿಸಲಿಲ್ಲ. ಆದಾಗ್ಯೂ, ಅವರು 14 ಪಂದ್ಯಗಳಲ್ಲಿ 43.36ರ ಸರಾಸರಿ ಹಾಗೂ 165.63ರ ಸ್ಟ್ರೈಕ್‌ರೇಟ್‌ನೊಂದಿಗೆ ಒಟ್ಟು 477 ರನ್‌ಗಳನ್ನು ಸಿಡಿಸಿದ್ದರು.