ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs GT ನಡುವೆ ಐಪಿಎಲ್‌ ಫೈನಲ್‌ ಗೆಲ್ಲುವ ತಂಡವನ್ನು ಆರಿಸಿದ ಇರ್ಫಾನ್‌ ಪಠಾಣ್‌, ಪಿಯೂಷ್‌ ಚಾವ್ಲಾ!

RCB vs GT IPL 2026 Final Prediction: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31 ರಂದು ನಡೆಯಲಿದೆ. ಫೈನಲ್‌ ಪಂದ್ಯವನ್ನು ಗೆಲ್ಲುವ ತಂಡವನ್ನು ಇರ್ಫಾನ್‌ ಪಠಾಣ್‌ ಮತ್ತು ಪಿಯೂಷ್‌ ಚಾವ್ಲಾ ಆಯ್ಕೆ ಮಾಡಿದ್ದಾರೆ.

ಆರ್‌ಸಿಬಿ vs ಜಿಟಿ ನಡುವೆ ಐಪಿಎಲ್‌ ಗೆಲ್ಲುವ ತಂಡವನ್ನು ಆರಿಸಿದ ಪಠಾಣ್‌.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯ (IPL 2026) ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ (RCB vs GT) ತಂಡಗಳು ಸಜ್ಜಾಗುತ್ತಿವೆ. ಮೇ 31 ರಂದು ನಡೆಯುವ ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ವೇದಿಕೆ ಸಿದ್ದವಾಗಿದೆ. ಅಂದ ಹಾಗೆ ಕ್ರಿಕೆಟ್‌ ಪಂಡಿತರು ಈಗಾಗಲೇ ಫೈನಲ್‌ ಪಂದ್ಯವನ್ನು ಗೆಲ್ಲುವ ತಮ್ಮ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಈ ಸಾಲಿಗೆ ಇದೀಗ ಭಾರತ ತಂಡದ ಮಾಜಿ ಆಟಗಾರರಾದ ಇರ್ಫಾನ್‌ ಪಠಾಣ್‌ (Irfan Pathan) ಮತ್ತು ಪಿಯೂಷ್‌ ಚಾವ್ಲಾ ಸೇರ್ಪಡೆಯಾಗಿದ್ದಾರೆ.

ಆರ್‌ಸಿಬಿ ಹಾಗೂ ಜಿಟಿ ನಡುವಣ ಫೈನಲ್‌ ಪಂದ್ಯದ ನಿಮಿತ್ತ ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಭಾಗವಹಿಸಿದ ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ಗೆ ಈ ಬಾರಿ ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ತಂಡ ಯಾವುದೆಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಠಾಣ್‌, ರಜತ್‌ ಪಾಟಿದಾರ್‌ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಆಯ್ಕೆ ಮಾಡಿದ್ದಾರೆ.

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

"ಆರ್‌ಸಿಬಿ ಆಡುತ್ತಿರುವ ಹಾದಿಯನ್ನು ನೋಡಿದಾಗ ಹಾಗೂ ಅದು ಪರಿಪೂರ್ಣ ತಂಡವಾಗಿದೆ. ನೀವು ತಂಡದಲ್ಲಿ ಮ್ಯಾನ್‌ ಟು ಮ್ಯಾನ್‌ ನೋಡಿದಾಗ, ಬಹುತೇಕ ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇದು ಆರ್‌ಸಿಬಿ ಲಾಭದಾಯಕವಾಗಲಿದೆ. ಇನ್ನೂ ದೊಡ್ಡ ವಿರಾಮ ಸಿಕ್ಕಿರುವುದು ಕೂಡ ಆರ್‌ಸಿಬಿಗೆ ಇನ್ನಷ್ಟು ಲಾಭವನ್ನು ತಂದುಕೊಟ್ಟಿದೆ. ಇನ್ನು ಅಹಮದಾಬಾದ್‌ನಲ್ಲಿನ ಕಂಡೀಷನ್ಸ್‌ ಜಿಟಿಗೆ ಲಾಭವಾದರೂ, ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್‌ ಆಟಗಾರರು ಇದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಫೈನಲ್‌ ಪಂದ್ಯವನ್ನು ಗೆಲ್ಲಲಿದೆ," ಎಂದು ಇರ್ಫಾನ್‌ ಪಠಾಣ್‌ ಭವಿಷ್ಯ ನುಡಿದಿದ್ದಾರೆ.

ಗುಜರಾತ್‌ ಟೈಟನ್ಸ್‌ ಪರ ಬ್ಯಾಟ್‌ ಬೀಸಿದ ಪಿಯೂಷ್‌ ಚಾವ್ಲಾ

ಇರ್ಫಾನ್‌ ಪಠಾಣ್‌ ಬಳಿಕ ಭಾರತದ ಮಾಜಿ ಸ್ಪಿನ್ನರ್‌ ಪಿಯೂಷ್‌ ಚಾವ್ಲಾ ಕೂಡ ತಮ್ಮ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡವನ್ನು ಮಣಿಸುವುದು ಜಿಟಿಗೆ ಕಠಿಣವಾದರೂ ಇಲ್ಲಿಗೆ ಕಂಡೀಷನ್ಸ್‌ ಆತಿಥೇಯ ತಂಡಕೆ ನೆರವು ನೀಡಬಹುದೆಂದು ಹೇಳಿದ್ದಾರೆ. ಫೈನಲ್‌ ಪಂದ್ಯವನ್ನು ಗೆಲ್ಲಲು ಜಿಟಿಗೆ ಶೇ 60 ರಷ್ಟು ಇದ್ದರೆ, ಆರ್‌ಸಿಬಿ ಶೇ 40ರಷ್ಟು ಅವಕಾಶ ಎಂದಿದ್ದಾರೆ ಚಾವ್ಲಾ.

RCB vs GT: ಗುಜರಾತ್‌ ಟೈಟನ್ಸ್‌ ತಂಡವನ್ನು ಸೋಲಿಸಲು ಆರ್‌ಸಿಬಿ ರೂಪಿಸಬೇಕಾದ ರಣತಂತ್ರಗಳೇನು?

"ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುತ್ತಿರುವ ಆರ್‌ಸಿಬಿ ತಂಡವನ್ನು ಸೋಲಿಸುವುದು ಗುಜರಾತ್‌ ಟೈಟನ್ಸ್‌ಗೆ ಕಠಿಣವಾಗಬಹುದು. ಆದರೆ, ಒಂದು ಮುಖ್ಯ ಅಂಶವೇನೆಂದರೆ ಈ ಪಂದ್ಯ ನಡೆಯುತ್ತಿರುವುದು ಅಹಮದಾಬಾದ್‌ನಲ್ಲಿ ಹಾಗೂ ಈ ವರ್ಷ ತವರು ಅಂಗಣದಲ್ಲಿ ಪ್ರಾಬಲ್ಯ ಸಾಧಿಸಿರುವ ಏಕೈಕ ತಂಡ ಜಿಟಿ. ಇದು ಒಳ್ಳೆಯ ಪಂದ್ಯವಾಗುವ ಸಾಧ್ಯತೆ ಇದೆ. ಅಂದ ಹಾಗೆ ಜಿಟಿ ಪರವಾಗಿ ನಾನು ಶೇ 60-40ರ ಅನುಪಾತವನ್ನು ನೀಡಲು ಬಯಸುತ್ತೇನೆ," ಎಂದು ಪಿಯೂಷ್‌ ಚಾವ್ಲಾ ತಿಳಿಸಿದ್ದಾರೆ.

ಈ ಸೀಸನ್‌ನಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಮೂರು ಬಾರಿ ಕಾದಾಟ ನಡೆಸಿವೆ. ಇವುಗಳ ಪೈಕಿ ಎರಡರಲ್ಲಿ ಆರ್‌ಸಿಬಿ ಗೆದ್ದಿದ್ದರೆ, ಇನ್ನುಳಿದ ಒಂದರಲ್ಲಿ ಗುಜರಾತ್‌ ಗೆದ್ದಿದೆ. ಲೀಗ್‌ ಹಂತದ ಮೊದಲನೇ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ, ಜಿಟಿಯನ್ನು ಮಣಿಸಿತ್ತು. ನಂತರ ಅಹಮದಾಬಾದ್‌ನಲ್ಲಿ ಆರ್‌ಸಿಬಿಯನ್ನು ಜಿಟಿ ಮಣಿಸಿತ್ತು. ಆದರೆ, ಮೊದಲನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಆರ್‌ಸಿಬಿ 92 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಅಂದ ಹಾಗೆ ಆರ್‌ಸಿಬಿಯ ಅಹಮದಾಬಾದ್‌ನಲ್ಲಿ ಸೋಲು ಜಿಟಿ ಪಾಳಯದಲ್ಲಿ ವಿಶ್ವಾಸವನ್ನು ಮೂಡಿಸಿದೆ.